For Quick Alerts
ALLOW NOTIFICATIONS  
For Daily Alerts
 

2011 ODI World Cup ಗೆದ್ದ ತಂಡದ ಸದಸ್ಯರು ಈಗ ಏನು ಮಾಡ್ತಿದ್ದಾರೆ?

ಭಾರತದ ಕೋಟ್ಯಾಂಟತರ ಅಭಿಮಾನಿಗಳ ಆಸೆ, ಕನಸನ್ನು ಈಡೇರಿಸಿದ ಕ್ಷಣ. ಏಪ್ರಿಲ್‌ 2, 2011. ಇದೇ ದಿನದಂದು ಟೀಮ್ ಇಂಡಿಯಾ ಎರಡನೇ ಬಾರಿಗೆ ಏಕದಿನ ವಿಶ್ವಕಪ್‌ ಮುಕುಟವನ್ನು ತೊಟ್ಟುಕೊಂಡಿತ್ತು. ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಇತಿಹಾಸದ ಪುಟದಲ್ಲಿ ಸ್ಥಾನವನ್ನು ಪಡೆದರು. ಏಕದಿನ ವಿಶ್ವಕಪ್‌ ಗೆದ್ದ ಎರಡನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. ಇಂದಿಗೆ 2011 ಏಕದಿನ ವಿಶ್ವಕಪ್‌ ಗೆದ್ದು 14 ವರ್ಷಗಳು ಕಳೆದಿವೆ. ಹಾಗಿದ್ದರೆ ಆಗಿನ ಟೀಮ್ ಇಂಡಿಯಾದ ಸದಸ್ಯರು ಈಗ ಏನು ಮಾಡ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಆ ಬಗ್ಗೆ ವರದಿ ಇಲ್ಲಿದೆ.

ವಾಂಖೇಡೆ ಅಂಗಳದಲ್ಲಿ ಅಂದು ನಡೆದಿದ್ದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಶ್ರೀಲಂಕಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 274 ರನ್‌ ಕಲೆ ಹಾಕಿತು. ಈ ವೇಳೆ ತಂಡದ ಸ್ಟಾರ್ ಆಟಗಾರ ಮಹೇಲ್ ಜಯವರ್ಧನೆ 103 ರನ್‌ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಭಾರತದ ಪರ ಯುವರಾಜ್ ಸಿಂಗ್ ಹಾಗೂ ಜಹೀರ್ ಖಾನ್‌ ತಲಾ 2 ವಿಕೆಟ್‌ ಕಬಳಿಸಿದ್ದರು. ಗುರಿಯನ್ನು ಬೆನಟ್ಟಿದ ಭಾರತದ ಪರ ಗೌತಮ್ ಗಂಭೀರ್ 97 ಹಾಗೂ ಎಂಎಸ್‌ ಧೋನಿ 91 ಇವರುಗಳ ಅಮೋಘ ಆಟದ ಪರಿಣಾಮ 48.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 277 ರನ್‌ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿತು.

2011 World Cup Heroes Where Are India s Champions Now

ವೀರೇಂದ್ರ ಸೆಹ್ವಾಗ್‌

ಸ್ಫೋಟಕ ಆರಂಭಿಕ ಬ್ಯಾಟರ್‌ ವೀರೇಂದ್ರ ಸೆಹ್ವಾಗ್ 2013ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈಗ ಇವರು ಹಿಂದಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್‌

ಮುಂಬೈ ಇಂಡಿಯನ್ಸ್ ತಂಡದ ಐಕಾನಿಕ್ ಪ್ಲೇಯರ್. ಇವರು ಮಾಜಿ ಆಟಗಾರರ ತಂಡದೊಂದಿಗೆ ಕೆಲವು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಇಂಟರ್‌ನ್ಯಾಷನಲ್‌ ಮಾಸ್ಟರ್ಸ್‌ ಲೀಗ್‌ನಲ್ಲಿ ಇವರು ಬ್ಯಾಟ್‌ ಮಾಡಿದ್ದಾರೆ.

2011 World Cup Heroes Where Are India s Champions Now

ಗೌತಮ್ ಗಂಭೀರ್

ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಗೌತಮ್ ಗಂಭೀರ್‌, ಸದ್ಯ ಭಾರತ ತಂಡದ ಕೋಚ್‌. ಅಲ್ಲದೆ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್‌ಗೆ ಚಾಂಪಿಯನ್‌ ಪಟ್ಟವನ್ನು ತೊಡಿಸಿದ್ದ ಮೆಂಟರ್.

ವಿರಾಟ್‌ ಕೊಹ್ಲಿ

2011ರ ವಿಶ್ವಕಪ್ ತಂಡದಲ್ಲಿದ್ದ ಆಟಗಾರ. ಸದ್ಯ ಇವರೊಬ್ಬರೇ ಸಕ್ರಿಯಾಗಿರುವುದು. ಸದ್ಯ ವಿರಾಟ್‌ಗೆ 36 ವರ್ಷ. ಐಪಿಎಲ್‌ನಲ್ಲಿ ಇವರು ಆರ್‌ಸಿಬಿ ಪರ ಕಣಕ್ಕೆ ಇಳಿಯುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರು ತಮ್ಮ ಬ್ಯಾಟಿಂಗ್‌ನಿಂದ ವಿಶಿಷ್ಠ ಛಾಪು ಮೂಡಿಸಿದ ಆಟಗಾರ.

ಎಂಎಸ್‌ ಧೋನಿ

44 ವಯಸ್ಸಿನ ಹತ್ತಿರ ಇರುವ ಧೋನಿ ಈಗಲೂ ಫಿಟ್ ಆಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರ ಇವರು ಐಪಿಎಲ್ ಆಡುತ್ತಿದ್ದಾರೆ. ಇವರು ಭಾರತದ ಪರ ಅಗಸ್ಟ್ 15, 2020ರಂದು ಕೊನೆಯ ಪಂದ್ಯವನ್ನು ಆಡಿದ್ದರು.

ಯುವರಾಜ್‌ ಸಿಂಗ್‌

ಸಿಕ್ಸರ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಯುವರಾಜ್ ಸಿಂಗ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬಾಯ್ ಹೇಳಿದ್ದಾರೆ. ಸದ್ಯ ಇವರು ವಿದೇಶಿ ಟಿ20 ಲೀಗ್‌ಗಳಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಇವರು ಯುವ ಆಟಗಾರರಿಗೆ ಮೆಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸುರೇಶ್ ರೈನಾ

2022ರಲ್ಲಿ ಎಲ್ಲ ಮಾದಾರಿಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸುರೇಶ್‌ ರೈನಾ ಸದ್ಯ ಐಪಿಎಲ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹರ್ಭಜನ್ ಸಿಂಗ್

ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್‌ ಸಹ ತಮ್ಮ ನಿವೃತ್ತಿಯ ಬಳಿಕ ಕಾಮೆಂಟರಿಯತ್ತ ಮುಖ ಮಾಡಿದ್ದಾರೆ.

ಜಹೀರ್ ಖಾನ್‌

ಭಾರತ ಕಂಡ ಉತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಜಹೀರ್ ಖಾನ್‌ ಸದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮುಂಬೈ ಇಂಡಿಯನ್ಸ್ ತಂಡದಲ್ಲೂ ಹಲವು ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ರವಿ ಶಾಸ್ತ್ರಿ ಕೋಚ್ ಆಗಿದ್ದಾಗ ಇವರು ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಮುನಫ್‌ ಪಟೇಲ್‌

ಮುನಫ್‌ ಪಟೇಲ್‌ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀಶಾಂತ್

ಟೀಮ್ ಇಂಡಿಯಾದ ವೇಗಿ ಶ್ರೀಶಾಂತ್‌ ಈಗ ಕ್ರಿಕೆಟ್‌ ಎಕ್ಸ್‌ಪರ್ಟ್‌ ಕಾರ್ಯವನ್ನು ಮಾಡುತ್ತಿದ್ದಾರೆ. ಇವರು ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

Story first published: Wednesday, April 2, 2025, 9:09 [IST]
Other articles published on Apr 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+