Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Singapore Open: ಕ್ವಾ.ಫೈನಲ್‌ಗೆ ಪ್ರವೇಶಿಸಿದ ಸಿಂಧು, ಸೈನಾ, ಶ್ರೀಕಾಂತ್

Sindhu seals quarterfinal spot at Singapore Open

ಸಿಂಗಾಪುರ್, ಏಪ್ರಿಲ್ 11: ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಸಿಂಗಾಪುರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿಂಗಾಪುರ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

ಗುರುವಾರ (ಏಪ್ರಿಲ್ 11) ನಡೆದ ಮಹಿಳಾ ವಿಭಾಗದ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್ಫೆಲ್ಟ್ ಅವರನ್ನು 21-13, 21-19ರ ಅಂತರದಿಂದ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡರು. ಇಬ್ಬರ ನಡುವೆ 39 ನಿಮಿಷಗಳ ಕಾದಾಟ ನಡೆಯಿತು.

ಮುಂದಿನ ಹಂತದಲ್ಲಿ ವಿಶ್ವ ನಂ.6ನೇ ಆಟಗಾರ್ತಿ ಸಿಂಧು, ಚೀನಾದ ಕೈ ಯನ್ಯಾನ್ ಅವರನ್ನು ಎದುರಿಸಲಿದ್ದಾರೆ. ಇದೇ ಟೂರ್ನಿಯಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಕೂಡ ಕ್ರಮವಾಗಿ ಮಹಿಳಾ ಮತ್ತು ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕ್ವಾರ್ಟರ್‌ಗೆ ಪ್ರವೇಶಿಸಿದ್ದಾರೆ.

Story first published: Thursday, April 11, 2019, 17:52 [IST]
Other articles published on Apr 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+