Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೈಯ್ಯದ್ ಮೋದಿ ಟೂರ್ನಿ: ಸೈನಾ ನೆಹ್ವಾಲ್, ಸಮೀರ್ ಫೈನಲ್‌ಗೆ ಪ್ರವೇಶ

Syed Modi International: Saina Nehwal, Sameer Verma Through to Final

ಲಕ್ನೋ, ನವೆಂಬರ್ 25: ಉತ್ತರ ಪ್ರದೇಶದ ಲಕ್ನೋವಿನಲ್ಲಿನ ಬಾಬೂ ಬನಾರಸಿ ದಾಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೈಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಸಮೀರ್ ವರ್ಮಾ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಶನಿವಾರ (ನವೆಂಬರ್ 24) ನಡೆದ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ರ್ಯಾಂಕಿಂಗ್‌ನ 23ನೇ ಶ್ರೇಯಾಂಕಿತ, ಟೂರ್ನಿಯ ಹಾಲಿ ಚಾಂಪಿಯನ್ ಸಮೀರ್‌ ವರ್ಮಾ, ಇಂಡೋನೇಷ್ಯಾದ ಚಿಕೊ ಔರಾ ದ್ವಿ ವಾರ್ಡ್ಯೋ ಅವರನ್ನು 21-13, 17-21, 21-8ರ ಅಂತರದಿಂದ ಸೋಲಿಸಿದರು. ಇಬ್ಬರ ನಡುವೆ 57 ನಿಮಿಷಗಳ ಕಾದಾಟ ನಡೆಯಿತು.

ಮತ್ತೊಂದು ಪಂದ್ಯದಲ್ಲಿ ಹಿಂದೆ ಮೂರು ಬಾರಿ ಚಾಂಪಿಯನ್‌ ಎನಿಸಿದ್ದ, ವಿಶ್ವ ನಂ. 9ನೇ ಆಟಗಾರ್ತಿ ಸೈನಾ, ಇಂಡೋನೇಷ್ಯಾ ಆಟಗಾರ್ತಿ ರಸ್ಸೆಲ್ ಹರ್ಟಾವನ್ ಅವರನ್ನು 12-21, 21-7, 21-6ರ ಅಂತರದಿಂದ ಸೋಲಿಸಿದರು. ಫೈನಲ್‌ ನಲ್ಲಿ ಸೈನಾ ಅವರು ಚೀನಾದ ಹ್ಯಾನ್ ಯು ಸವಾಲು ಸ್ವೀಕರಿಸಲಿದ್ದಾರೆ.

Story first published: Sunday, November 25, 2018, 12:39 [IST]
Other articles published on Nov 25, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+