ಐಪಿಎಲ್ ಫೈನಲ್: ನಿಮಗೆ ಗೊತ್ತಿರದ 10 ಸಂಗತಿ
ಕೋಲ್ಕತ್ತಾ, ಮೇ 23: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಫೈನಲ್ ಪಂದ್ಯಕ್ಕೆ ಕೋಲ್ಕತ್ತಾ ಸಜ್ಜಾಗಿದೆ. ಟಾಪ್ ಟು ತಂಡಗಳೇ ಪ್ರಶಸ್ತಿಗೆ ಸೆಣೆಸಲಿವೆ.
ಮುಂಬೈ ನೇರವಾಗಿ ಫೈನಲ್ ಪ್ರವೇಶ ಮಾಡಿದ್ದರೆ, ಧೋನಿ ಹುಡುಗರು ಎರಡನೇ ಕ್ಯಾಲಿಫಾಯರ್ ನಲ್ಲಿ ಬೆಂಗಳೂರನ್ನು ಬಗ್ಗು ಬಡಿದು ಅಂತಿಮ ಹಣಾಹಣಿಗೆ ಲಗ್ಗೆ ಇಟ್ಟಿದ್ದಾರೆ.[ಚೆನ್ನೈ VS ಮುಂಬೈ: ಎರಡು ತಂಡಗಳ ಬಲಾಬಲವೇನು?]

ಐಪಿಲ್ 8, 2015ರ ಆವೃತ್ತಿಯ ಫೈನಲ್ ಪಂದ್ಯಕ್ಕೂ ಮುನ್ನ ಗೊತ್ತಿರದ ಕೆಲ ಅಂಶಗಳ ಪಟ್ಟಿ ನೋಡೋಣ
* ಸಿಎಸ್ ಕೆ ಮತ್ತು ಮುಂಬೈ 3ನೇ ಸಾರಿ ಐಪಿಎಲ್ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ.
* ಚೆನ್ನೈ ಮೂರನೇ ಪ್ರಶಸ್ತಿ ಮೇಲೆ ಕಣ್ಣಿರಿಸಿದೆ. 2010 ಮತ್ತು 2011ರಲ್ಲಿ ಧೋನಿ ಹುಡುಗರು ಚಾಂಪಿಯನ್ ಆಗಿದ್ದರು.
* ಸಿಎಸ್ ಕೆ ದಾಖಲೆಯ ಆರನೇ ಫೈನಲ್ ಆಡುತ್ತಿದೆ. 2008, 2010, 2012 ಮತ್ತು 2013ರಲ್ಲಿ ಫೈನಲ್ ಆಡಿ ಎರಡು ಬಾರಿ ಟ್ರೋಫಿ ಜಯಿಸಿದ್ದರು. ಎಲ್ಲ ಬಾರಿಯೂ ಎಂಎಸ್ ಧೋನಿಯೇ ನಾಯಕರಾಗಿದ್ದು ವಿಶೇಷ.[ಫೈನಲ್ ಗೆ ಮಳೆ ಬಂದ್ರೆ ಏನು ಕತೆ]
* ಕೋಲ್ಕತ್ತಾದಲ್ಲಿ ಎರಡನೇ ಬಾರಿಗೆ ಫೈನಲ್ ಹಣಾಹಣಿ ನಡೆಯುತ್ತಿದೆ. 2013 ರಲ್ಲಿ ಇಲ್ಲಿಯೇ ಅಂತಿಮ ಪಂದ್ಯ ನಡೆದಾಗ ಇದೇ ತಂಡಗಳು ಆಡಿದ್ದವು. ಮುಂಬೈ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
* ಮುಂಬೈ ಗೆದ್ದರೆ ಪಾಂಟಿಂಗ್ ಗೆ ಡಬಲ್ ಧಮಾಕ. ಅವರೊಬ್ಬ ಆಟಗಾರನಾಗಿದ್ದಾಗ ಮುಂಬೈ ಸಾಧನೆ ಮಾಡಿತ್ತು. ಇದೀಗ ಕೋಚ್ ಆಗಿದ್ದು ಜಯದ ನಿರೀಕ್ಷೆಯಲ್ಲಿದ್ದಾರೆ.
* ಚೆನ್ನೈ ನ ಡ್ವೇನ್ ಸ್ಮಿತ್ 2013 ರಲ್ಲೂ ಆರಂಭಿಕರಾಗಿದ್ದರು. ಈಗಲೂ ಆರಂಭಿಕರೇ.
* ಚೆನ್ನೈ ಗೆದ್ದರೆ ಹೊಸ ದಾಖಲೆಯಾಗಲಿದೆ. ಟಾಪ್ ಒನ್ ಸ್ಥಾನದಲ್ಲಿದ್ದು ಪ್ರಶಸ್ತಿ ಜಯಿಸಿದ್ದು ರಾಜಸ್ಥಾನ ರಾಯಲ್ಸ್ ಮಾತ್ರ(2008)
* ಮುಂಬೈ ಗೆದ್ದರೆ ಇಲ್ಲಿಯವೆರೆಗೆ ಎರಡು ಬಾರಿ ಪ್ರಶಸ್ತಿ ದಾಖಲಿಸಿರುವ ಚೆನ್ನೈ ಮತ್ತು ಕೋಲ್ಕತ್ತಾ ಸಾಲಿಗೆ ಸೇರಲಿದೆ.
* ಗೆದ್ದವರಿಗೆ 15 ಕೋಟಿ ರು ಬಹುಮಾನ ಸಿಕ್ಕರೆ, ರನ್ನರ್ ಗೆ 10 ಕೋಟಿ ರು ಸಿಗಲಿದೆ.
* ಮಳೆ ಬಂದಯ ಪಂದ್ಯ ರದ್ದಾದರೆ(ಮೀಸಲು ದಿನದಂದೂ) ಸಿಎಸ್ ಕೆ ಯನ್ನು ಅಂಕಪಟ್ಟಿಯ ಆಧಾರದಲ್ಲಿ ವಿನ್ನರ್ ಎಂದು ಘೋಷಣೆ ಮಾಡಲಾಗುತ್ತದೆ.(ಒನ್ ಇಂಡಿಯಾ ನ್ಯೂಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications