ಶ್ರೀಲಂಕಾ ವಿರುದ್ಧ ಗೆಲ್ಲಲು ಭಾರತಕ್ಕೆ 176 ರನ್ ಬೇಕು
ಗಾಲೆ (ಶ್ರೀಲಂಕಾ), ಆಗಸ್ಟ್ 14: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಶ್ರೀಲಂಕಾ ನೆಲದಲ್ಲಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದೆ. ಭಾರತದ ಸ್ಪಿನ್ನರ್ ಗಳ ಕೈಚಳಕದಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಮೇಲೆ ಬಿಗಿ ಹಿಡಿತ ಸಾಧಿಸಿತು. ಅದರೆ, ಲಹಿರು ತಿರುಮನ್ನೆ ಹಾಗೂ ದಿನೇಶ್ ಚಾಂಡಿಮಾಲ್ ಆಟದಿಂದಾಗಿ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 367 ರನ್ ಸ್ಕೋರಿಗೆ ಆಲೌಟ್ ಆಗಿದೆ. ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಭಾರತಕ್ಕೆ 176 ರನ್ ಗಳ ಅಗತ್ಯವಿದೆ.
ಪಂದ್ಯದ ಮೂರನೇ ದಿನವಾದ ಶುಕ್ರವಾರದ ಭೋಜನ ವಿರಾಮದ ವೇಳೆಗೆ ಲಂಕನ್ನರು 108 ರನ್ನಿಗೆ 5 ವಿಕೆಟ್ ಕಳೆದುಕೊಂಡು ದುಃಸ್ಥಿತಿಯಲ್ಲಿತ್ತು. ಅದರೆ, ದಿನೇಶ್ ಚಂಡಿಮಾಲ್ ಅವರು ಉತ್ತಮ ಆಟ ಪ್ರದರ್ಶಿಸಿ 162 ರನ್ ಗಳಿಸಿ ಅಜೇಯರಾಗಿ ಉಳಿದರು.
ಚಂಡಿಮಾಲ್ ಅವರ ಇನ್ನಿಂಗ್ಸ್ ನಲ್ಲಿ 19 ಬೌಂಡರಿ ಹಾಗೂ 4 ಸಿಕ್ಸರ್ ಇದೆ. ತಿರುಮನ್ನೆ 44 ರನ್ ಬಾರಿಸಿದರೆ, ಮುಬಾರಕ್ 49 ರನ್ ಗಳಿಸಿ ಪ್ರತಿರೋಧ ಒಡ್ಡಿದರು.

ಭಾರತದ ಪರ ಆರ್ ಅಶ್ವಿನ್ ಅವರು ಎರಡನೇ ಇನ್ನಿಂಗ್ಸ್ ನಲ್ಲಿ 4 ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಒಟ್ಟು 10 ವಿಕೆಟ್ ಪಡೆದುಕೊಂಡಿದ್ದಾರೆ. ಮಿಶ್ರಾ 3 ವಿಕೆಟ್ ಸಿಕ್ಕರೆ, ಹರ್ಭಜನ್, ವರುಣ್ ಅರೋನ್, ಇಶಾಂತ್ ಅವರಿಗೆ ತಲಾ 1 ವಿಕೆಟ್ ಲಭಿಸಿತು. ಗೆಲುವಿನ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ. ಕೆಎಲ್ ರಾಹುಲ್ 5 ರನ್ ಗಳಿಸಿ ಹೆರಾತ್ ಬೌಲಿಂಗ್ ನಲ್ಲಿ ಔಟಾದರು.
ಆರ್ ಅಶ್ವಿನ್ ಅವರು 2/43 ಹಾಗೂ ಅಮಿತ್ ಮಿಶ್ರಾ ಅವರು 2/5 ವಿಕೆಟ್ ಪಡೆದರೆ, ವರುಣ್ ಅರೋನ್ 1/24 ಗಳಿಸಿದ್ದಾರೆ. ಅದರೆ, ನಂತರ ಚಂಡಿಮಾಲ್ ಹಾಗೂ ತಿರುಮನ್ನೆ ಉತ್ತಮ ಜೊತೆಯಾಟ ಪ್ರದರ್ಶಿಸಿ ಪ್ರತಿರೋಧ ತೋರಿದ್ದಾರೆ.

ವಿದಾಯದ ಹೊಸ್ತಿಲಲ್ಲಿರುವ ಕುಮಾರ್ ಸಂಗಕ್ಕಾರ ಅವರು 70 ಎಸೆತಗಳಲ್ಲಿ 40 ರನ್ 5 ಬೌಂಡರಿ ಬಾರಿಸಿದರೆ, ನಾಯಕ ಏಂಜೆಲೋ ಮ್ಯಾಥ್ಯೂಸ್ ಅವರು 39 ರನ್ ಗಳಿಸಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications