ಮೊದಲ ಟಿ-20 ಪಂದ್ಯ: ಅತಿಥಿಗಳಿಗೆ ಕರಿಮುಗಿಲ ಸ್ವಾಗತ!

ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಿನ ಸರಣಿ ಆರಂಭಕ್ಕೆ ಇನ್ನೆರಡು ದಿನಮಾತ್ರವೇ ಬಾಕಿ ಇದೆ.ಡಿಸೆಂಬರ್ ಆರನೇ ತಾರೀಕಿನಂದು ಮೊದಲ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಹೈದರಾಬಾದ್‌ನಲ್ಲಿ ಮೊದಲ ಪಂದ್ಯ ನಡೆಯಲಿದ್ದು ರಾಜೀವ್ ಗಾಂಧಿ ಸ್ಟೇಡಿಯಮ್ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕ ಈಗ ಎದುರಾಗಿದೆ.
ಹೈದರಾಬಾದ್‌ಗೆ ಈಗಾಗಲೇ ಆತಿಥೇಯ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಆಗಮಿಸಿದ್ದು ವಿಂಡಿಸ್ ತಂಡ ಅದಾಗಲೇ ಪ್ರ್ಯಾಕ್ಟೀಸ್‌ನಲ್ಲಿ ತೊಡಗಿದೆ. ಆದರೆ ಹೈದರಾಬಾದ್‌ನಾದ್ಯಂತ ಮೋಡದ ವಾತಾವರಣವಿದ್ದು ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ರಾಜೀವ್ ಗಾಂಧಿ ಮೈದಾನದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೊನೆಯ ಬಾರಿಗೆ ಟಿ-ಟ್ವೆಂಟಿ ಸರಣಿಯನ್ನು ಆಯೋಜಿಸಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸಮಬಲದಲ್ಲಿತ್ತು. ಆದರೆ ನಿರ್ಣಾಯಕ ವಾಗಿದ್ದ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಒಂದೂ ಎಸೆತ ಕಾಣದೆ ಪಂದ್ಯ ರದ್ದಾಗಿತ್ತು. ಇದೇ ಆತಂಕ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿದೆ.
ಟಿ20ಯಲ್ಲಿ ಹಾಲಿ ಚಾಂಪಿಯನ್ ಆಗಿರುವ ವೆಸ್ಟ್‌ಇಂಡೀಸ್ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಭಾರತವನ್ನು ತವರಿನಲ್ಲೇ ಸೋಲಿಸಿ ವಿಶ್ವಕಪ್‌ಗೆ ಹುಮ್ಮಸ್ಸಿನಿಂದ ತಯಾರಾಗುವ ತವಕದಲ್ಲಿದೆ. ಆದರೆ ಸದ್ಯ ಭಾರತವೇ ಈ ಟೂರ್ನಿಯಲ್ಲಿ ಗೆಲ್ಲುವ ಫೇವರೀಟ್ ತಂಡ ಎನಿಸಿದೆ. ಹಾಗಿದ್ದರೂ ಟಿ-20ಗೆ ಹೇಳಿ ಮಾಡಿಸಿದಂತಿರುವ ಈ ವಿಂಡೀಸ್ ಟೀಮ್ ಇಂಡಿಯಾಗೆ ಸುಲಭ ಸವಾಲಂತೂ ಅಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications