ಮತ್ತೆ ಹಳೇ ಗುರುವಿನ ಪಾದ ಹಿಡಿದರೇ ಸೈನಾ ನೆಹ್ವಾಲ್?
ಹೈದರಾಬಾದ್, ಸೆಪ್ಟಂಬರ್ 4: ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮ್ಮ ಅಚ್ಚುಮೆಚ್ಚಿನ ಗುರುವಾಗಿದ್ದ ಪುಲ್ಲೇಲ ಗೋಪಿಚಂದ್ ಅವರ ಅಕಾಡೆಮಿಯನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತೆ ಸೇರಿಕೊಂಡಿದ್ದು ಸದ್ಯಕ್ಕೆ ಅಲ್ಲಿಯೇ ಮತ್ತೆ ತರಬೇತಿ ಪಡೆಯಲಾರಂಭಿಸಿದ್ದಾರೆ. ಹೀಗೆ, ಮತ್ತೊಮ್ಮೆ ಗುರುವಿನ ಗುಲಾಮರಾಗಲು ಸೈನಾ ನಿರ್ಧರಿಸಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ, ಪುಲ್ಲೇಲ ಗೋಪಿಚಂದ್ ಅವರ ತರಬೇತಿ ಶಾಲೆಯನ್ನು ಸೈನಾ ತೊರೆದಿದ್ದರು. ಆಗಲೇ, ಗೋಪಿಚಂದ್ ಹಾಗೂ ಸೈನಾ ನೆಹ್ವಾಲ್ ನಡುವೆ ತರಬೇತಿಗೆ ಸಂಬಂಧಿಸಿದಂತೆ ಕೆಲವಾರು ಭಿನ್ನಾಭಿಪ್ರಾಯಗಳಿರುವುದಾಗಿ ಕೆಲ ವರದಿಗಳು ಹರಿದಾಡಿದ್ದವು.
ಆನಂತರ ಅವರು, ವಿಮಲ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಪಡೆಯಲಾರಂಭಿಸಿದ್ದರು. 2014ರಿಂದ ಸೆಪ್ಟಂಬರ್ 2ರಿಂದ ಅವರ ತರಬೇತಿಯು ಬೆಂಗಳೂರಿನಲ್ಲಿ ಅವರ ತರಬೇತಿ ಸಾಗಿತ್ತು.
ಆ ಸಂದರ್ಭದಲ್ಲಿ, ಸೈನಾ ನೆಹ್ವಾಲ್ ಅವರು ವಿಶ್ವದ ನಂಬರ್ ಒನ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದರಲ್ಲದೆ ಹಲವಾರು ಪದಕ, ಗೌರವಗಳನ್ನೂ ಪಡೆದರು.

ತುಟಿಪಿಟಕ್ಕೆಂದಿರಲಿಲ್ಲ
ಈ ಸಂದರ್ಭದಲ್ಲೆಲ್ಲಾ ಅವರು ಗೋಪಿಚಂದ್ ಅವರಿಂದ ಒಂದು ನಿರ್ದಿಷ್ಟ ಅಂತರವನ್ನು ಕಾಪಾಡಿಕೊಂಡಿದ್ದು ಸತ್ಯ. ಈ ಬಗ್ಗೆ ಎಷ್ಟು ಕೆದಕಿದರೂ ಮಾಧ್ಯಮಗಳ ಮುಂದೆ ಇಬ್ಬರೂ ತುಟಿಪಿಟಕ್ಕೆಂದಿರಲಿಲ್ಲ.

ಕಾಮನ್ವೆಲ್ತ್ ಪದಕ ಗೆದ್ದಮೇಲೂ ಮುನಿಸಾಗಿತ್ತು?
ವಿಮಲ್ ಅವರನ್ನು ಗುರುವಾಗಿ ಸ್ವೀಕರಿಸುವುಕ್ಕೂ ಹಿಂದೆ, 2010ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾಗಲೂ ಸೈನಾ ನೆಹ್ವಾಲ್ ಅವರು, ಗೋಪಿಚಂದ್ ಅವರನ್ನು ತೊರೆದು ಭಾಸ್ಕರ್ ಬಾಬು ಎಂಬುವರ ಬಳಿ ತರಬೇತಿ ಪಡೆಯಲು ಮುಂದಾಗಿದ್ದರು. ಹಾಗಾಗಿ, ಈ ಗುರು-ಶಿಷ್ಯೆಯ ನಡುವಿನ ಮುನಿಸು ಹೊಸತೇನಲ್ಲ.

ಗ್ಲಾಸ್ ಗೋನಲ್ಲಿ ಮತ್ತೆ ಬಾಂಧವ್ಯ ವೃದ್ಧಿ?
ಇದೀಗ ಕಾಲ ಬದಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಕಳೆದ ವಾರ ಗ್ಲಾಸ್ ಗೋನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ವೇಳೆ ಗೋಪಿಚಂದ್ ಶಿಷ್ಯರು ತರಬೇತಿ ಪಡೆಯುತ್ತಿದ್ದ ಕಡೆಗೆ ಬಂದು ಸೈನಾ ಅವರೂ ತರಬೇತಿ ಪಡೆದಿದ್ದಾರೆ.

ಗುರುವಿನ ಗುಲಾಮನಾಗದ ಹೊರತು...
ಇದು, ಆಕೆ ತಮ್ಮ ಹಳೆ ಗುರುವಿನ ಪಾದವನ್ನು ಮತ್ತೆ ಹಿಡಿದಿರುವ ಸೂಚನೆಯಾಗಿದೆ ಎಂದು ಕೆಲ ಮಾಧ್ಯಮಗಳು ಬಣ್ಣಿಸಿವೆ. ಗುರು- ಶಿಷ್ಯೆಯರ ಈ ಪುನರ್ ಬಾಂಧವ್ಯವನ್ನು ಈ ಇಬ್ಬರೇ ಪತ್ರಿಕಾಗೋಷ್ಠಿಯನ್ನು ಕರೆದು ಶೀಘ್ರವೇ ಬಿತ್ತರಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications