ಥಾಯ್ಲೆಂಡ್ ಓಪನ್: ಎರಡನೇ ಸುತ್ತಿಗೆ ಕಾಲಿಟ್ಟ ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್

ಭಾರತದ ಬ್ಯಾಡ್ಮಿಂಟನ್ ತಾರೆ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಕಾಮನ್‌ವೆಲ್ತ್‌ಗೇಮ್ಸ್‌ನ ಚಿನ್ನದ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಥಾಯ್ಲೆಂಡ್ ಓಪನ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಕೂಡ ಎದುರಾಳಿಗಳನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲೇಶಿಯಾದ ಕಿಸೋನಾ ಸೆಲ್ವದುರೈ ವಿರುದ್ಧದ ಪಂದ್ಯದಲ್ಲಿ ಸೈನಾ ನೆಹ್ವಾಲ್ 21-15, 21-15 ಅಂತರದ ನೇರ ಸೆಟ್‌ಗಳ ಗೆಲುವು ಸಾಧಿಸಿ ಬೀಗಿದರೆ, ಕಿಡಂಬಿ ಶ್ರೀಕಾಂತ್ ಭಾರತದವರೇ ಆದ ಸೌರಭ್ ವರ್ಮಾ ವಿರುದ್ಧ ನಡದ ಪಂದ್ಯದಲ್ಲಿ 21-12, 21 11 ಅಂಕಗಳ ನೇರ ಸೆಟ್‌ನಿಂದ ವಿಜಯ ಸಾಧಿಸಿ ಎರಡನೇ ಸುತ್ತಿಗೆ ಏರಿದ್ದಾರೆ.
ಸೈನಾ ನೆಹ್ವಾಲ್ ತಮ್ಮ ಎದುರಾಳಿಯ ವಿರುದ್ಧ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯ ಕೇವಲ 36 ನಿಮಿಷಗಳಲ್ಲಿ ಅಂತ್ಯವಾಯಿತು. ಮುಂದಿನ ಸುತ್ತಿನಲ್ಲಿ ಸೈನಾ ನೆಹ್ವಾಲ್ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಕಿಡಂಬಿ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಭಾರತೀಯೇ ಆದ ಹೆಚ್‌ಎಸ್ ಪ್ರಣಾಯ್ ಅಥವಾ ಲೀ ಜಿ ಜಿಯಾ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಭಾರತೀಯ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ಮೊದಲ ಸುತ್ತಿನಲ್ಲಿ ಗೆಲುವು ಕಂಡಿದ್ದು ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಪರುಪಲ್ಲಿ ಕಶ್ಯಪ್ ಮೊದಲ ಸುತ್ತಿನ ಮೂರನೇ ಸೆಟ್‌ನ ಪಂದ್ಯದಲ್ಲಿ ರಿಟೈರ್ಡ್ ಹರ್ಟ್ ಆಗಿ ಪಂದ್ಯದಿಂದ ಹಿಂದಕ್ಕೆ ಸರಿದಿದ್ದು ಮೊದಲ ಸುತ್ತಿನಿಂದಲೇ ಹೊರಬಿದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications