ಮಲೇಷ್ಯಾ ಮಾಸ್ಟರ್ಸ್: ಕೆರೊಲಿನಾ ಎದುರು ಸೋತು ನಿರ್ಗಮಿಸಿದ ಸೈನಾ

ಕೌಲಾಲಂಪುರ್, ಜನವರಿ 19: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಕೆರೊಲಿನಾ ಮರಿನ್ ಎದುರು ಸೋತಿರುವ ಭಾರತದ ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಶನಿವಾರ (ಜನವರಿ 19) ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ, ಸದ್ಯ 9ನೇ ಶ್ರೇಯಾಂಕದಲ್ಲಿರುವ ಸೈನಾ ಅವರು ವಿಶ್ವ ನಂ.6 ಆಟಗಾರ್ತಿ ಸ್ಪೇನ್ ಬಲಿಷ್ಟೆ ಕೆರೊಲಿನಾ ಎದುರು ಶರಣಾದರು.
ಸೈನಾ ಅವರನ್ನು ಕೆರೊಲಿನಾ 16-21, 13-21ರ ನೇರ ಸೆಟ್‌ನಿಂದ ಹಿಮ್ಮೆಟ್ಟಿಸಿದರು. ಪಂದ್ಯದ ವೇಳೆ ಸೈನಾ ಉತ್ತಮ ಪೈಪೋಟಿ ನೀಡಿದರಾದರೂ ಪಂದ್ಯವನ್ನು ಜಯಿಸಿಕೊಳ್ಳಲು ಅವರಿಂದಾಗಲಿಲ್ಲ. ಇದಕ್ಕೂ ಮುನ್ನ ಭಾರತದ ಕಿದಂಬಿ ಶ್ರೀಕಾಂತ್ ಕೂಡ ಪುರುಷರ ಸಿಂಗಲ್ಸ್‌ನಲ್ಲಿ ಸೌತ್ ಕೊರಿಯಾದ ಸನ್ ವಾನ್ ಹೋಗೆ ಸೋತು ನಿರ್ಗಮಿಸಿದ್ದರು.
Story first published: Saturday, January 19, 2019, 14:19 [IST]
Other articles published on Jan 19, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications