Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಸೈನಾ ನೆಹ್ವಾಲ್-ಪಾರುಪಳ್ಳಿ ಕಶ್ಯಪ್

Saina Nehwal to tie knot with Parupalli Kashyap on Dec 16

ನವದೆಹಲಿ, ಸೆಪ್ಟೆಂಬರ್ 26: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸಹ ಆಟಗಾರ ಪಾರುಪಳ್ಳಿ ಕಶ್ಯಪ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ ನಲ್ಲಿ ಇಬ್ಬರೂ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲಿದ್ದಾರೆ.

ವರದಿಯೊಂದರ ಪ್ರಕಾರ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಷ್ಯಪ್ ಇಬ್ಬರೂ ಡಿಸೆಂಬರ್ 16ರಂದು ಪರಸ್ಪರ ಸತಿ-ಪತಿಗಳಾಗಲಿದ್ದಾರೆ. ಸುಮಾರು 100 ಮಂದಿ ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 21ರಂದು ಅದ್ದೂರಿ ರಿಸೆಪ್ಶನ್ ನಡೆಯಲಿದೆ.

'ಮದುವೆ ಮೂಲಕ ಇಬ್ಬರನ್ನೂ ಒಂದುಗೂಡಿಸಲು ಎರಡೂ ಕುಟುಂಬದವರು ಯೋಚಿಸಿದ್ದಾರೆ. ಶುಭಕ್ಷಣಕ್ಕೆ ಅಂತಿಮ ದಿನಾಂಕವನ್ನೂ ನಿಗದಿ ಮಾಡಲಾಗಿದೆ. ಡಿಸೆಂಬರ್ 16ರಂದಿನ ಮದುವೆ ಸಮಾರಂಭಕ್ಕೆ ಎಲ್ಲಾ ಸಿದ್ಧತೆಗಳು ನಡೆಯಲಿವೆ' ಎಂದು ಬಲ್ಲ ಮೂಲವೊಂದು ತಿಳಿಸಿದೆ.

ಇಬ್ಬರೂ ಬ್ಯಾಡ್ಮಿಂಟನ್ ಆಟಗಾರರು 2005ರಿಂದ ಗೋಪಿಚಂದ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಸೈನಾ ಅವರು ಸುಮಾರು 20 ಪ್ರಮುಖ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಕಶ್ಯಪ್ ಕೂಡ ವಿಶ್ವ ನಂ. 6ನೇ ಸ್ಥಾನಕ್ಕೇರಿದ್ದ ಪ್ರತಿಭಾವಂತ. ಸದ್ಯ ರ್ಯಾಂಕಿಂಗ್ ನಲ್ಲಿ ಸೈನಾ 10ನೇ ಸ್ಥಾನದಲ್ಲಿದ್ದರೆ, ಕಶ್ಯಪ್ 50ಕ್ಕೂ ಕೆಳಗಿನ ಸ್ಥಾನದಲ್ಲಿದ್ದಾರೆ.

Story first published: Wednesday, September 26, 2018, 18:08 [IST]
Other articles published on Sep 26, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+