ಸೀನಿಯರ್ ನ್ಯಾಷನಲ್ಸ್: ಸೀನಿಯರ್ ಸೈನಾಗೆ ಶರಣಾದ ಜೂನಿಯರ್ ಸಿಂಧು!

ಗುವಾಹಟಿ, ಫೆಬ್ರವರಿ 16: ಪ್ರಮುಖ ಸ್ಪರ್ಧೆಯೊಂದರಲ್ಲಿ ಸೀನಿಯರ್ ಮತ್ತು ಜೂನಿಯರ್ ಮುಖಾಮುಖಿಯಾಗುತ್ತಿದ್ದಾರೆಂದರೆ ಆ ಸ್ಪರ್ಧೆಗಿರುವ ಕಿಕ್ಕೇ ಬೇರೆ. ಇಂಥದ್ದೇ ಕುತೂಹಲಕಾರಿ ಬ್ಯಾಡ್ಮಿಂಟನ್ ಪಂದ್ಯವೊಂದರಲ್ಲಿ ಸೀನಿಯರ್ ಸೈನಾ ನೆಹ್ವಾಲ್, ಜೂನಿಯರ್ ಪಿವಿ ಸಿಂಧು ಅವರೆದುರು ಮೇಲುಗೈ ಸಾಧಿಸಿದ್ದಾರೆ.
ಗುವಾಹಟಿಯಲ್ಲಿ ಶನಿವಾರ (ಫೆಬ್ರವರಿ 16) ನಡೆದ ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 23ರ ಹರೆಯದ ಸಿಂಧು ಪ್ರತಿಭೆಯನ್ನು ಪಣಕ್ಕಿಟ್ಟರೆ, 28ರ ಹರೆಯದ ಸೈನಾ ಪ್ರತಿಭೆ ಮತ್ತು ಅನುಭವ ಎರಡನ್ನೂ ಗುರಾಣಿಯಾಗಿ ಬಳಸಿ ಪ್ರಶಸ್ತಿ ಜಯಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ಸೈನಾ, ಸಿಂಧು ವಿರುದ್ಧ 21-18, 21-15ರ ನೇರ ಸೆಟ್ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು. ರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಸೈನಾಗೆ ಲಭಿಸುತ್ತಿರುವ ನಾಲ್ಕನೇ ಚಾಂಪಿಯನ್ ಪಟ್ಟವಿದು. ಕಳೆದ ವರ್ಷ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ಫೈನಲ್‌ನಲ್ಲೂ ಸೈನಾ ಅವರು ಸಿಂಧೂ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Story first published: Saturday, February 16, 2019, 18:16 [IST]
Other articles published on Feb 16, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications