For Quick Alerts
ALLOW NOTIFICATIONS  
For Daily Alerts

ಶ್ರೇಯಾಂಕ ಪಟ್ಟಿ ಟಾಪ್ 10ರಿಂದ ಹೊರಬಿದ್ದ ಸೈನಾ ನೆಹ್ವಾಲ್

By Mahesh
Saina out of top 10, Srikanth at 8th spot in BWF ranking

ಬೆಂಗಳೂರು, ಆಗಸ್ಟ್ 12: ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿರುವ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್​ನಲ್ಲಿ (ಬಿಡಬ್ಲ್ಯು ಎಫ್) ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಚೀನಾದಲ್ಲಿ ಇತ್ತೀಚೆಗೆ ಜರುಗಿದ ವಿಶ್ವ ಚಾಂಪಿಯನ್​ಷಿಪ್​ನ ಕ್ವಾರ್ಟರ್​ಫೈನಲ್​ನಲ್ಲಿ ಹಾಲಿ ಚಾಂಪಿಯನ್ ಕ್ಯಾರೋಲಿನ್ ಮರಿನ್​ಗೆ ಸೈನಾ ಸೋಲು ಕಂಡಿದ್ದರು. ಇದರಿಂದ 1 ಸ್ಥಾನ ಕುಸಿತ ಕಂಡು 11ನೇ ಸ್ಥಾನಕ್ಕೆ ಕುಸಿದಿದಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇರ ಸೆಟ್ ಗಳಲ್ಲಿ ಸೈನಾ ಪರಾಭವಗೊಂಡರು. ಒಲಿಂಪಿಕ್ ಚಾಂಪಿಯನ್ ಮರೀನ್ ಅವರು 21-6, 21-11ರಲ್ಲಿ ಗೆಲುವು ಕಂಡಿದ್ದರು.

ಆದರೆ, ಇದೇ ಟೂರ್ನಮೆಂಟ್ ನಲ್ಲಿ ಸತತ 2ನೇ ಬಾರಿಗೆ ಭಾರತದ ಪಿವಿ ಸಿಂಧು ಅವರು ರಜತ ಪದಕ ಗೆದ್ದುಕೊಂಡಿದ್ದರು. ಹೀಗಾಗಿ, ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Saina out of top 10, Srikanth at 8th spot in BWF ranking

ಚೀನಾ ತೈಪೆಯ ತಾಯ್ ಜು ಯಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಜಪಾನ್​ನ ಅಕಾನೆ ಎಮಗುಚಿ 2ನೇ ಸ್ಥಾನದಲ್ಲಿದ್ದಾರೆ.

ಪುರುಷರ ಶ್ರೇಯಾಂಕಪಟ್ಟಿಯಲ್ಲಿ ಕೀಡಂಬಿ ಶ್ರೀಕಾಂತ್ ಅವರು ಕೂಡಾ 2 ಸ್ಥಾನ ಕುಸಿತ ಕಂಡಿದ್ದು, 8ನೇ ಸ್ಥಾನ ಪಡೆದಿದ್ದಾರೆ ಹಾಗೂ ಭಾರತ ಮತ್ತೊಬ್ಬ ಆಟಗಾರ ಎಚ್​ಎಸ್ ಪ್ರಣಯ್ 11ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪುರುಷರ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಸಾತ್ವಿಕ್​ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ 2 ಸ್ಥಾನ ಮೇಲಕ್ಕೇರಿದೆ. ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕ್ವಾರ್ಟರ್ ಫೈನಲ್ ತನಕ ಈ ಜೋಡಿ ತಲುಪಿತ್ತು. ಹೀಗಾಗಿ ಬಾಡ್ಮಿಂಟನ್ ಶ್ರೇಯಾಂಕ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದಿದೆ.

ಮಹಿಳೆಯರ ಡಬಲ್ಸ್​ನಲ್ಲಿ ಭಾರತದ ಯಾವ ಜೋಡಿಯೂ ಅಗ್ರ 20ರ ಒಳಗೆ ಸ್ಥಾನ ಪಡೆದಿಲ್ಲ. ಮಿಶ್ರಡಬಲ್ಸ್​ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಎನ್.ಸಿಕ್ಕಿ ರೆಡ್ಡಿ ಜೋಡಿ ಕೆಲ ಸ್ಥಾನ ಏರಿಕೆ ಕಂಡು 24ನೇ ಸ್ಥಾನದಲ್ಲಿದ್ದಾರೆ.(ಪಿಟಿಐ)

Story first published: Sunday, August 12, 2018, 12:57 [IST]
Other articles published on Aug 12, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+