Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಪದಕ ಖಾತ್ರಿ ಪಡಿಸಿದ ಪೂಜಾ ರಾಣಿ

kavinder singh bist boxers

ಹೊಸದಿಲ್ಲಿ, ಏಪ್ರಿಲ್‌ 19: ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಎಎಸ್‌ಬಿಸಿ ಎಲೈಟ್‌ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅನುಭವಿ ಬಾಕ್ಸರ್‌ ಪೂಜಾ ರಾಣಿ, ಮಹಿಳೆಯರ 81 ಕೆ.ಜಿ ವಿಭಾಗದಲ್ಲಿ ಪದಕ ಖಾತ್ರಿ ಪಡಿಸಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ನೇರವಾಗಿ ಸೆಮಿಫೈನಲ್‌ ಅರ್ಹತೆ ಪಡೆದುಕೊಂಡಿರುವ 2 ಬಾರಿಯ ಚಾಂಪಿಯನ್‌ ಪೂಜಾ ರಾಣಿಗೆ ಈ ಮೂಲಕ ಕನಿಷ್ಠ ಕಂಚಿನ ಪದಕ ಲಭ್ಯವಾಗಲಿದೆ.

ಇದೇ ವೇಳೆ ಪುರುಷರ ವಿಭಾಗದಲ್ಲಿ ಭಾರತದ ಸ್ಟಾರ್ ಬಾಕ್ಸರ್‌ ಹಾಗೂ ಏಚ್ಯನ್‌ ಗೇಮ್ಸ್‌ ಚಾಂಪಿಯನ್‌ ಅಮಿತ್‌ ಫಂಗಲ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿದದ್ದಾರೆ. ಆದರೆ, ಈ ಹಂತದಲ್ಲಿ ಭಾರತೀಯ ಬಾಕ್ಸರ್‌ಗೆ ಕಠಿಣ ಸವಾಲು ಎದುರಾಗಿದ್ದು, ಒಲಿಂಪಿಕ್‌ ಚಾಂಪಿಯನ್‌ ಉಜ್ಬೇಕಿಸ್ತಾನದ ಹಸನ್ಬೊಯ್‌ ದುಮಾತೊವ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಅಮಿತ್‌ ಉತ್ತಮ ಫಾರ್ಮ್‌ನಲ್ಲಿದ್ದು ಇದೇ ವರ್ಷ ಸ್ಟ್ರಾಂಡಾ ಬಾಕ್ಸಿಂಗ್‌ ಟೂರ್ನಿಯಲ್ಲಿ ಸ್ವರ್ಣ ಸಾಧನೆ ಮಾಡಿದ್ದಾರೆ. ಇದೀಗ ಏಷ್ಯನ್‌ ಚಾಂಪಿಯನ್‌ಷಿಪ್‌ನ 52 ಕೆಜಿ ವಿಭಾಗದಲ್ಲು ಚಿನ್ನಕ್ಕೆ ಕೊರಳೊಡ್ಡುವ ವಿಶ್ವಾಸ ಹೊಂದಿದ್ದಾರೆ.

ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ

ಮಹಿಳೆಯರ 51 ಕೆಜಿ ವಿಭಾಗದಲ್ಲಿ ಜೂನಿಯರ್‌ ಬಾಕ್ಸಿಂಗ್‌ನ ಮಾಜಿ ವಿಶ್ವ ಚಾಂಪಿಯನ್‌ ನಿಖತ್‌ ಝರೀನ್‌, ಮೊದಲ ಸುತ್ತಿನಲ್ಲಿ ಕಾಂಬೋಡಿಯಾದ ಸ್ರೇ ಪೊ ನಾವ್‌ ವಿರುದ್ಧ ಸ್ಪರ್ಧಿಸಲಿದ್ದಾರೆ. ಆದರೆ, ಅವರಿಗೆ ಮುಂದಿನ ಹಂತಗಳಲ್ಲಿ ವಿಶ್ವ ಶ್ರೇಷ್ಠ ಬಾಕ್ಸರ್‌ಗಳನ್ನು ಎದುರಾಗುವ ಸಾಧ್ಯತೆ ಇದೆ.

Story first published: Friday, April 19, 2019, 15:07 [IST]
Other articles published on Apr 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+