ಸ್ವಿಸ್ ಓಪನ್ 2021: ಫೈನಲ್‌ಗೆ ಲಗ್ಗೆಯಿಟ್ಟ ಭಾರತದ ಪಿವಿ ಸಿಂಧು

ನವದೆಹಲಿ: ಸ್ವಿಸ್ ಓಪನ್ 2021 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್, ಭಾರತದ ಪಿವಿ ಸಿಂಧು ಫೈನಲ್‌ಗೆ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್‌ಗೆ ಸೋಲುಣಿಸಿರುವ ಸಿಂಧು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಶುಕ್ರವಾರ (ಮಾರ್ಚ್ 6) ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ಪಿವಿ ಸಿಂಧು 22-20, 21-10ರ ನೇರ ಸೆಟ್‌ನಿಂದ ಸೋಲಿಸಿದರು. ಇಬ್ಬರ ಮಧ್ಯೆ ಕೇವಲ 43 ನಿಮಿಷಗಳ ಕಾಳಗ ನಡೆಯಿತು.
ಇದಕ್ಕೂ ಮುನ್ನ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಥೈಲ್ಯಾಂಡ್‌ನ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ವಿರುದ್ಧ 21-16, 23-21 ರ ಜಯ ದಾಖಲಿಸಿದ್ದರು. ಇನ್ನೊಂದು ಪಂದ್ಯದಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಅವರು ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ಎದುರು ಸೋತು ನಿರ್ಗಮಿಸಿದ್ದಾರೆ.
ಫೈನಲ್‌ನಲ್ಲಿ ಸಿಂಧು ಒಂದೋ ಒಲಿಂಪಿಕ್ ಚಾಂಪಿಯನ್ ಸ್ಪೇನ್ ಬಲಿಷ್ಠೆ ಕ್ಯರೋಲಿನಾ ಮರಿನ್ ಅಥವಾ ಥೈಲ್ಯಾಂಡ್‌ನ ಪೋರ್ನ್‌ಪಾವಿ ಚೋಚುವಾಂಗ್ ಎದುರು ಕಾದಾಡಲಿದ್ದಾರೆ. ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications