Vaibhav Suryavanshi: ಭಾರತದ ಪರ ಇತಿಹಾಸ ಬರೆದ ವೈಭವ್ ಸೂರ್ಯವಂಶಿ: ಯಂಗ್ ಪ್ಲೇಯರ್ ದಾಖಲೆಗಳ ಪಟ್ಟಿ
ಸೋಮವಾರ ಜೈಪುರ್‌ದ ಸವಾಯಿ ಮಾನಸಿಂಗ್ ಮೈದಾನದಲ್ಲಿ ನಡೆದ ಪಂದ್ಯ ನಿಜಕ್ಕೂ ನೇರ ಪ್ರಸಾರವೋ ಅಥವಾ ಪಂದ್ಯದ ಮರು ಪ್ರಸಾರವೋ ಎಂಬ ಅನುಮಾನ ವ್ಯಕ್ತಾಗಿತ್ತು. ಇದಕ್ಕೆ ಕಾರಣ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ. ಜೈಪುರ್‌ದಲ್ಲಿ ಕಮಾಲ್ ಬ್ಯಾಟಿಂಗ್ ಪ್ರದರ್ಶನ ಮಾಡಿದ ವೈಭವ್ ಸೂರ್ಯವಂಶಿ ಅಬ್ಬರಿಸಿದರು. ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇತಿಹಾಸ ನಿರ್ಮಿಸಿದರು.
ಗುಜರಾತ್ ಟೈಟಾನ್ಸ್ ನೀಡಿದ್ದ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದಾಗ ಹೇಗೆ ಆಡಬೇಕು ಎಂಬುದನ್ನು ಯುವ ಆಟಗಾರ ಆಟ ನೋಡಿ ಕಲಿಯಬೇಕು. ಅಬ್ಬಾ ಸಖತ್ ಬ್ಯಾಟಿಂಗ್ ಪ್ರದರ್ಶನ ನೀಡಿ ನೆರೆದಿದ್ದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದರು. ಶಾಲೆಗೆ ಹೋಗಿ ಪಾಠ ಕೇಳುವ ವಯಸ್ಸಿನಲ್ಲಿ ಈಡೀ ವಿಶ್ವ ಕ್ರಿಕೆಟ್ ತನ್ನತ್ತ ನೋಡುವಂತೆ ಮಾಡಿದರು. ಬೀಹಾರ್‌ದ ಯಂಗ್ ಸೂಪರ್ ಸ್ಟಾರ್ ಆಟಕ್ಕೆ ಬ್ರೇಕ್ ಹಾಕುವಲ್ಲಿ ನಿಜಕ್ಕೂ ಗುಜರಾತ್ ಬೌಲರ್‌ಗಳು ಹೈರಾಣಾದರು.

ಟೂರ್ನಿಯುದಕ್ಕೂ ಅಬ್ಬರದ ಪ್ರದರ್ಶನ ನೀಡಿದ್ದ ಗುಜರಾತ್ ಬೌಲರ್‌ಗಳು ವೈಭವ್ ಸೂರ್ಯವಂಶಿ ಅವರನ್ನು ಕಟ್ಟಿ ಹಾಕುವಲ್ಲಿ ವಿಫಲರಾದರು. ರಾಜಸ್ಥಾನ ರಾಯಲ್ಸ್ ತಂಡದ ಯುವ ಎಡಗೈ ಬ್ಯಾಟರ್‌ನನ್ನು ಕಟ್ಟಿ ಹಾಕುವಲ್ಲಿ ಟೈಟಾನ್ಸ್ ಬೌಲರ್‌ಗಳು ವಿಫಲರಾದರು. ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ರಶೀದ್ ಖಾನ್ ಅವರನ್ನು ಮನ ಬಂದಂತೆ ದಂಡಿಸಿದ ವೈಭವ್ ಅಮೋಘ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಇತಿಹಾಸ ಬರೆದರು.
ಅಮೋಘ ವೈಭವ್
14 ವರ್ಷದ ಯುವ ಬ್ಯಾಟರ್‌ನನ್ನು ಕೊಂಡಗಾ ಎಲ್ಲರೂ ಇವರಿಗೇ ಏಕೆ ಕೋಟಿ ಮೊತ್ತ ಎಂದು ಪ್ರಶ್ನೆ ಮಾಡಿದ್ದರು. ಆದರೆ ಸೋಮವಾರ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ವೈಭವ್ ಸೂರ್ಯವಂಶಿ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದರು. ತಮ್ಮಲ್ಲಿರುವ ಬ್ಯಾಟಿಂಗ್ ಕ್ಷಮತೆಯನ್ನು ಪ್ರಸ್ತುತ ಪಡಿಸಿದ ವೈಭವ್ ಭಾರತದ ನ್ಯೂ ಪೋಸ್ಟರ್ ಬಾಯ್ ರೀತಿ ಕಾಣಿಸಿಕೊಂಡರು. ಇವರ ಈ ಈ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.

ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದ ವೈಭವ್ ಸೂರ್ಯವಂಶಿ ಅಬ್ಬರಿಸಿದರು. ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ಇತಿಹಾಸ ನಿರ್ಮಿಸಿದರು. ಇವರು ಭಾರತದ ಪರ ವೇಗದ ಶತಕ ಬಾರಿಸಿದ ಸಾಧನೆಯನ್ನು ಮಾಡಿದರು. ಇವರು ಯೂಸುಫ್ ಪಠಾಣ್ ದಾಖಲೆಯನ್ನು ಅಳಿಸಿ ಹಾಕಿದರು. ಇವರಿಗಿಂತಲೂ ಮುಂಚೂಣಿಯಲ್ಲಿ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ಐಪಿಎಲ್‌ನಲ್ಲಿ ವೇಗದ ಶತಕ
ಕ್ರಿಸ್ ಗೇಲ್, 30 ಎಸೆತ
ಯೂಸುಫ್ ಪಠಾಣ್, 37 ಎಸೆತ
ಡೇವಿಡ್ ಮಿಲ್ಲರ್, 38 ಎಸೆತ
ಟ್ರಾವಿಸ್ ಹೆಡ್, 39 ಎಸೆತ
ಪ್ರಿಯಾಂಶ್ ಆರ್ಯ, 39 ಎಸೆತ
ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 7 ಬೌಂಡರಿ, 11 ಸಿಕ್ಸರ್ ಸಹಾಯದಿಂದ 101 ರನ್ ಬಾರಿಸಿ ಅಬ್ಬರಿಸಿದರು. ಈ ಇನಿಂಗ್ಸ್‌ನಲ್ಲಿ ವೈಭವ್ ಬಾರಿಸಿದ ಸಿಕ್ಸರ್‌ಗಳು ಭಾರತದ ಪರ ಯಾವೊಬ್ಬ ಬ್ಯಾಟರ್ ಬಾರಿಸಿದ ಗರಿಷ್ಠ ಸಿಕ್ಸರ್ ಆಗಿವೆ.
ಒಂದೇ ಇನಿಂಗ್ಸ್‌ನಲ್ಲಿ ಹೆಚ್ಚು ಸಿಕ್ಸರ್
ಕ್ರಿಸ್ ಗೇಲ್, 17 ಸಿಕ್ಸರ್
ಬ್ರೆಡಂ ಮೆಕಲಂ, 13 ಸಿಕ್ಸರ್
ಕ್ರಿಸ್ ಗೇಲ್, 13 ಸಿಕ್ಸರ್
ಕ್ರಿಸ್ ಗೇಲ್, 12 ಸಿಕ್ಸರ್,
ಎಬಿ ಡಿವಿಲಿಯರ್ಸ್, 12 ಸಿಕ್ಸರ್
ಸನತ್ ಜಯಸೂರ್ಯ, 11 ಸಿಕ್ಸರ್
ವೈಭವ್ ಸೂರ್ಯವಂಶಿ, 11 ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications