ಡೆನ್ಮಾರ್ಕ್ ಓಪನ್ ಫೈನಲ್ : ವಿಶ್ವದ ನಂ 1 ಎದುರು ಸೋತ ಸೈನಾ

ಒಡೆನ್ಸೆ, ಅಕ್ಟೋಬರ್ 21: ಭಾರತದ ಹೆಮ್ಮೆಯ ಆಟಗಾರ ಸೈನಾ ನೆಹ್ವಾಲ್ ಅವರು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಹೋರಾಟದ ಪ್ರದರ್ಶನ ನೀಡಿ ಸೋಲು ಕಂಡಿದ್ದಾರೆ.
ಭಾರತದ ಸ್ಟಾರ್ ಆಟಗಾರ ಕೆ.ಶ್ರೀಕಾಂತ್ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋಲು ಕಂಡಿದ್ದರಿಂದ ಸೈನಾ ಮೇಲೆ ಭಾರಿ ನಿರೀಕ್ಷೆ ಹುಟ್ಟುಕೊಂಡಿತ್ತು.
ಆದರೆ, ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ವಿಶ್ವದ ನಂ.1 ಆಟಗಾರ್ತಿ ತಾಯ್ ತ್ಸು ಯಿಂಗ್ ಅವರ ವಿರುದ್ಧ ಸೈನಾ ಅವರು 13-21,21-13 ಹಾಗೂ 6-21ರಲ್ಲಿ ಸೋಲು ಅನುಭವಿಸಿದರು.
ಈ ಸೋಲಿನೊಂದಿಗೆ ತೈವಾನಿನ ಆಟಗಾರ್ತಿ ಯಿಂಗ್ ವಿರುದ್ಧ 10ನೇ ಶ್ರೇಯಾಂಕಿತ ಸೈನಾ ಅವರು ಸತತವಾಗಿ 11 ಬಾರಿ ಸೋಲು ಕಂಡಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ 21-11, 21-12 ರಿಂದ ವಿಶ್ವ ನಂ.19 ಇಂಡೋನೇಷ್ಯಾದ ಗ್ರೇಗೊರಿಯಾ ಮಾರಿಸ್ಕಾ ತುನ್ಜಂಗ್ ವಿರುದ್ಧ ಸುಲಭವಾಗಿ ಗೆದ್ದಿದ್ದರು.
ನಿರಾಶೆ ಮೂಡಿಸಿದ ಶ್ರೀಕಾಂತ್: ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ವಿಶ್ವ ನಂ.6ನೇ ಆಟಗಾರ ಕಿದಂಬಿ ಶ್ರೀಕಾಂತ್ 16-21, 12-21 ಅಂತರದಲ್ಲಿ ಜಪಾನ್ನಿನ ಕೆಂಟೊ ಮೊಮೊಟಾ ಎದುರು ಸೋಲು ಕಂಡಿದ್ದರು.
ಅಶ್ವಿನಿ ಜೋಡಿಗೂ ಸೋಲು: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಕ್ವಾರ್ಟರ್ಫೈನಲ್ನಲ್ಲಿ 14-21, 12-21 ಅಂತರದಲ್ಲಿ ಜಪಾನ್ನಿನ ಅಗ್ರಶ್ರೇಯಾಂಕಿತ ಜೋಡಿ ಯೂಕಿ ಫುಕುಶಿಮಾ ಹಾಗೂ ಸಯಾಕ ಹಿರೊಟಾ ಜೋಡಿಗೆ ಶರಣಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications