For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್ ಗೆದ್ದ 'ಸೂಪರ್' ಸೈನಾ

By Mahesh

ಸಿಡ್ನಿ, ಜೂ.29: ಭಾರತದ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿಯನ್ನು ಭಾನುವಾರ ಬೆಳಗ್ಗೆ ಗೆದ್ದು ವಿಜಯೋತ್ಸವ ಆಚರಿಸಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಸ್ಪೇನಿನ ಕ್ಯಾರೋಲಿನಾ ಮರೀನ್ ವಿರುದ್ಧ ನೆರೆ ಸೆಟ್ ಗಳ ಗೆಲುವು ಸಾಧಿಸಿದ್ದಾರೆ.

ಸೈನಾ ನೆಹ್ವಾಲ್ ಅವರು ಈ ವರ್ಷಾರಂಭದಲ್ಲಿ ದೆಹಲಿಯಲ್ಲಿ ನಡೆದ ಇಂಡಿಯಾ ಓಪನ್ ಗ್ರಾಂಡ್ ಪ್ರಿನಲ್ಲಿ ಗೆಲುವು ಸಾಧಿಸಿದ್ದು, ಇದು ಈ ವರ್ಷದ ಎರಡನೆ ಪ್ರಶಸ್ತಿಯಾಗಿದೆ. ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿ ಫೈನಲ್ ನಲ್ಲಿ ಸೈನಾ ಅವರು ಮರೀನ್ ವಿರುದ್ಧ 21-18, 21-11 ರ ನೇರ ಸೆಟ್ ಗಳ ಅಂತರದ ಜಯ ದಾಖಲಿಸಿದರು.

Saina Nehwal wins Australian Open Super Series title

ಇದಕ್ಕೂ ಮುನ್ನ ಸೆಮಿಫೈನಲ್ ನಲ್ಲಿ ಚೀನಾದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಶಿಕ್ಸಿಯಾನ್ ವಾಂಗ್‌ರನ್ನು ಮಣಿಸಿದ್ದರು. ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಫೈನಲ್‌ಗೆ ತಲುಪಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕಿತೆ ಸೈನಾ ಅವರು ವಿಶ್ವದ ನಂ.2ನೇ ಆಟಗಾರ್ತಿ ವಾಂಗ್‌ರನ್ನು 21-19, 16-21, 21-15 ಸೆಟ್‌ಗಳಿಂದ ಮಣಿಸಿದ್ದರು.

ಮತ್ತೆ ಲಯಕ್ಕೆ ಚಿನ್ನದ ಹಕ್ಕಿ : ಸ್ಪೇನಿನ ಮರೀನ್ ಸೋಲಿಸುವ ಮೂಲಕ ಸೈನಾ ಅವರು 750,000 ಯುಎಸ್ ಡಾಲರ್ ನಗದು ಬಹುಮಾನ ಹಾಗೂ ಟ್ರೋಫಿ ಗೆದ್ದಿದ್ದಾರೆ. ಈ ಗೆಲುವಿನ ಮೂಲಕ ಭಾರತದ 'ಗೋಲ್ಡನ್ ಬರ್ಡ್' ಸೈನಾ ಮತ್ತೆ ಲಯಕ್ಕೆ ಮರಳಿದ್ದಾರೆ. ಚೀನಾದ ಆಟಗಾರ್ತಿಯ ವಿರುದ್ದ ಒಟ್ಟಾರೆ ಐದನೆ ಬಾರಿ ಗೆಲುವು ಸಾಧಿಸಿದ ಸಂಭ್ರಮವನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದ ಸೈನಾ...

2012ರಲ್ಲಿ ಫ್ರೆಂಚ್ ಓಪನ್ ಕಳೆದುಕೊಂಡ ಮೇಲೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲೂ ಕಳಪೆ ಪ್ರದರ್ಶನ ನೀಡಿದ್ದರು. ಇದೀಗ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಗ್ರ ಶ್ರೇಯಾಂಕಿತೆ ವಾಂಗ್‌ರನ್ನು ಸದೆಬಡೆದಿದ್ದಲ್ಲದೆ ಪ್ರಶಸ್ತಿ ಗೆದ್ದು ಭಾರತೀಯರ ಕ್ರೀಡಾಪಟುಗಳಲ್ಲಿ ಹರ್ಷ ಮೂಡಿಸಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+