Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಓಪನ್: ಗೆಲುವಿನ ನಗೆ ಬೀರಿದ ಭಾರತದ ಸೈನಾ, ಸಿಂಧು, ಶ್ರೀಕಾಂತ್, ಪ್ರಣೀತ್

ಸಿಡ್ನಿ, ಜೂನ್ 21 : ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ನ ನಾಕೌಟ್ ಹಂತದ ಮೊದಲ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಪಿವಿ ಸಿಂಧು ಮತ್ತು ಬಿ ಸಾಯಿ ಪ್ರಣೀತ್ ಗೆಲುವಿನ ನಗೆ ಬೀರಿ ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.

ಕಳೆದ ವಾರ ಇಂಡೋನೇಷ್ಯಾ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದ ಶ್ರೀಕಾಂತ್, ಬುಧವಾರ ಆಸ್ಟ್ರೇಲಿಯಾ ಓಪನ್ ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ತೈಪೆ ಕನ್ ಚಾವೊ ಯು ಅವರನ್ನು 21-13, 21-16 ನೇರ ಸೆಟ್ ಗಳಿಂದ ಮಣಿಸುವ ಮೂಲಕ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರು.

Sindhu, Saina, kidambi Srikanth B Sai Praneeth advance in australian-open

ಇನ್ನು ಸಾಯಿ ಪ್ರಣೀತ್ ಇಂಡೋನೇಷ್ಯಾದ ಟಾಮಿ ಸುಗಿರ್ಟೊರನ್ನು 10-21, 21-12, 21-10 ಸೆಟ್ ಗಳಿಂದ ಜಯ ಗಳಿಸಿದ್ದಾರೆ. ಮುಂದಿನ ಹಂತದಲ್ಲಿ ಸಾಯಿ ಪ್ರಣೀತ್ ಚೀನಾದ ಹುವಾಂಗ್ ಯುಕ್ಸಿಯಾಂಗ್ ರನ್ನು ಮತ್ತು ಕಿದಂಬಿ ಶ್ರೀಕಾಂತ್ ಕೊರಿಯಾದ ಸನ್ ವಾನ್ ಹುರನ್ನು ಎದುರಿಸಲಿದ್ದಾರೆ.

ಇನ್ನು ಮಹಿಳಾ ವಿಭಾಗದಲ್ಲಿ ಸೈನಾ ನೆಹ್ವಾಲ್, ಮಾಜಿ ವಿಶ್ವ ನಂ. 1 ಆಟಗಾರ್ತಿ ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ 21-10, 21-16 ನೇರ ಸೆಟ್ ಗಳಿಂದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.

ಮತ್ತೊಂದೆಡೆ ಮತ್ತೋರ್ವ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಜಪಾನಿನ ಸಯಕಾ ಸಟೊ ವಿರುದ್ಧ 21-17, 14-21, 21-18 ಅಂತರದಿಂದ ಗೆಲುವು ಸಾಧಿಸಿದರು.

ಇನ್ನು ಪಣಯ್ ರಾಯ್ ಮೊದಲ ಸುತ್ತಿನಲ್ಲಿ ಇಂಗ್ಲೆಂಡಿನ ರಾಜೀವ್ ವಿರುದ್ಧ ಸೋಲುಕಂಡು ಟೂರ್ನಿಯಿಂದ ಹೊರ ಬಿದ್ದರು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+