Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್, ಪಿವಿ ಸಿಂಧು ದ್ವಿತೀಯ ಸುತ್ತಿಗೆ ಲಗ್ಗೆ

Sindhu, Saina enter second round of Asia Badminton C’ship

ವೂಹಾನ್, ಏಪ್ರಿಲ್ 24: ಚೀನಾದ ವೂಹಾನ್‌ನಲ್ಲಿ ನಡೆಯುತ್ತಿರುವ ಏಷ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ದ್ವಿತೀಯ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

ಒಲಿಂಪಿಕ್ ಮತ್ತು ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು, ಜಪಾನ್‌ ತಕಾಹಶಿ ಸಾಯಕ ಅವರನ್ನು 21-14, 21-7ರ ನೇರ ಸೆಟ್‌ನಿಂದ ಮಣಿಸಿದರು. ಇಬ್ಬರ ಮಧ್ಯೆ 28 ನಿಮಿಷಗಳ ಕಾದಾಟ ನಡೆಯಿತು. ಮುಂದಿನ ಸುತ್ತಿನಲ್ಲಿ ಸಿಂಧು ಇಂಡೋನೇಷ್ಯಾದ ಚೊಯಿರುನ್ನಿಸಾ ಅವರ ಸವಾಲು ಸ್ವೀಕರಿಸಲಿದ್ದಾರೆ.

ಬುಧವಾರವೇ ನಡೆದ ಮಹಿಳಾ ವಿಭಾಗ ಇನ್ನೊಂದು ಸ್ಪರ್ಧೆಯಲ್ಲಿ ವಿಶ್ವ ನಂ. 9ನೇ ಶ್ರೇಯಾಂಕಿತೆ ಸೈನಾ, ಚೀನಾದ ಹ್ಯಾನ್ ಯು ಎದುರು ಗೆಲುವು ದಾಖಲಿಸಿದರು. ಹ್ಯಾನ್ ಯು ಅವರನ್ನು ಸಿಂಧು 12-21, 21-11, 21-17ರ ರೋಚಕ ಕಾಳಗದಲ್ಲಿ ಹಿಮ್ಮೆಟ್ಟಿಸಿದರು.

Story first published: Wednesday, April 24, 2019, 16:55 [IST]
Other articles published on Apr 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+