Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಪ್ಯಾರಿಸ್‌ ಒಲಿಂಪಿಕ್ಸ್ ಆರ್ಹತೆ ಪಡೆದ ಏಳು ಭಾರತೀಯ ಬ್ಯಾಡ್ಮಿಂಟನ್ ಆಟಗಾರರು

2024ರ ಬೇಸಿಗೆ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಫ್ರಾನ್ಸ್‌ನ ಪ್ಯಾರಿಸ್‌ ನಗರ ಅತಿಥೇಯ ವಹಿಸಿಕೊಂಡಿದೆ. ಈ ಮಹಾ ಕ್ರೀಡಾಕೂಟವು ಜುಲೈ 26 ಆರಂಭವಾಗುತ್ತಿದ್ದು, ಪದಕ ಗೆದ್ದು ದಾಖಲೆ ಬರೆಯಲು ವಿಶ್ವದ ಎಲ್ಲಾ ಕ್ರೀಡಾಪಟುಗಳು ಸಜ್ಜಾಗುತ್ತಿದ್ದಾರೆ.

ಇದರ ಬೆನ್ನೆಲ್ಲೇ ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಸೇರಿದಂತೆ ಏಳು ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ತಮ್ಮ ಶ್ರೇಯಾಂಕದ ಆಧಾರದ ಮೇಲೆ ನಾಲ್ಕು ವಿಭಾಗಗಳಲ್ಲಿ ಪ್ಯಾರಿಸ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಅರ್ಹತೆ ಪಡೆದಿದ್ದಾರೆ.

Seven Indian badminton players qualified for 2024 Paris Olympics

ಇದಕ್ಕೂ ಮೊದಲು ಅಗ್ರ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಆಟಗಾರರಾದ ಎಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್ ಹಾಗು ಸಿಂಧು ಅವರು ತಮ್ಮ ಒಲಿಂಪಿಕ್ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್ ಫೆಡರೇಶನ್ (ಬಿಡಬ್ಲ್ಯೂಎಫ್) ನಿಗದಿಪಡಿಸಿದ ಕಟ್-ಆಫ್ ದಿನವಾದ ಸೋಮವಾರದಂದು ಎಲ್ಲ ವಿಧಾನಗಳನ್ನು ಪೂರ್ಣಗೊಳಿಸುವ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಪಡೆದುಕೊಂಡಿದ್ದಾರೆ.

Seven Indian badminton players qualified for 2024 Paris Olympics

ಅರ್ಹತಾ ನಿಯಮಗಳ ಪ್ರಕಾರ, ಕಟ್-ಆಫ್ ದಿನದಂದು ತಮ್ಮ ಶ್ರೇಯಾಂಕದ ಆಧಾರದ ಮೇಲೆ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ 16 ಬ್ಯಾಡ್ಮಿಂಟನ್ ಆಟಗಾರರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಹೀಗಾಗಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಸಿಂಧು 12ನೇ ಸ್ಥಾನ ಗಳಿಸಿದರೆ, ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಮತ್ತು ಲಕ್ಷ್ಯ ಸೇನ್‌ ಕ್ರಮವಾಗಿ 9 ಮತ್ತು 13ನೇ ಸ್ಥಾನ ಪಡೆದರು.

Seven Indian badminton players qualified for 2024 Paris Olympics

ಬ್ಯಾಡ್ಮಿಂಟನ್ ಆಟಗಾರರ ವಿಭಾಗಗಳು:

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿರುವ ಪಿವಿ ಸಿಂಧು ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.

Seven Indian badminton players qualified for 2024 Paris Olympics

ಇನ್ನು ವಿಶ್ವದ 3ನೇ ಶ್ರೇಯಾಂಕದ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಧ್ವಜವನ್ನು ಹಾರಿಸಲು ರೆಡಿಯಾಗಿದ್ದಾರೆ. ಇತ್ತ ಮಹಿಳೆಯರ ಡಂಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

Seven Indian badminton players qualified for 2024 Paris Olympics

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡ 7 ಭಾರತೀಯ ಬ್ಯಾಡ್ಮಿಂಟನ್ ಆಟಗಾರರು :

1) ಪಿವಿ ಸಿಂಧು
2) ಎಚ್‌ಎಸ್ ಪ್ರಣಯ್
3) ಲಕ್ಷ್ಯ ಸೇನ್
4) ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ
5) ಚಿರಾಗ್ ಶೆಟ್
6) ತನಿಷಾ ಕ್ರಾಸ್ಟೊ
7) ಅಶ್ವಿನಿ ಪೊನ್ನಪ್ಪ

Story first published: Tuesday, April 30, 2024, 9:28 [IST]
Other articles published on Apr 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+