ಬಾಕ್ಸಿಂಗ್ ಏಷ್ಯನ್ ಚಾಂಪಿಯನ್‌ಷಿಪ್: ಅಮಿತ್ ಪಂಘಲ್‌ಗೆ ಚಿನ್ನ

ಬ್ಯಾಂಕಾಕ್ , ಏಪ್ರಿಲ್ 26: ಭಾರತದ ಅನುಭವಿ ಬಾಕ್ಸರ್ ಅಮಿತ್ ಪಂಘಲ್ ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಏಷ್ಯನ್ ಚಾಂಪಿಯನ್‌ಷಿಪ್ಸ್‌ನ ಪುರುಷರ 52 ಕೆಜಿ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಟ್ಟರೆ, ಕೂಟದಲ್ಲಿ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕಗಳು ಲಭ್ಯವಾಗಿದೆ.
ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದ ಅಮಿತ್ ಪಂಘಲ್, ಭರ್ಜರಿ ಪ್ರದರ್ಶನ ನೀಡುವ ಮೂಲಕ 52 ಕೆಜಿ ವಿಭಾಗದ ಫೈನಲ್‌ನಲ್ಲಿ ಕೊರಿಯಾದ ಬಾಕ್ಸರ್ ಕಿಮ್ ಇಂಕ್ಯೂ ಎದುರು ಅವೀರೋಧ ನಿರ್ಧಾರದ ಗೆಲುವು ದಕ್ಕಿಸಿಕೊಂಡು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಇತ್ತೇಚೆಗಷ್ಟೇ ಬಲ್ಗೇರಿಯಾದಲ್ಲಿ ನಡೆದ ಸ್ಟ್ರಾಂಡಾ ಮೆಮೋರಿಯಲ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದ ಅಮಿತ್, ಈ ವರ್ಷ ಸತತ ಎರಡನೇ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
2015ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಮಿತ್, ಈ ವರ್ಷ ತಮ್ಮ ಎಂದಿನ 49ಕೆಜಿ ವಿಭಾಗದ ಬದಲಾಗಿ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಇನ್ನು ರಾಷ್ಟ್ರೀಯ ಚಾಂಪಿಯನ್‌ಗಳಾದ ದೀಪಕ್ ಸಿಂಗ್ ಮತ್ತು ಕವಿಂದರ್ ಸಿಂಗ್, ಕ್ರಮವಾಗಿ ಪುರುಷರ 49 ಮತ್ತು 56 ಕೆಜಿ ವಿಭಾಗಗಳ ಫೈನಲ್ಸ್‌ನಲ್ಲಿ ಸೋಲನುಭವಿಸಿ ಬೆಳ್ಳಿ ಪದಕಗಳಿಗೆ ತೃಪ್ತಿಪಟ್ಟಿದ್ದಾರೆ.
ದೀಪಕ್, ಉಜ್ಬೇಕಿಸ್ತಾನದ ನಾಡಿರ್ಯಾನ್ ಮಿರ್ಝಾಮೆಡೊವ್ ವಿರುದ್ಧ ಪ್ರಬಲ ಪೈಪೋಟಿಯ ನಡುವೆ ನಿರಾಸೆ ಅನುಭವಿಸಿದರೆ, ಕವಿಂದರ್ ಸಿಂಗ್ ಉಜ್ಬೇಕಿಸ್ತಾನದ ಮತ್ತೊಬ್ಬ ಬಾಕ್ಸರ್ ಮಿರಾಝಿಝ್ ಬೆಕ್ ಎದುರು ಮಂಡಿಯೂರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications