Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games: ಬಾಕ್ಸಿಂಗ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದು ಸ್ಪೂರ್ತಿಯಾದ ಹೀರೋ ಡಿಂಕೋ ಸಿಂಗ್

ಪ್ರಸ್ತುತ ಭಾರತ ಬಾಕ್ಸಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ತಾರೆಯರನ್ನು ಹೊಂದಿದೆ. ಬಾಕ್ಸಿಂಗ್‌ನಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿ ಗಮನಸೆಳೆಯುತ್ತಿದೆ. ಆದರೆ ಮೊಟ್ಟ ಮೊದಲಬಾರಿಗೆ ಬಾಕ್ಸಿಂಗ್ ಜಗತ್ತಿನಲ್ಲಿ ಭಾರತದ ಹೆಸರು ರಾರಾಜಿಸುವಂತೆ ಮಾಡಿದ ಸಾಧಕನೇ ಡಿಂಕೋ ಸಿಂಗ್.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿರುವ ಡಿಂಕೋ ಸಿಂಗ್ ಅನೇಕ ತಾರೆಯರಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಮಣಿಪುರದಂತಾ ಈಶಾನ್ಯ ಭಾರತದ ರಾಜ್ಯದಲ್ಲಿ ಯುವಕ ಯುವತಿಯರು ಬಾಕ್ಸಿಂಗ್‌ನಂಥಾ ಕ್ರೀಡೆಗೆ ಆಸಕ್ತಿ ವಹಿಸಲು ಪ್ರೇರಣೆಯಾದರು. ಈ ಮೂಲಕ ಭಾರತದ ಕ್ರೀಡಾ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದರು ಡಿಂಕೋ ಸಿಂಗ್.

Asian Games: Story of The Boxing Hero Dingko Singh

ಮಣಿಪುರದ ಸೆಕ್ತಾ ಪ್ರದೇಶದವರಾದ ಡಿಂಕೋ ಸಿಂಗ್ ಹುಟ್ಟಿದ್ದು 1979ರ ಜನವರಿ 1ರಂದು. ಪ್ರಖ್ಯಾತ 'ಬಾಯ್ಸ್ ಆರ್ಮಿ'ಯ ಸದಸ್ಯರೈ ಆಗಿದ್ದವರು ಡಿಂಕೋ ಸಿಂಗ್. 1997ರಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಿದ ಡಿಂಕೋ ಸಿಂಗ್ ಅದೇ ವರ್ಷ ಬಾಂಕಾಕ್‌ನಲ್ಲಿ ನಡೆದ 'ಕಿಂಗ್ಸ್ ಕಪ್‌'ನಲ್ಲಿ ಪದಕವನ್ನು ಗೆದ್ದುಕೊಂಡಿದ್ದರು.

1998ರಲ್ಲಿ ಬ್ಯಾಂಕಾಕ್‌ನಲ್ಲಿ ಏಷ್ಯನ್ ಗೇಮ್ಸ್ ಕ್ರಿಡಾಕೂಟ ನಡೆದಾಗ 54 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು ಡಿಂಕೋ ಸಿಂಗ್. ಇದು ಏಷ್ಯಾ ಕಪ್‌ನಂಥಾ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತ ಗೆದ್ದುಕೊಂಡ ಮೊಟ್ಟ ಮೊದಲ ಚಿನ್ನದ ಪ್ಕ ಎಂಬುದು ಗಮನಾರ್ಹ. ಇವರ ಈ ಸಾಧನೆ ಅನೇಕ ತುವಕರಿಗೆ ಪ್ರೇರಣೆಯಾಯಿತು. ಅದರಲ್ಲಿ ಪ್ರಮುಖರೆಂದರೆ ಮೇರಿ ಕೋಮ್. ಈ ಮೂಲಕ ಭಾರತದಲ್ಲಿ ಬಾಕ್ಸಿಂಗ್‌ನ ಬೆಳವಣಿಗೆಗೆ ಕಾರಣವಾದರು ಡಿಂಕೋ ಸಿಂಗ್.

ಡಿಂಕೋ ಸಿಂಗ್ 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು. ನಂತರ ಬಾಕ್ಸಿಂಗ್ ಕೋಚ್ ಆಗಿ ಕಾರ್ಯನಿಒರ್ವಹಿಸುತ್ತಿದ್ದ ಡಿಂಕೋ ಸಿಂಗ್ 2021ರ ಜನವರಿ 10ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.

Story first published: Thursday, July 20, 2023, 15:30 [IST]
Other articles published on Jul 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+