For Quick Alerts
ALLOW NOTIFICATIONS  
For Daily Alerts
 

ಮ್ಯಾಚ್ ವಿನ್ನರ್‌ಗಳಿಗೆ ಗಾಯದ ಆಘಾತ: ಗಾಯದ ಕಾರಣಕ್ಕೆ ವಿಶ್ವಕಪ್ ತಪ್ಪಿಸಿಕೊಳ್ಳುತ್ತಿರುವ 10 ಸ್ಟಾರ್ ಕ್ರಿಕೆಟಿಗರು!

ಅದು ಯಾವುದೇ ಕ್ರೀಡೆ ಆಗಿರಲಿ ವಿಶ್ವಕಪ್ ಟೂರ್ನಿಯಂಥಾ ಮೆಗಾ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಎಲ್ಲಾ ಕ್ರೀಡಾಪಟುಗಳ ಕನಸು. ಇಂಥಾ ಅವಕಾಶಗಳು ಕೆಲವೇ ಕೆಲವರಿಗೆ ಮಾತ್ರವೇ ದೊರೆಯುತ್ತದೆ. ಇದೀಗ ಏಕದಿನ ಕ್ರಿಕೆಟ್ ವಿಶ್ವಕಪ್ ಕೂಡ ಆರಂಭವಾಗಿದ್ದು ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕ್ರಿಕೆಟ್ ಹಬ್ಬದಲ್ಲಿ 10 ತಂಡಗಳು ಪ್ರತಿನಿಧಿಸುತ್ತಿದೆ. ಎಲ್ಲಾ ಹತ್ತು ತಂಡಗಳು ಕೂಡ 15 ಆಟಗಾರರ ಬಲಿಷ್ಠ ಪಡೆಯೊಂದಿಗೆ ವಿಶ್ವಕಪ್ ಟ್ರೋಫಿ ಗೆಲ್ಲಲು ಈ ತಂಡಗಳು ಭಾರೀ ಪೈಪೋಟಿಯನ್ನು ನಡೆಸಲಿದೆ.

ಕ್ರೀಡೆ ಅಂದರೆ ಗಾಯಗಳು ಕೂಡ ಸಾಮಾನ್ಯವೆ. ವಿಶ್ವಕಪ್‌ನಂಥಾ ದೊಡ್ಡ ಕ್ರೀಡಾಕೂಟದ ಸನಿಹದಲ್ಲಿ ಕೆಲ ಕ್ರಿಕೆಟಿಗರು ಕೂಡ ಗಾಯಕ್ಕೆ ತುತ್ತಾಗಿದ್ದು ಇಂಥಾ ದೊಡ್ಡ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಹಾಗಾದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮ್ಯಾಚ್ ವಿನ್ನರ್‌ಗಳಾಗಿ ಗುರುತಿಸಿಕೊಳ್ಳುವ ಅವಕಾಶಗಳಿದ್ದೂ ಟೂರ್ನಿಯನ್ನು ಗಾಯದ ಕಾರಣದಿಂದಾಗಿ ತಪ್ಪಿಸಿಕೊಳ್ಳುತ್ತಿರುವ 10 ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..

10 Talented Cricketers Who Will Unfortunately Miss Out ICC World Cup 2023 Due to Injuries

ರಿಷಭ್ ಪಂತ್(ಭಾರತ)

ಟೀಮ್ ಇಂಡಿಯಾದ ವಿಕೆಟಗ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಳೆದ ವರ್ಷಾಂತ್ಯದಲ್ಲಿ ಭೀಕರ ಅಪಘಾತಕ್ಕೆ ತುತ್ತಗಿರುವುದು ತಿಳಿದೇ ಇದೆ. ಟೀಮ್ ಇಂಡಿಯಾದ ಈ ಯುವ ಆಟಗಾರ ಬಹುತೇಕ ಫಿಟ್‌ನೆಸ್ ಗಳಿಸಿಕೊಂಡಿದ್ದರೂ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಅವರು ಸಮರ್ಥವಾಗಿಲ್ಲ. ಹಾಗಾಗಿ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಅವರಿಗೆ ಅವಕಾಶ ದೊರೆತಿಲ್ಲ.

ಮೈಕಲ್ ಬ್ರೇಸ್‌ವೆಲ್(ನ್ಯೂಜಿಲೆಂಡ್)

ನ್ಯೂಜಿಲೆಂಡ್‌ನ ಆಲ್‌ರೌಂಡರ್‌ ಇಂಗ್ಲೆಂಡ್‌ನ ದೇಶೀಯ ಟಿ20 ಪಂದ್ಯಾವಳಿಯಲ್ಲಿ ಭಾಗಿವಹಿಸಿದ್ದ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದು ವಿಶ್ವಕಪ್‌ನಿಂದ ಹೊರಗುಳಿಯುವಂತಾಗಿದೆ. ವೋರ್ಸೆಸ್ಟರ್‌ಶೈರ್‌ಗಾಗಿ ಆಡುವಾಗ ಅವರು ತಮ್ಮ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರ ಚೇತರಿಕೆಗೆ ಹೆಚ್ಚಿನ ಸಮಯದ ಅಗತ್ಯವಿದೆ.

ನಸೀಮ್ ಶಾ (ಪಾಕಿಸ್ತಾನ)

ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಶಾ ಅ್ಯಂತ ಅಪಾಯಕಾರಿ ವೇಗದ ಬೌಲರ್ ಎಂದು ಗುರುತಿಸಿಕೊಂಡಿರುವ ವೇಗಿ. ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಈ ಆಟಗಾರನ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿತ್ತು. ಆದರೆ ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳ ಮುನ್ನ ಏಷ್ಯಾ ಕಪ್‌ನಲ್ಲಿ ನಸೀಮ್ ಶಾ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರು ಸಂಪೂರ್ಣ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವಂತಾಗಿದೆ.

ಆಶ್ಟನ್ ಅಗರ್ (ಆಸ್ಟ್ರೇಲಿಯಾ)

ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಪಿನ್ನರ್ ಆಶ್ಟನ್ ಅಗರ್ ಕಾಫ್ ಸ್ನಾಯುವಿನ ಗಾಯಕ್ಕೆ ತುತ್ತಾಗಿ ಈ ಬಾರಿಯ ವೀಶ್ವಕಪ್ ಟೂರ್ನಿಯಿಂದ ಹೊರಗುಳಿಯುವಂತಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಆರಂಭಕ್ಕೂ ಮುನ್ನ ಅವರು ಗಾಯಗೊಂಡಿದ್ದರು. ಭಾರತದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ಅವರು ಚೇತರಿಕೆ ಕಂಡಿದ್ದರು ಕೂಡ ನಂತರ ಅವರಿಗೆ ಮತ್ತೆ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವಂತಾಗಿದೆ.

ಎಬಾದತ್ ಹುಸೇನ್ (ಬಾಂಗ್ಲಾದೇಶ)

ಬಾಂಗ್ಲಾದೇಶದ ಪ್ರಮುಖ ಆಟಗಾರ ಎಬಾದತ್ ಹುಸೇನ್ ಕೂಡ ಗಾಯಕ್ಕೆ ತುತ್ತಾಗಿದ್ದಾರೆ. ಆಂಟೇರಿಯರ್ ಕ್ರೂಶಿಯೇಟ್ ಲಿಗಮೆಂಟ್(ACL) ಗಾಯಕ್ಕೆ ಬಾಂಗ್ಲಾದೇಶದ ಈ ಆಟಗಾರ ಒಳಗಾಗಿದ್ದಾರೆ. ಗಾಉದ ತೀವ್ರತೆಯ ಕಾರಣದಿಂದಾಗಿ ಈ ವಿಶ್ವಕಪ್‌ ಟೂರ್ನಿಯಿಂದ ಅವರು ಹೊರಗುಳಿಯುವುದು ಅನಿವಾರ್ಯವಾಗಿದೆ.

ಅನ್ರಿಕ್ ನಾರ್ಕಿಯಾ (ದಕ್ಷಿಣ ಆಫ್ರಿಕಾ)

ದಕ್ಷಿಣ ಆಫ್ರಿಕಾದ ಘಾತಕ ವೇಗಿ ಅನ್ರಿಕ್ ನಾರ್ಕಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಗಾಯದ ಕಾರಣಕ್ಕಾಗಿಯೇ ಹೊರಬಿದ್ದಿದ್ದಾರೆ. ಐಪಿಎಲ್‌ನಲ್ಲಿಯೂ ಆಡಿರುವ ಅದ್ಭುತ ಅನುಭವ ಹೊಂದಿರುವ ನಾರ್ಕಿಯಾ ವಿಶ್ವಕಪ್‌ನಲ್ಲಿ ದಕ್ಷಿಣ ಆಪ್ರಿಕಾ ತಂಡಕ್ಕೆ ಪ್ರಮುಖ ಅಸ್ತ್ರವಾಗಲಿದ್ದಾರೆ ಎನ್ನುವ ವಿಶ್ವಾಸವಿತ್ತು. ಆದರೆ ನಾರ್ಕಿಯ್ ವಿಶ್ವಕಪ್ ಟೂರ್ನಿಯ ಸನಿಹದಲ್ಲಿರುವಾಗಲೇ ಕೆಳ ಬೆನ್ನಿನ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಈ ವೇಗಿಯ ಬದಲಿಗೆ ತಂಡದಲ್ಲಿ ಲಿಝಾರ್ಡ್ ವಿಲಿಯಮ್ಸ್‌ಗೆ ಅವಕಾಶ ದೊರೆತಿದೆ.

ವನಿಂದು ಹಸರಂಗಾ (ಶ್ರೀಲಂಕಾ)

ಶ್ರೀಲಂಕಾ ತಂಡದ ಸೂಪರ್‌ಸ್ಟಾರ್ ಸ್ಪಿನ್ ಆಲ್‌ರೌಂಡರ್ ವನಿಂದು ಹಸರಂಗ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವಂತಾಗಿದೆ. ಭಾರತದಲ್ಲಿಯೇ ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಕಾರಣ ಸ್ಪಿನ್ನರ್ ಆಗಿ ಲಂಕಾ ತಂಡಕ್ಕೆ ಹಸರಂಗ ಮೇಲೆ ಭಾರೀ ನಿರೀಕ್ಷೆಯಿಟ್ಟುಕೊಂಡಿತ್ತು. ಆದರೆ ಅವರು ಗಾಯದಿಂದಾಗಿ ಅವಕಾಶ ವಂಚಿತವಾಗಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿಯೂ ಅವರು ಆಡಿರಲಿಲ್ಲ.

ಅಕ್ಷರ್ ಪಟೇಲ್ (ಭಾರತ)

ಈ ಬಾರಿಯ ವಿಶ್ವಕಪ್ ಟೂರ್ನಿಗಾಗಿ ಪ್ರಕಟಿಸಿದ್ದ ಆರಂಭಿಕ 15ರ ಬಳಗದಲ್ಲಿ ಕಾಣಿಸಿಕೊಂಡಿದ್ದ ಅಕ್ಷರ್ ಪಟೇಲ್ ಬಳಿಕ ಗಾಯದ ಕಾರಣದಿಂದಾಗಿ ತಂಡದಿಂದ ಹೊರಬೀಳುವಂತಾಗಿದೆ. ಏಷ್ಯಾಕಪ್‌ನಲ್ಲಿ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾಗಿರುವ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದು ಆರ್ ಅಶ್ವಿನ್‌ಗೆ ಭಾರತ ತಂಡದಲ್ಲಿ ಅವಕಾಶ ದೊರೆತಿದೆ.

ಸಿಸಂಡಾ ಮಗಲಾ (ದಕ್ಷಿಣ ಆಫ್ರಿಕಾ)

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರುವ ದಕ್ಷಿಣ ಆಫ್ರಿಕಾದ ಎರಡನೇ ವೇಗದ ಬೌಲರ್ ಸಿಸಂಡ ಮಗಲಾ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಕಾರಣದಿಂದಾಗಿ ವಿಶ್ವಕಪ್ ತಂಡದಿಂದ ಮಗಲಾ ಹೊರಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಆಂಡಿಲ್ ಫೆಹ್ಲುಕ್ವಾಯೊಗೆ ಅವಕಾಶ ದೊರೆತಿದೆ.

ದುಷ್ಮಂತ ಚಮೀರ (ಶ್ರೀಲಂಕಾ)

ಶ್ರೀಲಂಕಾದ ವೇಗದ ಬೌಲರ್ ಕಳೆದ ಲಂಕಾ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಅದಾದ ಬಳಿಕ ಅವರು ಲಂಕಾ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಭುಜದ ಸ್ನಾಯುವಿನ ಗಾಯಕ್ಕೆ ಒಳಗಾಗಿದ್ದು ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಶ್ರೀಲಂಕಾ ತಂಡದಲ್ಲಿ ಅವರು ಸ್ಥಾನವನ್ನು ಪಡೆದುಕೊಂಡಿಲ್ಲ.

Story first published: Thursday, October 5, 2023, 12:21 [IST]
Other articles published on Oct 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+