'ಒಂಟಿಯಿಂದ ಜಂಟಿ'ಗೆ ಬದಲಾದ ಸೈನಾ ನೆಹ್ವಾಲ್-ಪಾರುಪಳ್ಳಿ ಕಶ್ಯಪ್!

ಹೈದರಾಬಾದ್, ಡಿಸೆಂಬರ್ 14: ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ಒಂಟಿಯಿಂದ ಜಂಟಿಗೆ ಬದಲಾಗಿದ್ದಾರೆ. ತಾವಿಬ್ಬರೂ ಸತಿ-ಪತಿಗಳಾಗಿರುವ ವಿಚಾರವನ್ನು ಟ್ವಿಟರ್ ಮೂಲಕ ಶುಕ್ರವಾರ ಅವರು (ಡಿಸೆಂಬರ್ 14) ಪ್ರಕಟಿಸಿದ್ದಾರೆ.
ಭಾರತದ ಬ್ಯಾಡ್ಮಿಂಟನ್ ಕೋಚ್ ಪಿ ಗೋಪಿಚಂದ್ ಅವರಲ್ಲಿ 2005ರಿಂದಲೂ ತರಬೇತಿ ಪಡೆಯುತ್ತಿರುವ ಸೈನಾ-ಕಶ್ಯಪ್ ಸುಮಾರು 10 ವರ್ಷಗಳಿಂದಲೂ ಡೇಟಿಂಗ್‌ನಲ್ಲಿದ್ದರು ಎನ್ನಲಾಗಿದೆ. ಹೀಗಾಗಿ ಇಬ್ಬರ ಬಗ್ಗೆಯೂ ಗಾಳಿ ಸುದ್ದಿಯೂ ಹಬ್ಬಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ಸ್ಪಷ್ಟನೆ ನೀಡಿದ್ದ ಸೈನಾ, ತಾವಿಬ್ಬರೂ ಸತಿ-ಪತಿಗಳಾಗುತ್ತಿರುವ ವಿಚಾರವನ್ನು ತಿಳಿಸಿದ್ದರು.
28ರ ಹರೆಯದ ಸೈನಾ ಮತ್ತು 32ರ ಹರೆಯದ ಕಶ್ಯಪ್ ವಿವಾಹ ಸಮಾರಂಭದಲ್ಲಿ ಕೋಚ್ ಗೋಪಿಚಂದ್, ತೆಲಂಗಾಣ ಎಂಎಲ್‌ಎ ಕೆಟಿ ರಾಮ ರಾವ್, ಚಿತ್ರನಟ ಚಿರಂಜೀವಿ, ಗವರ್ನರ್ ಎಎಸ್‌ಎಲ್ ನರಸಿಂಹನ್ ಮತ್ತವರ ಪತ್ನಿ ವಿಮಲಾ ನರಸಿಂಹನ್, ಮಾಜಿ ಕ್ರಿಕೆಟಿಗ ವಿ ಚಾಮುಂಡೇಶ್ವರ್‌ನಾಥ್, ಪಿಬಿಎಲ್‌ನ ಹೈದರಾಬಾದ್ ಹಂಟರ್ಸ್ ಫ್ರಾಂಚೈಸಿ ಮಾಲಕ ವಿಆರ್‌ಕೆ ರಾವ್ ಮೊದಲಾದವರು ಉಪಸ್ಥಿತರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications