For Quick Alerts
ALLOW NOTIFICATIONS  
For Daily Alerts
 

ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್

1st odi; india lost first odi match against west indies

ಚೆನ್ನೈನ ಎಂಎ ಚಿದಂಬರ್ಂ ಸ್ಟೇಡಿಯಮ್‌ನಲ್ಲಿ ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಟೀಮ್ ಇಂಡಿಯಾವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವನ್ನು ಸಾಧಿಸಿ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.

ಭಾರತ ನೀಡಿದ 289 ರನ್‌ಗಳ ಸವಾಲಿನ ಮೊತ್ತವನ್ನು ವೆಸ್ಟ್‌ ಇಂಡೀಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನತ್ತಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಟಿ20ಯಲ್ಲಿ ಅನುಭವಿಸಿದ ಸರಣಿ ಸೋಲಿಗೆ ಏಕದಿನ ಸರಣಿ ಗೆದ್ದು ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಯಶಸ್ಸು ಕಂಡಿದೆ.

ವಿಂಡೀಸ್ ಪರವಾಗಿ ಶಿಮ್ರಾನ್ ಹೇಟ್ಮೇರ್ ಮತ್ತು ಶೇಯ್ ಹೋಪ್ ದ್ವಿಶತಕದ ಜೊತೆಯಾಟವನ್ನು ನೀಡಿ ಗೆಲುವನ್ನು ಯಾವ ಕ್ಷಣದಲ್ಲೂ ಭಾರತ ಕಡೆ ವಾಲದಂತೆ ನೋಡೊಕೊಂಡರು. ಹೇಟ್ಮೇರ್ ಸ್ಪೋಟಕ 139 ರನ್(106 ಎಸೆತ) ಸಿಡಿಸಿದರೆ ಹೋಪ್ ತಾಳ್ಮೆಯ ಅಜೇಯ ಶತಕ 102 ರನ್(151 ಎಸೆತ) ಸಿಡಿಸಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

ಭಾರತ ಆರಂಭದಲ್ಲೇ ಸುನಿಲ್ ಅಂಬ್ರಿಸ್ ವಿಕೆಟ್ ಪಡೆದು ಯಶಸ್ಸು ಪಡೆಯಿತು. ಆದರೆ ಬಳಿಕ ಯಾವ ಬೌಲರ್‌ಗಳು ಕೂಡ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಂತಿಮವಾಗಿ ವೆಸ್ಟ್‌ ಇಂಡೀಸ್ 47.5 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಗೆಲುವನ್ನು ತನ್ನದಾಗಿಸಿಕೊಂಡಿತು. ಭಾರತದ ಪರವಾಗಿ ಚಹರ್ ಮತ್ತು ಶಮಿ ಮಾತ್ರ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಮೊತ್ತ ಪೇರಿಸಿತು. ಭಾರತ ಏಳು ವಿಕೆಟ್ ಕಳೆದುಕೊಂಡು 288 ರನ್ ಬಾರಿಸಿ ವೆಸ್ಟ್ ಇಂಡೀಸ್‌ಗೆ ಸವಾಲಿನ ಗುರಿ ನೀಡಿತ್ತು.

Story first published: Sunday, December 15, 2019, 22:26 [IST]
Other articles published on Dec 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+