For Quick Alerts
ALLOW NOTIFICATIONS  
For Daily Alerts

ಥಾಯ್ಲೆಂಡ್ ಓಪನ್: ಸೈನಾ ನೆಹ್ವಾಲ್‌ಗೆ ಸೋಲು, ಕಿಡಂಬಿ ಶ್ರೀಕಾಂತ್‌ಗೆ ಗಾಯ, ಎರಡನೇ ಸುತ್ತಿನಿಂದ ಔಟ್

Thailand Open 2021: Saina Nehwal bows out; Kidambi Srikanth pulls out with calf muscle Injury

ಥಾಯ್ಲೆಂಡ್ ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತೀಯ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಸೋಲು ಕಂಡಿದ್ದು ಹೊರಬಿದ್ದಿದ್ದಾರೆ. ಥಾಯ್ಲೆಂಡ್‌ನ ಆಟಗಾರ್ತಿ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ವಿರುದ್ಧ ಮಹಿಳಾ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ 23-21, 14-21, 16-21 ಅಂಕಗಳಿಂದ ಸೋಲು ಕಂಡು ಹೊರಬಿದ್ದಿದ್ದಾರೆ.

ಥಾಯ್ಲೆಂಡ್ ಓಪನ್‌ನಲ್ಲಿ ಭಾರತೀಯ ಬಳಗ ಮತ್ತೊಂದು ಆಘತವನ್ನು ಅನುಭವಿಸಿದೆ. ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರಿಕಾಂತ್ ಎರಡನೇ ಸುತ್ತಿನ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದು ಅವರು ಎರಡನೇ ಸುತ್ತಿನಲ್ಲಿ ಆಡಲು ಇಳಿಯುವುದಿಲ್ಲ ಎಂಬುದನ್ನು ಬಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ಖಚಿತಪಡಿಸಿದೆ.

"ಬಲಗಾಲಿನ ಸ್ನಾಯುಸೆಳೆತಕ್ಕೆ ಕಿಡಂಬಿ ಶ್ರೀಕಾಂತ್ ಒಳಗಾಗಿದ್ದು ಇಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮುಂದಿನ ಐದು ದಿನಗಳ ಕಾಲ ಅವರ ಗಾಯದ ಚೇತರಿಕೆಯನ್ನು ಗಮನಿಸಲಾಗುತ್ತದೆ. ಅದಾದ ಬಳಿಕ ಕಿಡಂಬಿ ಶ್ರೀಕಾಂತ್ ಅವರ ಮುಂದಿನ ಟೂರ್ನಮೆಂಟ್‌ನ ಪಾಲ್ಗೊಳ್ಳುವಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ಬಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಕಿಡಂಬಿ ಶ್ರೀಕಾಂತ್ ತಮ್ಮ ಮೊದಲ ಸುತ್ತಿನ ಹೋರಾಟದಲ್ಲಿ ಭಾರತೀಯ ಆಟಗಾರನೇ ಆದ ಸೌರಭ್ ವರ್ಮಾ ಅವರನ್ನು ಎದುರಿಸಿ 21-12 ಹಾಗೂ 21-11 ಅಂಕಗಳ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದರು. ಮೊದಲ ಸೆಟ್‌ನ ಆಟದಲ್ಲಿ ಸತತ 9 ಅಂಕಗಳು ಹಾಗೂ ಎರಡನೇ ಸೆಟ್‌ನಲ್ಲಿ ಸತತ 10 ಅಂಕಗಳನ್ನು ಗಳಿಸಿದ್ದರು.

ಗುರುವಾರ ನಡೆದ ಇನ್ನೊಂದು ಪಂದ್ಯದಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡು ಹೊರಬಿದ್ದರು. ಇಂಡೋನೇಶಿಯಾದ ಜೋಡಿಯಾದ ಮೊಹಮ್ಮದ್ ಅಹ್ಸಾನ್ ಹಾಗೂ ಹೆಂದ್ರ ಸೇಟಿಯಾವನ್ ವಿರುದ್ಧದ ಪಂದ್ಯದಲ್ಲಿ 21-19, 21-17 ಅಂಕಗಳ ನೇರ ಸೆಟ್‌ಗಳಿಂದ ಸೋಲು ಕಂಡು ಹೊರಬಿದ್ದಿದ್ದಾರೆ.

Story first published: Thursday, January 14, 2021, 17:53 [IST]
Other articles published on Jan 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+