Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿ.ವಿ ಸಿಂಧು ದಾಖಲೆ: ಸ್ವಿಸ್ ಓಪನ್ ಗೆದ್ದ ಎರಡನೇ ಭಾರತೀಯ ಬ್ಯಾಡ್ಮಿಂಟನ್ ತಾರೆ

PV Sindhu

ಭಾರತದ ಏಸ್ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಹೊಸ ದಾಖಲೆ ಮಾಡಿದ್ದು, ಸ್ವಿಸ್ ಓಪನ್ ಗೆದ್ದ ಎರಡನೇ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ. ಥಾಯ್ಲೆಂಡ್‍ನ ಬುಸಾನನ್ ಒಂಗ್‍ಬಮ್ರುಂಗ್‍ಫಾನ್ ವಿರುದ್ಧ ಫೈನಲ್‍ ಪಂದ್ಯ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಫೈಟ್‌ನಲ್ಲಿ ಅಬ್ಬರಿಸಿದ ಪಿ.ವಿ ಸಿಂಧು ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 21-16, 21-8 ನೇರ ಸೆಟ್‌ಗಳಿಂದ ಗೆಲ್ಲುವ ಮೂಲಕ ಟ್ರೋಫಿಯನ್ನ ಮುಡಿಗೇರಿಸಿಕೊಂಡರು. ಈ ಮೂಲಕ ಚಾಂಪಿಯನ್ ಸೈನಾ ನೆಹ್ವಾಲ್ ಬಳಿಕ ಸ್ವಿಸ್ ಓಪನ್ ಗೆದ್ದ ಭಾರತದ ಎರಡನೇ ಬ್ಯಾಡ್ಮಿಂಟನ್ ತಾರೆಯಾಗಿ ಹೊರಹೊಮ್ಮಿದ್ದಾರೆ. ಸೈನಾ ನೆಹ್ವಾಲ್ 2011ರಲ್ಲಿ ಸ್ವಿಸ್ ಓಪನ್ ಗೆದ್ದಿದ್ದರು.

49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬುಸಾನನ್ ವಿರುದ್ಧ ಒಟ್ಟಾರೆ 16ನೇ ಬಾರಿಗೆ ಮುಖಾಮುಖಿಯಾಗಿದ್ದರು. ಈ ಹಿಂದೆ ಬುಸಾನನ್ ಕೇವಲ ಒಂದು ಬಾರಿ ಮಾತ್ರ ಸಿಂಧು ವಿರುದ್ಧ ಮೇಲುಗೈ ಸಾಧಿಸಿದ್ದಳು. ಹೀಗಾಗಿ ಪಿವಿ ಸಿಂಧು ಸುಲಭವಾಗಿ ಪಂದ್ಯ ಜಯಿಸಬಹುದೆಂದು ಊಹಿಸಲಾಗಿತ್ತು. ಅಂತೆಯೇ ಭಾರತದ ಬ್ಯಾಡ್ಮಿಂಟನ್ ತಾರೆ ಗೆದ್ದು ಬೀಗಿದ್ದಾರೆ.

ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ನ ರೋಚಕ ಸೆಮಿಫೈನಲ್‍ನಲ್ಲಿ ಸಿಂಧು, ಥಾಯ್ಲೆಂಡ್‍ನ ಸುಪನಿದಾ ಕಟೆಥೊಂಗ್ ವಿರುದ್ಧ 21-18, 15-21, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

Story first published: Monday, March 28, 2022, 9:52 [IST]
Other articles published on Mar 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+