Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್, ಲಕ್ಷ್ಮಣ ರೀತಿ ಆಸೀಸ್ ತಂಡಕ್ಕೆ ಕಾಟ ನೀಡಿರುವ ವೈಭವ್ ಸೂರ್ಯವಂಶಿ

ಭಾರತ ಹಾಗೂ ಆಸ್ಟ್ರೇಲಿಯಾ ಅಂಡರ್ 19 ತಂಡಗಳ ನಡುವಣ ಯೂತ್ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭವಿಷ್ಯದ ಆಟಗಾರ ಎಂದೇ ಖ್ಯಾತಿ ಪಡೆದಿರುವ 14 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಕಮಾಲ್ ಪ್ರದರ್ಶಿಸುತ್ತಿದ್ದಾರೆ. ಇವರು ಈಗಾಗಲೇ ಯೂತ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಬ್ಯಾಟ್ ಮಾಡಿದ್ದು ಹಲವು ದಾಖಲೆಗಳನ್ನು ಬರೆದಿದ್ದಾರೆ. ಈಗ ಇವರು ಆಸೀಸ್ ಪ್ರವಾಸದ ಕೊನೆಯ ಪಂದ್ಯಕ್ಕೆ ಸಿದ್ಧರಾಗುತ್ತಿದ್ದಾರೆ.

ಈಗಾಗಲೇ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದರು. ತಮ್ಮ 14ನೇ ವಯಸ್ಸಿನಲ್ಲಿ ವೈಭವ್ ಐಪಿಎಲ್‌ನಲ್ಲಿ ಶತಕ ಬಾರಿಸಿದರು. ಅಲ್ಲದೆ ಐಪಿಎಲ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಎರಡನೆ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು. ಇವರ ಈ ಆಟವನ್ನು ಕಂಡ ಅಭಿಮಾನಿಗಳು ರೆಡ್ ಬೌಲ್‌ ಕ್ರಿಕೆಟ್‌ನಲ್ಲಿ ಹೇಗೆ ಆಡುತ್ತಾರೆ ಎಂಬ ಪ್ರಶ್ನೆಗಳನ್ನು ಸಹ ಮಾಡಿದ್ದರು. ಆದರೆ ಈ ಪ್ರಶ್ನೆಗಳಿಗೆ ಇವರು ಮೈದಾನದಲ್ಲೇ ಉತ್ತರ ನೀಡಿದ್ದಾರೆ. ಇವರ ಈ ಆಟದ ಧಾಟಿಯನ್ನು ಕಂಡರೆ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಅವರಂತೆಯೇ ಆಸ್ಟ್ರೇಲಿಯಾ ತಂಡಕ್ಕೆ ತಲೆನೋವಾದಂತೆ ಕಂಡು ಬರುತ್ತಿದೆ.

14-Year-Old Vaibhav Suryavanshi Shines in U19 Youth Test

ಆಸ್ಟ್ರೇಲಿಯಾ ಪ್ರವಾಸವನ್ನು ಭಾರತ ಅಂಡರ್ 19 ತಂಡ ಬೆಳೆಸಿದ್ದು, ಬಹುದಿನಗಳ ಪಂದ್ಯಗಳನ್ನು ಆಡಲಾಗುತ್ತಿದೆ. ಈ ವೇಳೆ ವೈಭವ್‌ 12 ಸಿಕ್ಸರ್‌ ಹಾಗೂ 23 ಬೌಂಡರಿ ಬಾರಿಸಿರುವ ವೈಭವ್ 221 ರನ್‌ ಸಿಡಿಸಿದ್ದಾರೆ. ಇವರು ಅಕ್ಟೋಬರ್‌ 7 ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ ವೈಭವ್, 55.25 ರ ಸರಾಸರಿಯಲ್ಲಿ 221 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ವೈಭವ

ಆಸ್ಟ್ರೇಲಿಯಾ ಅಂಡರ್ 19 ತಂಡದ ವಿರುದ್ಧ ವೈಭವ್ ಸೂರ್ಯವಂಶಿ ಅವರು ಈಗಾಗಲೇ 2 ಶತಕವನ್ನು ಬಾರಿಸಿದ್ದಾರೆ. ಈ ಪ್ರವಾಸದ ಕೊನೆಯ ಯೂತ್ ಟೆಸ್ಟ್‌ನಲ್ಲಿ ಇವರು 113 ರನ್‌ ಸಿಡಿಸಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ಕಿರಿಯರ ತಂಡ ಭಾರತ ಪ್ರವಾಸವನ್ನು ಬೆಳೆಸಿದ್ದಾಗ ಇವರು ಶತಕ ಬಾರಿಸಿ ಅಬ್ಬರಿಸಿದ್ದರು.

14-Year-Old Vaibhav Suryavanshi Shines in U19 Youth Test

ವೈಭವ್‌ ಸೂರ್ಯವಂಶಿ ಅವರ ಬ್ಯಾಟಿಂಗ್ ಸಾಧನೆಯನ್ನು ನೋಡಿದರೆ, ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್‌ ಲಕ್ಷ್ಮಣ ಹಾದಿಯನ್ನು ತುಳಿಯುತ್ತಿದ್ದಂತೆ ಕಾಣುತ್ತಿದೆ. ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್‌ ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾ ವಿರುದ್ದ ಅಬ್ಬರಿಸುತ್ತಿದ್ದರು. ಇವರಿಗೆ ಆಸೀಸ್ ವಿರುದ್ಧ ಆಡುವುದು ಎಂದರೆ ಅಚ್ಚು ಮೆಚ್ಚು. ಇವರು ಆಸೀಸ್ ವಿರುದ್ಧವೇ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ಇನ್ನು ವಿವಿಎಸ್‌ ಲಕ್ಷ್ಮಣ್ ಸಹ ಅಂಡರ್ 19 ತಂಡದಲ್ಲಿದ್ದರು. ಆಗ ಅವರು ಆಸೀಸ್ ವಿರುದ್ಧ 441 ರನ್‌ ಬಾರಿಸಿದ್ದರು. ವೈಭವ್ ಸೂರ್ಯವಂಶಿ ಅವರ ಆಟವನ್ನು ನೋಡಿದರೆ ಇವರು ಈ ದಿಗ್ಗಜ ಆಟಗಾರರ ಆಟವನ್ನು ನೆಪಿಸುತ್ತದೆ.

Story first published: Monday, October 6, 2025, 19:08 [IST]
Other articles published on Oct 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+