ಈ 13 ಆಟಗಾರರು ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದದ್ದು ನೆನಪಿದೆಯಾ?

ಮುಂಬೈ ಇಂಡಿಯನ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇತಿಹಾಸದಲ್ಲಿ ಅತಿ ದೊಡ್ಡ ಯಶಸ್ಸನ್ನು ಸಾಧಿಸಿರುವಂತಹ ತಂಡ ಎಂಬ ಖ್ಯಾತಿಯನ್ನು ಪಡೆದಿದೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಟ್ಟು 5 ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎಂಬ ದಾಖಲೆಯನ್ನು ಹೊಂದಿದೆ.
ಇನ್ನು ಇಂತಹ ಯಶಸ್ವಿ ಫ್ರಾಂಚೈಸಿ ಪರ ಕಣಕ್ಕಿಳಿಯಬೇಕು ಎಂಬ ಬಯಕೆ ಹಲವಾರು ಕ್ರಿಕೆಟಿಗರಲ್ಲಿ ಇರಲಿದೆ. ಈ ಅವಕಾಶವನ್ನು ಹಲವಾರು ಕ್ರಿಕೆಟಿಗರು ಪಡೆದುಕೊಂಡಿದ್ದು, ಮುಂಬೈ ಇಂಡಿಯನ್ಸ್ ಹೆಚ್ಚಾಗಿ ತನ್ನ ಆಟಗಾರರನ್ನು ಪದೇಪದೇ ಬದಲಾಯಿಸಿಲ್ಲ. ನಿರ್ದಿಷ್ಟ ಆಟಗಾರರನ್ನು ತಂಡದಲ್ಲಿ ಇಟ್ಟುಕೊಂಡು ಹಲವಾರು ಆವೃತ್ತಿಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಈ ಕೆಳಕಂಡ ಆಟಗಾರರು ಈ ಹಿಂದೆ ಇದ್ದರು ಎಂಬ ನೆನಪು ಹಲವು ಕ್ರಿಕೆಟ್ ಅಭಿಮಾನಿಗಳಲ್ಲಿ ಇಲ್ಲ ಎನ್ನಬಹುದು.
ಹೌದು, ಈ ಕೆಳಕಂಡ ಆಟಗಾರರು ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಆಟಗಾರರ ಪಟ್ಟಿ
ಈ ಕೆಳಕಂಡ ಆಟಗಾರರು ಐಪಿಎಲ್ ಇತಿಹಾಸದಲ್ಲಿ ಹಿಂದೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾಗಿದ್ದರು.
• ಅಜಿಂಕ್ಯ ರಹಾನೆ - 2008ರಿಂದ 2009
• ಶಿಖರ್ ಧವನ್ - 2009ರಿಂದ 2010
• ಯುಜುವೇಂದ್ರ ಚಾಹಲ್ - 2013
• ಅಕ್ಷರ್ ಪಟೇಲ್ - 2013
• ಪ್ಯಾಟ್ ಕಮಿನ್ಸ್ - 2018
• ಕುಲದೀಪ್ ಯಾದವ್ - 2012
• ಜೋಶ್ ಹೇಜಲ್ ವುಡ್ - 2014
• ಹರ್ಷೆಲ್ ಗಿಬ್ಸ್ - 2012
• ನಿಕೋಲಸ್ ಪೂರನ್ - 2017
• ಅಲೆಕ್ಸ್ ಹೇಲ್ಸ್ - 2015
• ಫಿಲಿಪ್ ಹ್ಯೂಸ್ - 2013
• ಉನ್ಮುಕ್ತ್ ಚಂದ್ - 2015ರಿಂದ 2016
• ಜೋಸ್ ಬಟ್ಲರ್ - 2016ರಿಂದ 2017

ಈ ವರ್ಷ ಅಬ್ಬರಿಸಿದ ಜೋಸ್ ಬಟ್ಲರ್ ಮುಂಬೈ ಇಂಡಿಯನ್ಸ್ ಪರ ಕಲೆಹಾಕಿದ್ದ ರನ್ ಎಷ್ಟು?
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಜೋಸ್ ಬಟ್ಲರ್ 17 ಪಂದ್ಯಗಳನ್ನಾಡಿ ಬರೋಬ್ಬರಿ 863 ರನ್ ಕಲೆಹಾಕಿದ್ದರು. ಈ ಹಿಂದೆ 2016 ಹಾಗೂ 2017ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಬಟ್ಲರ್ ಎರಡೂ ಆವೃತ್ತಿಗಳು ಸೇರಿದಂತೆ 24 ಪಂದ್ಯಗಳಲ್ಲಿ 527 ರನ್ ಬಾರಿಸಿದ್ದರು.

ಕೇವಲ ಒಂದೇ ಪಂದ್ಯದ ಅವಕಾಶ ಪಡೆದಿದ್ದ ಚಾಹಲ್
ಇನ್ನು ಈ ಪಟ್ಟಿಯಲ್ಲಿ ಯುಜುವೇಂದ್ರ ಚಾಹಲ್ ಹೆಸರು ಕಂಡು ಕೆಲವರು ತುಸು ಆಶ್ಚರ್ಯಕ್ಕೂ ಒಳಗಾಗಿರಬಹುದು. ಹೌದು, ಯುಜುವೇಂದ್ರ ಚಾಹಲ್ ಕೂಡ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದರು. 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಕೇವಲ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದ ಯುಜುವೇಂದ್ರ ಚಾಹಲ್ 4 ಓವರ್ ಬೌಲಿಂಗ್ ಮಾಡಿ 34 ರನ್ ನೀಡಿ ಯಾವುದೇ ವಿಕೆಟ್ ಪಡೆದಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications