World Boxing Championship 2023: ಫೈನಲ್ ಪ್ರವೇಶಿಸಿ 4 ಬೆಳ್ಳಿ ಪದಕ ಖಚಿತಪಡಿಸಿದ ಭಾರತೀಯ ಬಾಕ್ಸರ್‌ಗಳು

ನವದೆಹಲಿಯಲ್ಲಿ ನಡೆಯುತ್ತಿರುವ 2023ರ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಕೊನೆಯ ನಾಲ್ಕು ಸುತ್ತುಗಳಲ್ಲಿ ನಾಲ್ಕು ಭಾರತೀಯ ಬಾಕ್ಸರ್‌ಗಳು ಗುರುವಾರ, ಮಾರ್ಚ್ 23ರಂದು ಫೈನಲ್ ಪ್ರವೇಶಿಸಿದರು.
ಹಾಲಿ ಚಾಂಪಿಯನ್ ನಿಖತ್ ಜರೀನ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಸತತ ಎರಡನೇ ಫೈನಲ್‌ಗೆ ಪ್ರವೇಶಿಸಿದರೆ, 22 ವರ್ಷದ ಬಾಕ್ಸರ್ ನಿತು ಘಂಘಾಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಚೊಚ್ಚಲ ಫೈನಲ್ ಪ್ರವೇಶ ಪಡೆದು, ತವರಿನ ಪ್ರೇಕ್ಷಕರಿಗೆ ರಸದೌತಣ ನೀಡಿದರು.
50 ಕೆಜಿ ವಿಭಾಗದಲ್ಲಿ ಭಾರತೀಯ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಕೊಲಂಬಿಯಾದ ಇಂಗ್ರಿಡ್ ವೇಲೆನ್ಸಿಯಾ ಅವರನ್ನು ಸೋಲಿಸಿ ಫೈನಲ್ ಖಚಿತಪಡಿಸಿಕೊಂಡರು ಮತ್ತು ಭಾರತಕ್ಕೆ ಕನಿಷ್ಠ ಬೆಳ್ಳಿಯ ಭರವಸೆ ನೀಡಿದ್ದಾರೆ.

ಇದಕ್ಕೂ ಮೊದಲು 48 ಕೆಜಿ ವಿಭಾಗದಲ್ಲಿ ನಿತು ಘಂಘಾಸ್ ಸಹ ಕಜಕಸ್ತಾನದ ಅಲುವಾ ಬಾಲ್ಕಿಬೆಕೊವಾ ಅವರನ್ನು ಸೋಲಿಸಿ ಫೈನಲ್‌ಗೆ ಮುನ್ನಡೆದರು.
ಇನ್ನು ಲೊವ್ಲಿನಾ ಬೊರ್ಗೊಹೈನ್ ಅವರು 75 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಚೀನಾದ ಲಿ ಕಿಯಾನ್ ಅವರನ್ನು ಸೋಲಿಸಿ ಅಂತಿಮ ಘಟ್ಟಕ್ಕೆ ಮುನ್ನಡೆ ಪಡೆದರು.
81 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸವೀಟಿ ಬೂರಾ ಅವರು ವಿಭಜಕ ನಿರ್ಧಾರದ ನಂತರ ಆಸ್ಟ್ರೇಲಿಯಾದ ಎಮ್ಮಾ ಗ್ರೀನ್‌ಟ್ರೀ ಅವರನ್ನು ಸೋಲಿಸಿ ಫೈನಲ್ ತಲುಪಿದರು.
ನಿಖತ್ ಜರೀನ್ ಮಹಿಳೆಯರ ಲೈಟ್ ಫ್ಲೈವೇಟ್ (48 ಕೆಜಿ) ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಸಮಗ್ರ ಆಟವಾಡಿ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕೊಲಂಬಿಯಾದ ಇಂಗ್ರಿಟ್ ವೆಲೆನ್ಸಿಯಾ ಅವರನ್ನು ಸೋಲಿಸಿದರು. ನಿಖತ್ ಜರೀನ್ ಆರಂಭದಿಂದ ಕೊನೆಯವರೆಗೂ ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸಿಳು.

ಮೇರಿ ಕೋಮ್ ಗರಡಿಯಲಿ ಪಳಗಿರುವ ನಿಖತ್ ಜರೀನ್ 2022ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಉತ್ತಮ ಸಾಧನೆಯ ಮೂಲಕ ಸದ್ದು ಮಾಡುತ್ತಿದ್ದಾರೆ.
ಮತ್ತೊಂದೆಡೆ ನಿತು ಘಂಘಾಸ್ ತನ್ನ 48 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಭಜಿಕ ನಿರ್ಧಾರದ ಮೂಲಕ ಮಾಜಿ ಬೆಳ್ಳಿ ಪದಕ ವಿಜೇತೆ ಅಲುವಾ ಬಾಲ್ಕಿಬೆಕೋವಾ ಅವರನ್ನು ಸೋಲಿಸಿ ಫೈನಲ್ ತಲುಪಿದರು ಮತ್ತು ಚಿನ್ನದ ಪದಕವನ್ನು ಗೆಲ್ಲುವ ಭರವಸೆ ನೀಡಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನಿತು ಘಂಘಾಸ್, ಇಸ್ತಾನ್‌ಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಹಿಂದಿನ ಆವೃತ್ತಿಯಲ್ಲಿ 5ನೇ ಸ್ಥಾನ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications