Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜಿನಲ್ಲಿ ಮಿಂಚಲಿದ್ದಾರೆ ಅಫ್ಘಾನ್‌ನ ಅತೀ ಕಿರಿಯ ಆಟಗಾರ!

15-year-old Afghan sensation Noor Ahmad set to make waves in IPL auction

ಕೋಲ್ಕತ್ತಾ, ಡಿಸೆಂಬರ್ 16: ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಡಿಸೆಂಬರ್ 19ರಂದು ಆಟಗಾರರ ಹರಾಜು ನಡೆಯಲಿದೆ. ಈ ವೇಳೆ ಅತೀ ಕಿರಿಯ ಆಟಗಾರರಾಗಿ ಅಫ್ಘಾನಿಸ್ತಾನ ತಂಡದ ನೂರ್ ಅಹ್ಮದ್ ಲಕನ್ವಾಲ್ ಗಮನ ಸೆಳೆಯಲಿದ್ದಾರೆ.

ದೇಸಿ ಯುವ ಕ್ರಿಕೆಟರ್‌ಗಳ ಪ್ರತಿಭಾಪ್ರದರ್ಶನಕ್ಕೆ ಐಪಿಎಲ್ ಉತ್ತಮ ವೇದಿಕೆ ಒದಗಿಸುತ್ತಿದೆ. ಭಾರತದ ಟೂರ್ನಿಯಲ್ಲಿ ವಿದೇಶಿ ಯುವ ಆಟಗಾರರೂ ಮಿನುಗಿದ್ದಿದೆ. ಕಳೆದ ವರ್ಷವೂ ಐಪಿಎಲ್ ಹರಾಜಿನ ವೇಳೆ ಕಿರಿಯ ಆಟಗಾರರು ಆಕರ್ಷಕ ಮೊತ್ತಕ್ಕೆ ಮಾರಾಟವಾಗಿ ಬೆರಗು ಮೂಡಿಸಿದ್ದರು. ಈ ಬಾರಿ ನೂರ್ ಅಹ್ಮದ್ ಆಕರ್ಷಣೆಯ ಕೇಂದ್ರ ಬಿಂದು ಆಗಿರಲಿದ್ದಾರೆ.

'ಹರಾಜಿನ ವೇಳೆ ಅಹ್ಮದ್ ಆಕರ್ಷಣೀಯ ಆಟಗಾರರಾಗಿರಲಿದ್ದಾರೆ. ಚೈನಾಮನ್ ಮಾದರಿಯ ಈ ಬೌಲರ್ ಐಪಿಎಲ್ ಹಾರಾಜಿನ ಸಮಯದಲ್ಲಿ ಎಲ್ಲ ತಂಡಗಳ ಗಮನ ಸೆಳೆಯಲಿದ್ದಾರೆ. ಇತ್ತೀಚೆಗೆ ಭಾರತಕ್ಕೆ ಪ್ರವಾಸ ಬಂದಿದ್ದ ಅಫ್ಘಾನ್ ಅಂಡರ್ 19 ತಂಡದ ಪರವೂ ಅಹ್ಮದ್ ಉತ್ತಮ ಪ್ರದರ್ಶನ ನೀಡಿದ್ದರು,' ಎಂದು ಐಪಿಎಲ್ ಅಧಿಕಾರಿಗಳು ಮೈಖೇಲ್‌ಗೆ ತಿಳಿಸಿದ್ದಾರೆ.

ಹರಾಜು ಪ್ರಕ್ರಿಯೆಗೂ ಮುನ್ನ ಐಪಿಎಲ್ ಮಾಜಿ ಚಾಂಪಿಯನ್ ತಂಡವಾದ ರಾಜಸ್ಥಾನ ರಾಯಲ್ಸ್ (ಆರ್‌ಆರ್) ನೂರ್ ಅಹ್ಮದ್ ಅವರ ಟ್ರೈಯಲ್ಸ್ ನೋಡಿದೆ. ಆ ವೇಳೆ ಅಹ್ಮದ್ ಪ್ರಭಾವಶಾಲಿ ಬೌಲಿಂಗ್ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಬಾರಿಯ ಹರಾಜು ಕೋಲ್ಕತ್ತಾದಲ್ಲಿ ಡಿಸೆಂಬರ್ 19ರಂದು 3.30 pmಗೆ ಆರಂಭಗೊಳ್ಳಲಿದೆ.

Story first published: Monday, December 16, 2019, 16:32 [IST]
Other articles published on Dec 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+