2023ರಲ್ಲಿ ಭಾರತದಲ್ಲೇ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆಯೋಜನೆ

ಅಂತಾರಾಷ್ಟ್ರೀಯ ಬಾಕ್ಸಿಂಗ್ ಆಡಳಿತ ಮಂಡಳಿಗೆ ಅಗತ್ಯ ಶುಲ್ಕವನ್ನು ಪಾವತಿಸದ ಕಾರಣಕ್ಕಾಗಿ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆಯೋಜನೆ ಹಕ್ಕುಗಳನ್ನು ಭಾರತವು ಕಳೆದುಕೊಂಡ ಎರಡು ವರ್ಷಗಳ ನಂತರ, ದೇಶವು 2023ರಲ್ಲಿ ನವದೆಹಲಿಯಲ್ಲಿ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲಿದೆ.
ಭಾರತವು ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಅನ್ನು ಎಂದಿಗೂ ನಡೆಸಿಲ್ಲ. ಆದರೆ 2006 ಮತ್ತು 2018ರಲ್ಲಿ ನವದೆಹಲಿಯಲ್ಲಿ ಚಾಂಪಿಯನ್‌ಶಿಪ್‌ಗಳನ್ನು ನಡೆಸಿದ ನಂತರ ದೇಶದಲ್ಲಿ ಎಲೈಟ್ ಮಹಿಳೆಯರ ಚಾಂಪಿಯನ್‌ಶಿಪ್ ಮೂರನೇ ಬಾರಿಗೆ ನಡೆಯಲಿದೆ.
"ನಾವು ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನ ಹೋಸ್ಟಿಂಗ್ ಹಕ್ಕನ್ನು ಪಡೆದುಕೊಂಡಿದ್ದೇವೆ. 2023ರ ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ನೋಡುತ್ತಿದ್ದೇವೆ," ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಪ್ರಧಾನ ಕಾರ್ಯದರ್ಶಿ ಹೇಮಂತ ಕಲಿತಾ ಪಿಟಿಐಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) ಅಧ್ಯಕ್ಷ ಉಮರ್ ಕ್ರೆಮ್ಲೆವ್ ಅವರು ಭಾರತಕ್ಕೆ ತಮ್ಮ ಮೊದಲ ಭೇಟಿಯಲ್ಲಿದ್ದಾರೆ ಮತ್ತು ಪ್ರವಾಸದ ಸಮಯದಲ್ಲಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ದಿನಾಂಕಗಳನ್ನು ಅಂತಿಮಗೊಳಿಸಲಿದ್ದಾರೆ.
"ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ನಾವು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) ಅಧ್ಯಕ್ಷರೊಂದಿಗೆ ಕುಳಿತು ಅವರ ಪ್ರವಾಸದ ಸಮಯದಲ್ಲಿ ಒಪ್ಪಂದಕ್ಕೆ ಬರುತ್ತೇವೆ," ಎಂದು ಹೇಮಂತ ಕಲಿತಾ ತಿಳಿಸಿದ್ದಾರೆ. ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುವ ಸಾಧ್ಯತೆ ಇದೆ.

ಆತಿಥೇಯ ಶುಲ್ಕವನ್ನು ಪಾವತಿಸಲು ವಿಫಲವಾದ ನಂತರ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) 2021ರ ಈವೆಂಟ್‌ನ ಹೋಸ್ಟಿಂಗ್ ಹಕ್ಕುಗಳನ್ನು ಸೆರ್ಬಿಯಾಕ್ಕೆ ಬಿಟ್ಟುಕೊಟ್ಟಿದ್ದರಿಂದ ಭಾರತಕ್ಕೆ ಈವೆಂಟ್‌ನ ಹೋಸ್ಟಿಂಗ್ ಹಕ್ಕುಗಳು ಮಹತ್ವದ ಬೆಳವಣಿಗೆಯಾಗಿದೆ.
ಟರ್ಕಿಯಲ್ಲಿ ನಡೆದ ಮಹಿಳೆಯರ ಈವೆಂಟ್‌ನ ಕೊನೆಯ ಆವೃತ್ತಿಯಲ್ಲಿ, ಭಾರತವು ಫ್ಲೈ-ವೇಟ್ ವಿಭಾಗದಲ್ಲಿ ನಿಖತ್ ಜರೀನ್ ಅವರ ಚಿನ್ನ ಸೇರಿದಂತೆ ಮೂರು ಪದಕಗಳೊಂದಿಗೆ ಮರಳಿತ್ತು.
ಮುಂದಿನ ವರ್ಷ ಮೇನಲ್ಲಿ ತಾಷ್ಕೆಂಟ್‌ನಲ್ಲಿ ನಡೆಯಲಿರುವ ಪುರುಷರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಹುಮಾನದ ಮೊತ್ತವು ಹಿಂದಿನ ಆವೃತ್ತಿಗಿಂತ ದ್ವಿಗುಣಗೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) ಅಧ್ಯಕ್ಷ ಉಮರ್ ಕ್ರೆಮ್ಲೆವ್ ಇತ್ತೀಚೆಗೆ ಘೋಷಿಸಿದ್ದಾರೆ.
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಫ್ ಅನ್ನು ಕೂಡಾ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಅದೇ ರೀತಿ ಘೋಷಿಸುತ್ತದೆಯೇ ಎಂದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications