For Quick Alerts
ALLOW NOTIFICATIONS  
For Daily Alerts

India Open 2023: ಮೊದಲ ಸುತ್ತಿನಲ್ಲೇ ಸೋತು ಪಂದ್ಯಾವಳಿಯಿಂದ ಹೊರಬಿದ್ದ ಪಿವಿ ಸಿಂಧು

Star Shuttler PV Sindhu Knocked Out Of India Open 2023 In First Round

ಇಂಡಿಯಾ ಓಪನ್ 2023ರಲ್ಲಿ ಭಾರತಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಗಿದೆ. ಸ್ಟಾರ್ ಷಟ್ಲರ್ ಪಿವಿ ಸಿಂಧು ಆರಂಭಿಕ ಸುತ್ತಿನಲ್ಲೇ ಸೋಲನುಭವಿಸುವ ಮೂಲಕ ಪಂದ್ಯಾವಳಿಯಿಂದಲೇ ಹೊರ ಬಿದ್ದಿದ್ದಾರೆ.

ಥಾಯ್ಲೆಂಡ್‌ನ ಸುಪಾನಿದಾ ಕಟೆಥಾಂಗ್‌ ವಿರುದ್ಧ 14-21, 20-22 ನೇರ ಸೆಟ್‌ಗಳಲ್ಲಿ ಸೋಲುವ ಮೂಲಕ ಇಂಡಿಯಾ ಓಪನ್ 2023ರ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.

ಮೊದಲ ಸೆಟ್‌ನಲ್ಲಿ ಸುಲಭವಾಗಿ ಸೋಲೊಪ್ಪಿಕೊಂಡ ಪಿವಿ ಸಿಂಧು ಎರಡನೇ ಸುತ್ತಿನಲ್ಲಿ ಹೋರಾಟ ನೀಡುವ ಮೂಲಕ ಗೆಲುವಿನ ಸನಿಹ ಬಂದಿದ್ದರೆ, ಆದರೆ ಅಂತಿಮ ಕ್ಷಣದಲ್ಲಿ ಪಾಯಿಂಟ್‌ಗಳನ್ನು ಬಿಟ್ಟುಕೊಡುವ ಮೂಲಕ ಪಂದ್ಯವನ್ನು ಕಳೆದುಕೊಂಡರು.

ಇಂಡಿಯಾ ಓಪನ್‌ನ ಮಾಜಿ ಚಾಂಪಿಯನ್ ಆಗಿರುವ ವಿಶ್ವದ 7ನೇ ಶ್ರೇಯಾಂಕಿತ ಷಟ್ಲರ್ ಪಿವಿ ಸಿಂಧು, ಕಳೆದ ಆವೃತ್ತಿಯಲ್ಲಿ ಕೂಡ ಸೆಮಿಫೈನಲ್‌ನಲ್ಲಿ ಸುಪಾನಿದಾ ವಿರುದ್ಧ ಸೋತಿದ್ದರು. ಎಡಗೈ ಆಟಗಾರ್ತಿ ಸುಪಾನಿಡಾ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಪಿವಿ ಸಿಂಧು ಉತ್ತಮ ಆಟವನ್ನು ಪ್ರದರ್ಶಿಸಿಲು ಸಾಧ್ಯವಾಗಲಿಲ್ಲ. ಅದರಲ್ಲೂ ಮೊದಲ ಸೆಟ್‌ನಲ್ಲಿ ಪಿವಿ ಸಿಂಧು ಹೆಚ್ಚಿನ ಹೋರಾಟವನ್ನು ನೀಡಲಿಲ್ಲ.

ಎರಡನೇ ಗೇಮ್‌ನಲ್ಲಿ ಕಠಿಣ ಹೋರಾಟ ನಡೆಸಿದರು. 12-17 ರಲ್ಲಿ ಹಿಂದಿದ್ದ ಪಿವಿ ಸಿಂಧು 19-20 ಕ್ಕೆ ಪಂದ್ಯವನ್ನು ತಂದರು, ಕೊನೆಯದಾಗಿ ರೋಚಕವಾಗಿ ಹೋರಾಡಿದರೂ ಕೂಡ 20-22 ರಲ್ಲಿ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.

ಚಾಂಪಿಯನ್ ಆಗುವ ನಿರೀಕ್ಷೆ ಮೂಡಿಸಿದ್ದ ಪಿವಿ ಸಿಂಧು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

Star Shuttler PV Sindhu Knocked Out Of India Open 2023 In First Round

ಎಚ್‌ಎಸ್ ಪ್ರಣಯ್ ವಿರುದ್ಧ ಗೆದ್ದ ಲಕ್ಷ್ಯ ಸೇನ್

ಇಂಡಿಯಾ ಓಪನ್‌ನ ಮತ್ತೊಂದು ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್‌ಗಳಾದ ಲಕ್ಷ್ಯ ಸೇನ್ ಮತ್ತು ಎಚ್‌ಎಸ್ ಪ್ರಣಯ್ ಮುಖಾಮುಖಿಯಾಗಿದ್ದರು.

ಇಬ್ಬರು ಭಾರತದ ಸ್ಟಾರ್ ಆಟಗಾರರ ನಡುವೆ ಗೆಲುವಿಗಾಗಿ ಭರ್ಜರಿ ಹೋರಾಟ ನಡೆದರೂ, ಲಕ್ಷ್ಯ ಸೇನ್ ಸ್ಪಷ್ಟ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. 21-14, 21-15 ಅಂಕಗಳಿಂದ ನೇರ ಸೆಟ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಆಕ್ರಮಣಕಾರಿ ಆಟವಾಡಿದ ಲಕ್ಷ್ಯ ಸೇನ್, ಪ್ರಣಯ್‌ಗೆ ಪಂದ್ಯದಲ್ಲಿ ವಾಪಸಾಗಲು ಅವಕಾಶವನ್ನೇ ನೀಡಲಿಲ್ಲ.

ಹಾಲಿ ಚಾಂಪಿಯನ್‌ಗಳಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ತಮ್ಮ ಪುರುಷರ ಡಬಲ್ಸ್‌ನ ಆರಂಭಿಕ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟೋಫರ್ ಗ್ರಿಮ್ಲಿ ಮತ್ತು ಮ್ಯಾಥ್ಯೂ ಗ್ರಿಮ್ಲಿ ಅವರನ್ನು 21-13 21-15 ರಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

Story first published: Tuesday, January 17, 2023, 23:04 [IST]
Other articles published on Jan 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+