SA20: ಮೊದಲ ಪಂದ್ಯದಲ್ಲೇ ಎದುರಾಳಿ ತಂಡಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಜೋಫ್ರಾ ಆರ್ಚರ್

ಗಾಯದ ಸಮಸ್ಯೆಯಿಂದ ಬರೋಬ್ಬರಿ 541 ದಿನಗಳಿಂದ ಕ್ರಿಕೆಟ್‌ನಿಂದ ದೂರವಿದ್ದ ಜೋಫ್ರಾ ಆರ್ಚರ್ ಮತ್ತೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಎಸ್‌ಎ 20 ಲೀಗ್‌ನಲ್ಲಿ ಎಂಐ ಕೇಪ್ ಟೌನ್ ಪರವಾಗಿ ಆಡುತ್ತಿರುವ ಆರ್ಚರ್, ಉದ್ಘಾಟನಾ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಎದುರಾಳಿ ತಂಡದ ಬ್ಯಾಟರ್ ಗಳಿಗೆ ಖಡಕ್ಕಾಗಿಯೇ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಮಿನಿ ಐಪಿಎಲ್ ಎಂದೇ ಬಿಂಬಿತವಾಗಿರುವ ಎಸ್‌ಎ20 ಲೀಗ್‌ಗೆ ಜನವರಿ 10ರಂದು ಅದ್ದೂರಿ ಚಾಲನೆ ದೊರೆತಿದೆ. ಎಂಐ ಕೇಪ್ ಟೌನ್ ಮತ್ತು ಪರ್ಲ್ ರಾಯಲ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಎಂಐ ಕೇಪ್‌ಟೌನ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಬೇಬಿ ಎಬಿಡಿ ಎಂದೇ ಪ್ರಸಿದ್ಧವಾಗಿರುವ ಡೆವಾಲ್ಡ್ ಬ್ರೆವಿಸ್ 41 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿ ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ ಪರ್ಲ್ ರಾಯಲ್ಸ್ ಎಂಐ ಕೇಪ್‌ಟೌನ್ ಬೌಲಿಂಗ್ ಎದುರು 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 142 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಜೋಫ್ರಾ ಆರ್ಚರ್, ಓಲೀ ಸ್ಟೋನ್, ಸ್ಯಾಮ್ ಕರನ್, ರಶೀದ್ ಖಾನ್‌ರಂತಹ ಘಟಾನುಘಟಿ ಬೌಲಿಂಗ್ ಪಡೆಯನ್ನು ಹೊಂದಿರುವ ಎಂಐ ಕೇಪ್‌ಟೌನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತು.

3 ವಿಕೆಟ್ ಪಡೆದು ಮಿಂಚಿದ ಆರ್ಚರ್
541 ದಿನಗಳ ನಂತರ ಪಂದ್ಯವನ್ನಾಡಿದ ಜೋಫ್ರಾ ಆರ್ಚರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಓವರ್ ಮೇಡನ್ ಸಹಿತ 4 ಓವರ್ ಬೌಲಿಂಗ್ ಮಾಡಿದ ಅವರು, 27 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
18 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದರೂ, ಜೋಫ್ರಾ ಆರ್ಚರ್ ಬೌಲಿಂಗ್ ವೇಗ ಕಡಿಮೆಯಾಗಿಲ್ಲ. ಅವರು 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದರು. ಆರಂಭಿಕ ಆಟಗಾರ ವಿಹಾನ್ ಲುಬ್ಬೆ, ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್, ಫೆರಿಸ್ಕೋ ಆಡಮ್ಸ್ ವಿಕೆಟ್ ಪಡೆದರು. 19ನೇ ಓವರ್ ನಲ್ಲಿ ಕೇವಲ 2 ರನ್ ಬಿಟ್ಟುಕೊಡುವ ಮೂಲಕ ಪರ್ಲ್ ರಾಯಲ್ಸ್ ಅನ್ನು ಕಟ್ಟಿಹಾಕಿದರು.
ICC ODI Ranking: ಅದ್ಭುತ ಬ್ಯಾಟಿಂಗ್ ನಂತರ ಏಕದಿನ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡ ಕೊಹ್ಲಿ, ರೋಹಿತ್

ರಶೀದ್ ಖಾನ್ ಪ್ರಶಂಸೆ
ಕೇಪ್ ಟೌನ್ ತಂಡದ ನಾಯಕ ರಶೀದ್ ಖಾನ್ ಪಂದ್ಯದ ಮುಕ್ತಾಯದ ನಂತರ ಜೋಫ್ರಾ ಆರ್ಚರ್ ಬೌಲಿಂಗ್ ಬಗ್ಗೆ ಮಾತನಾಡಿದರು. ಆರ್ಚರ್ ಬೌಲಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. "ಜೋಫ್ರಾ ಆರ್ಚರ್ ಅದ್ಭುತವಾಗಿ ಪುನರಾಗಮನ ಮಾಡಿದ್ದಾರೆ. 18 ತಿಂಗಳ ನಂತರ ವಾಪಸಾದಾಗ ಈ ರೀತಿ ಆಡುವುದು ಕಷ್ಟ, ಅಭ್ಯಾಸದ ವೇಳೆ ಅವರ ಬೌಲಿಂಗ್ ನೋಡಿದಾಗ ಅವರು ಆಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ತಿಳಿದಿತ್ತು. ಅವರ ಜೊತೆ ಆಡಲು ಸಂತೋಷವಾಗಿದೆ" ಎಂದು ಹೇಳಿದರು.
2021ರ ಮಾರ್ಚ್‌ನಲ್ಲಿ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಜೋಫ್ರಾ ಆರ್ಚರ್ ಕೊನೆಯ ಬಾರಿಗೆ ಕ್ರಿಕೆಟ್ ಆಡಿದ್ದರು. ಬೆನ್ನು ಮೊಣಕೈ ಸಮಸ್ಯೆ, ಒತ್ತಡದ ಮುರಿತದ ನಂತರ ಅವರು ಅಂದಿನಿಂದ 18 ತಿಂಗಳು ಕ್ರಿಕೆಟ್ ಆಡಲು ಸಾಧ್ಯವಾಗಿರಲಿಲ್ಲ.

ಐಪಿಎಲ್‌ನಲ್ಲಿ ಆಡಲಿರುವ ಆರ್ಚರ್
2023ರ ಐಪಿಎಲ್‌ನಲ್ಲಿ ಜೋಫ್ರಾ ಆರ್ಚರ್ ಆಡುವುದು ಖಚಿತವಾಗಿದೆ. 2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 8 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತು. ಗಾಯದ ಸಮಸ್ಯೆಯ ಕಾರಣ ಅವರು ಕಳೆದ ಆವೃತ್ತಿಯಲ್ಲಿ ಆಡಲಿಲ್ಲ. ಆದರೂ ಮುಂಬೈ ಇಂಡಿಯನ್ಸ್ ಅವರನ್ನು ಬಿಡುಗಡೆ ಮಾಡಲಿಲ್ಲ.
2023ರ ಐಪಿಎಲ್‌ನಲ್ಲಿ ಜೋಫ್ರಾ ಆರ್ಚರ್ ಮತ್ತು ಜಸ್ಪ್ರೀತ್ ಬುಮ್ರಾ ಇಂದೇ ತಂಡದಲ್ಲಿ ಆಡಲಿದ್ದು, ಈ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications