ವಿಶ್ವ ಬಾಡ್ಮಿಂಟನ್ ಚಾಂಪಿಯನ್ ಶಿಪ್ ನಿಂದ ಸೈನಾ ಹೊರಕ್ಕೆ!

ನಂಜಿಂಗ್, ಆಗಸ್ಟ್ 03: ಎರಡು ಬಾರಿ ಚಾಂಪಿಯನ್ ಸ್ಪೇನಿನ ಕರೋಲಿನಾ ಮರೀನ್ ವಿರುದ್ಧ ಸೋಲು ಕಾಣುವ ಮೂಲಕ ಭಾರತದ ಸೈನಾ ನೆಹ್ವಾಲ್ ಅವರು ವಿಶ್ವ ಬಾಡ್ಮಿಂಟನ್ ಚಾಂಪಿಯನ್ ಶಿಪ್ ನಿಂದ ಹೊರ ನಡೆದಿದ್ದಾರೆ. ಆದರೆ, 2009ರಿಂದ ಇಲ್ಲಿವರೆಗೆ ಎಂಟು ವರ್ಷಗಳಲ್ಲಿ ಎಲ್ಲಾ ಕ್ವಾರ್ಟರ್ ಫೈನಲ್ ತಲುಪುವ ಮೂಲಕ ದಾಖಲೆ ಬರೆದಿದ್ದಾರೆ.
ಶುಕ್ರವಾರ (ಆಗಸ್ಟ್ 03) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇರ ಸೆಟ್ ಗಳಲ್ಲಿ ಸೈನಾ ಪರಾಭವಗೊಂಡರು. ಒಲಿಂಪಿಕ್ ಚಾಂಪಿಯನ್ ಮರೀನ್ ಅವರು 21-6, 21-11ರಲ್ಲಿ ಗೆಲುವು ಕಂಡಿದ್ದಾರೆ.
'ವೇಗವಾಗಿ ಆಡುವುದು ನನ್ನ ಹೆಗ್ಗುರುತು, ಅದೇ ಬಲದ ಮೇಲೆ ಇಲ್ಲಿ ತನಕ ಬಂದಿದ್ದೇನೆ. ಟೂರ್ನಮೆಂಟ್ ನ ನೆಚ್ಚಿನ ಆಟಗಾರ್ತಿ ತಾಯ್ ತ್ಸು ಯಿಂಗ್ ಅವರು ಸೋಲು ಕಂಡಿದ್ದಾರೆ. ಹೀಗಾಗಿ, ಚೀನಾದ ಹೆ ಬಿಂಗ್ಜಿಯೋ ವಿರುದ್ಧ ಉತ್ತಮ ಆಟ ಪ್ರದರ್ಶಿಸುವ ವಿಶ್ವಾಸ ಹೊಂದಿದ್ದೇನೆ' ಎಂದು ಮರೀನ್ ಪ್ರತಿಕ್ರಿಯಿಸಿದ್ದಾರೆ.
ಪೊನ್ನಪ್ಪಗೆ ಸೋಲು: ಮಿಶ್ರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಅವರು ಎಂಟರ ಘಟ್ಟದ ಪಂದ್ಯದಲ್ಲಿ ಚೀನಾದ ಹ್ಯುಂಗ್ ಯುಕ್ಸಿಂಗ್ ಹಾಗೂ ಜೆಂಗ್ ಸಾಯಿಸಾಯಿ ವಿರುದ್ಧ 17-21, 10-21ರಲ್ಲಿ ಸೋಲು ಕಂಡರು.
ಪಿವಿ ಸಿಂಧು ಅವರು ಹಾಲಿ ಚಾಂಪಿಯನ್ ನೊಜೊಮಿ ಓಕುಹರಾ ಅವರ ವಿರುದ್ಧ ಶುಕ್ರವಾರ ಸಂಜೆ ಆಡಲಿದ್ದಾರೆ. ಸಾಯಿ ಪ್ರಣೀತ್ ಅವರು ಆರನೇ ಸೀಡೆಡ್ ಕೆಂಟೋ ಮೊಮೊಟೋ ವಿರುದ್ಧ ಸೆಣಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications