Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಐಬಿಎ Ranking: ಮೇರಿ ಕೋಮ್ ಈಗ ವಿಶ್ವ ನಂ.1 ಮಹಿಳಾ ಬಾಕ್ಸರ್

Mary Kom becomes world No 1 boxer in latest AIBA rankings

ನವದೆಹಲಿ, ಜನವರಿ 10: ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರು ವಿಶ್ವ ನಂ.1 ಬಾಕ್ಸರ್ ಆಗಿ ಗಮನ ಸೆಳೆದಿದ್ದಾರೆ. ಇಂಟರ್‌ ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ಪ್ರಕಟಿಸಿರುವ ನೂತನ ರ್ಯಾಂಕಿಂಗ್‌ನಲ್ಲಿ ಮೇರಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ಬಾಕ್ಸಿಂಗ್‌ನಲ್ಲಿ ವಿಶ್ವವೇ ಭಾರತದತ್ತ ತಿರುಗುವಂತೆ ಮಾಡಿದ್ದ ಭಾರತದ ಹೆಮ್ಮೆ ಕೋಮ್ ಕಳೆದ ನವೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ಮೇರಿಯ ಈ ಸಾಧನೆ ಅವರನ್ನು ಮಹಿಳೆಯರ 48 ಕೆಜಿ ವಿಭಾಗದ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ತಂದು ನಿಲ್ಲಿಸಿದೆ.

ರ್ಯಾಂಕಿಂಗ್‌ ಟೇಬಲ್‌ನಲ್ಲಿ 1700 ಪಾಯಿಂಟ್ಸ್‌ಗಳೊಂದಿಗೆ ಅಗ್ರ ಆವರಿಸಿರುವ ಮೇರಿಗೀಗ 36ರ ಹರೆಯ. ಉಕ್ರೇನ್‌ನ ಒಕೊಟಾ ಹನ್ನಾ (1100 ಪಾಯಿಂಟ್ಸ್‌) ದ್ವಿತೀಯ, ನಾರ್ತ್ ಕೊರಿಯಾದ ಕಿಮ್ ಹೈಯಾಂಗ್-ಮಿ ತೃತೀಯ, ಜಪಾನ್‌ನ ವಾಡಾ ಮಡೋಕ ಚತುರ್ಥ ಮತ್ತು ರೋಮ್‌ನ ಡ್ಯುಟಾ ಸ್ಟೆಲುಟಾ ಐದನೇ ಸ್ಥಾನದಲ್ಲಿದ್ದಾರೆ.

Story first published: Thursday, January 10, 2019, 16:54 [IST]
Other articles published on Jan 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+