Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೈನಾ ನೆಹ್ವಾಲ್ ಮುಡಿಗೆ ಮತ್ತೆ ವಿಶ್ವದ ನಂ.1 ಕಿರೀಟ

ಬೆಂಗಳೂರು, ಆಗಸ್ಟ್ 20: ಭಾರತದ ಅಗ್ರಗಣ್ಯ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮತ್ತೊಮ್ಮೆ ತಮ್ಮ ಮುಡಿಗೆ ಮತ್ತೊಮ್ಮೆ ವಿಶ್ವದ ನಂ.1 ಕಿರೀಟ ಏರಿಸಿಕೊಂಡಿದ್ದಾರೆ.

ಇತ್ತೀಚೆಗೆ ಸ್ಪೇನಿನ ಕರೋಲಿನಾ ಮರೀನ್ ವಿರುದ್ಧ ವಿಶ್ವ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತರಾದರೂ ಅಂಕಗಳ ಆಧಾರದ ಮೇಲೆ ಸೈನಾ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಗುರುವಾರ (ಆಗಸ್ಟ್ 20) ದ ಲೆಕ್ಕಾಚಾರದಂತೆ ಸೈನಾ ಅವರು ಎರಡನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಕರೋಲಿನಾ ಅವರು ವಿಶ್ವ ಚಾಂಪಿಯನ್ ಆದರೂ ಎರಡನೆ ಸ್ಥಾನಕ್ಕಿಳಿದಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ ಅವರು 82,792 ಅಂಕಗಳನ್ನು ಗಳಿಸಿ ನಂ.1 ಬಾಡ್ಮಿಂಟನ್ ಪಟು ಎನಿಸಿಕೊಂಡಿದ್ದಾರೆ. ಕರೋಲಿನಾ ಅವರು 80,612 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Jwala-Ashwini climb to 10th


ಕಳೆದ ವಾರ ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಹಂತ ತಲುಪಿದ್ದ ಸೈನಾ ಅವರು ಫೈನಲ್ ನಲ್ಲಿ ಉತ್ತಮ ಆಟ ಪ್ರದರ್ಶಿಸಲು ವಿಫಲರಾಗಿ ಬೆಳ್ಳಿ ಪದಕ ಪಡೆದುಕೊಂಡು ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟು ಎನಿಸಿದ್ದರು.

ಸೈನಾ ಅವರ ಜೊತೆಗೆ ಭಾರತದ ಬಾಡ್ಮಿಂಟನ್ ಡಬ್ಬಲ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅವರು 12ನೇ ಸ್ಥಾನದಿಂದ 10ನೇ ಸ್ಥಾನಕ್ಕೇರಿದ್ದಾರೆ. ಪುರುಷರ ಶ್ರೇಯಾಂಕ ಪಟ್ಟಿಯಲ್ಲಿ ಪರುಪಲ್ಲಿ ಕಶ್ಯಪ್ ಅವರು 2 ಅಂಕ ಗಳಿಸಿ 8ನೇ ಸ್ಥಾನದಲ್ಲಿದ್ದರೆ, ಕಿದಾಂಬಿ ಶ್ರೀಕಾಂತ್ ಅವರು ಒಂದು ಸ್ಥಾನ ಕೆಳಗಿಳಿದು 4ನೇ ಸ್ಥಾನದಲ್ಲಿದ್ದಾರೆ (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+