Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೈಯ್ಯದ್ ಮೋದಿ ಟೂರ್ನಿ: ಭಾವೀ ಸತಿ-ಪತಿ ಸೈನಾ, ಕಶ್ಯಪ್‌ಗೆ ಸುಲಭ ಜಯ

Syed Modi tournament: Saina Nehwal, Parupalli Kashyap win

ಲಕ್ನೋ, ನವೆಂಬರ್ 21: ಉತ್ತರ ಪ್ರದೇಶದ ಲಕ್ನೋವಿನಲ್ಲಿನ ಬಾಬೂ ಬನಾರಸಿ ದಾಸ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೈಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭವಿಷ್ಯದ ದಂಪತಿಯಾದ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ಕ್ರಮವಾಗಿ ಮಹಿಳಾ, ಪುರುಷರ ಸಿಂಗಲ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಬುಧವಾರ (ನವೆಂಬರ್ 21) ನಡೆದ ಪಂದ್ಯದಲ್ಲಿ ವಿಶ್ವ ನಂ. 9ನೇ ಆಟಗಾರ್ತಿ, ಟೂನಿಯಲ್ಲಿ ಹಿಂದೆ ಮೂರುಸಾರಿ ಚಾಂಪಿಯನ್ ಎನಿಸಿದ್ದ ಸೈನಾ ನೆಹ್ವಾಲ್, ಮಾರಿಷಸ್ ನ ಕೇಟ್ ಫೂ ಕುನೆ ಅವರನ್ನು 21-10, 21-10ರ ನೇರ ಸೆಟ್ ನಿಂದ ಸೋಲಿಸಿದರು. ಪುರುಷರ ಸಿಂಗಲ್ಸ್ ನಲ್ಲಿ ಕಾಮನ್ವೆಲ್ತ್‌ಗೇಮ್ಸ್ ಮಾಜಿ ಚಾಂಪಿಯನ್ ಕಶ್ಯಪ್, ಥೈಲ್ಯಾಂಡ್‌ನ ತನೊಂಗ್ಸಾಕ್ ಸಾನ್ಸ್ಂಬೊಂಬೊಸ್ಕ್ ಅವರನ್ನು 21-14, 21-12ರ ಅಂತರದಿಂದ ಕೆಡವಿದರು.

ಸಿಂಗಾಪುರ್ ಓಪನ್ ಮಾಜಿ ಚಾಂಪಿಯನ್ ಸಾಯ್ ಪ್ರಣೀತ್ ಕೂಡ ಮುನ್ನಡೆ ಸಾಧಿಸಿದ್ದಾರೆ. ರಷ್ಯಾದ ಸೆರ್ಗೆ ಸಿರಂಟ್ ಅವರನ್ನು 21-12 21-10ರಿಂದ ಸೋಲಿಸಿ ಪ್ರಣೀತ್ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ಮಿಶ್ರ ಡಬಲ್ಸ್ ನಲ್ಲಿನ ಹಾಲಿ ಚಾಂಪಿಯನ್ ಪ್ರಣಾವ್-ಸಿಕ್ಕಿ ಜೋಡಿ ಚೀನಾದ ರೆನ್ ಕ್ಸಿಯಾನ್ಗಿ ಮತ್ತು ಝೌ ಚಾಮೊಮಿನ್ ಜೋಡಿಗೆ ಶರಣಾಯಿತು.

Story first published: Wednesday, November 21, 2018, 20:45 [IST]
Other articles published on Nov 21, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+