Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಒಲಿಂಪಿಕ್ಸ್‌ಗೆ‌ ಆರ್ಹತೆ ಪಡೆದ ಭಾರತದ ಮೊದಲ ಪುರುಷ ಬಾಕ್ಸರ್‌

ಜೂನ್‌ 1 ಶನಿವಾರ, ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಬಾಕ್ಸಿಂಗ್ ಒಲಿಂಪಿಕ್ಸ್‌ ಅರ್ಹತಾ ಪಂದ್ಯಗಳ ಸೆಮಿಫೈನಲ್‌ಗೆ ಭಾರತದ ಪುರುಷದ ಸ್ಟಾರ್‌ ಬಾಕ್ಸರ್ ತಲುಪುವ ಮೂಲಕ 2024ರ ಪ್ಯಾರಿಸ್ ಕ್ರೀಡಾಕೂಟಕ್ಕೆ ಟಿಕೆಟ್‌ ಪಡೆದುಕೊಂಡಿದ್ದಾರೆ.

ಭಾರತದ ಬಾಕ್ಸರ್ ನಿಶಾಂತ್ ದೇವ್ ಅವರು ಶುಕ್ರವಾರ ನಡೆದ 71 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೊಲ್ಡೊವಾದ ವಸಿಲೆ ಸೆಬೊಟಾರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. 5-0 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ನಿಶಾಂತ್‌ ಅರ್ಹತೆ ಪಡೆದರು ಮೊದಲ ಪರುಷ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Indian first male boxer to qualify for 2024 Paris Olympics

ನಿಶಾಂತ್‌ ದೇವ್‌ ಅವರು ಹಿಂದಿನ ಅರ್ಹತಾ ಪಂದ್ಯಗಳಲ್ಲಿ ಒಲಿಂಪಿಕ್ ಕೋಟಾವನ್ನು ಕಳೆದುಕೊಂಡಿದ್ದರು. ಈ ಬಾರಿ ಕ್ವಾರ್ಟರ್-ಫೈನಲ್‌ನಲ್ಲಿ ವಸಿಲೆ ಸೆಬೊಟರಿ ಅವರನ್ನು ಸೋಲಿಸಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆರ್ಹತೆ ಪಡೆದಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ ಆರ್ಹತೆ ಪಡೆದ ಬಾಕ್ಸರ್‌ಗಳು

ನಿಶಾಂತ್‌ ದೇವ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆರ್ಹತೆ ಪಡೆದ 4ನೇ ಬಾಕ್ಸರ್ ಆಗಿದ್ದಾರೆ.‌‌ ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್ (50 ಕೆಜಿ), ಪ್ರೀತ್ ಪವಾರ್ (54 ಕೆಜಿ) ಮತ್ತು ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಈಗಾಗಲೇ ಪ್ಯಾರಿಸ್‌ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಮತ್ತೊಂದೆಡೆ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಮಾಜಿ ಯೂತ್ ವರ್ಲ್ಡ್ ಚಾಂಪಿಯನ್ ಭಾರತದ ಅಂಕುಶಿತಾ ಬೊರೊ ಅವರು ಆರ್ಹತೆ ಪಡೆಯುವಲ್ಲಿ ವಿಫಲವಾಗಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸ್ವೀಡನ್‌ನ ಮಾಜಿ ಯುರೋಪಿಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಆಗ್ನೆಸ್ ಅಲೆಕ್ಸಿಸ್ಸನ್ ವಿರುದ್ಧ 2-3 ಅಂಕಗಳ ಅಂತರದ ಸೋಲು ಕಂಡಿದ್ದಾರೆ. ಹೀಗಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆರ್ಹತೆ ಪಡೆಯವ ಅವಕಾಶ ಅಂಕುಶಿತಾ ಅವರಿಂದ ದೂರ ಸರಿದಿದೆ.

Story first published: Saturday, June 1, 2024, 7:42 [IST]
Other articles published on Jun 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+