ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್‌ಗೆ ಕೈತಪ್ಪಿದ ಒಲಿಂಪಿಕ್ಸ್ ಟಿಕೆಟ್

ಹೈದರಾಬಾದ್: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದಕ್ಕಾಗಿ ನಡೆಯುವುದರಲ್ಲಿದ್ದ ಕಡೇಯ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಬುಧವಾರ (ಮೇ 12) ರದ್ದಾಗಿದೆ. ಕೋವಿಡ್ 19 ಕಾರಣದಿಂದಾಗಿ ಸಿಂಗಾಪುರ್ ಓಪನ್ ಟೂರ್ನಿ ರದ್ದಾಗಿದೆ. ಇದು ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಿಬ್ಬರ ನಿರಾಸೆಗೆ ಕಾರಣವಾಗಿದೆ.
ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ರದ್ದಾಗಿರುವುದರಿಂದ ಭಾರತದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಅವರ ಟೋಕಿಯೋ ಒಲಿಂಪಿಕ್ಸ್ ಕನಸು ಭಗ್ನಗೊಂಡಿದೆ. ಯಾಕೆಂದರೆ ಸಿಂಗಾಪುರ್ ಓಪನ್‌ನಲ್ಲಿ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡಿದ್ದರೆ, ಇಬ್ಬರಿಗೂ ಒಲಿಂಪಿಕ್ಸ್‌ಗೆ ಅರ್ಹತೆ ಸಿಗುವ ಸಾಧ್ಯತೆಯಿತ್ತು.
ಸಿಂಗಾಪುರ್ ಓಪನ್ ಟೂರ್ನಿ ನಡೆಯುವುದಕ್ಕೂ ಮುನ್ನವೇ ಸೈನಾ ಮತ್ತು ಶ್ರೀಕಾಂತ್ ಟೋಕಿಯೋ ಒಲಿಂಪಿಕ್ಸ್ ಸಾಧ್ಯತೆಗಳು ತೂಗುಯ್ಯಾಲೆಯಂತಾಗಿತ್ತು. ಈಗ ಬ್ಯಾಡ್ಮಿಂಟನ್ ಟೂರ್ನಿಯೇ ರದ್ದಾಗಿರುವುದರಿಂದ ಶ್ರೀಕಾಂತ್, ಸೈನಾ ನಿರಾಸೆ ಅನುಭವಿಸುವಂತಾಗಿದೆ.
ಟೋಕಿಯೋ ಸಮ್ಮರ್ ಒಲಿಂಪಿಕ್ಸ್ ಕ್ರೀಡಾಕೂಟ ಇದೇ ವರ್ಷ ಜುಲೈ-ಆಗಸ್ಟ್ ನಲ್ಲಿ ನಡೆಯುವುದರಲ್ಲಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications