Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2019 vs 2023 ವಿಶ್ವಕಪ್: ಅದೇ ಕೋರ್ ಟೀಮ್.. ಆದರೂ ಇಷ್ಟೊಂದು ಬದಲಾವಣೆ..: ವ್ಯತಾಸ ಮಾಡಿದ್ದೇ ಈ 3 ಅಂಶಗಳು

2019ರ ವಿಶ್ವಕಪ್ ಟೂರ್ನಿಯಲ್ಲಿ ಮತ್ತು 2023ರ ವಿಶ್ವಕಪ್ ಟೂರ್ನಿಯ ಟೀಮ್ ಇಂಡಿಯಾ ತಂಡ ಬಹುತೇಕ ಒಂದೇ ರೀತಿ ಇದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಹೆಚ್ಚಿನ ಆಟಗಾರರು ಈ ಬಾರಿಯ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ವಿಶ್ವಕಪ್ ತಂಡದಲ್ಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಕುಲ್‌ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕಳೆದ ಬಾರಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿಯೂ ಸ್ಥಾನ ಪಡೆದುಕೊಂಡಿದ್ದರು. ಈ ಬಾರಿ ಕೆಲ ಹೊಸ ಆಟಗಾರರು ಸೇರಿಕೊಂಡಿದ್ದರೂ ಕೋರ್ ತಂಡ ಅದೇ ಇದೆ.

ಹಾಗಿದ್ದರೂ 2019ರ ವಿಶ್ವಕಪ್‌ನ ಲೀಗ್ ಹಂತದಲ್ಲಿ ಭಾರತ ತಂಡ ಇಂಗ್ಲೆಂಡಗ್ ವಿರುದ್ಧ ಸೋಲು ಅನುಭವಿಸಿತ್ತು. ಅದಾದ ಬಳಿಕ ಸೆಮಿಫೈನಲ್‌ನಲ್ಲಿ ಕಿವಸ್ ಪಡೆಗೆ ಶರಣಾಗಿ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಸೆಮಿಓಐನಲ್‌ಗೆ ಕೊನೆಗೊಳಿಸಿತ್ತು. ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಈವರೆಗೆ ಅಜೇಯವಾಗಿ ಉಳಿದುಕೊಂಡಿದೆ. ಅಲ್ಲದೆ ವಿಶ್ವಕಪ್ ಎತ್ತಿ ಹಿಡಿಯುವ ನೆಚ್ಚಿನ ತಂಡ ಎನಿಸಿಕೊಂಡಿದೆ.

2019 vs 2023: 3 game changing differences in Team India squad between 2019 and 2023 world cup

ಆದರೆ ಕಳೆದ ಬಾರಿಯ ವಿಶ್ವಕಪ್ ತಂಡಕ್ಕೂ ಈ ಬಾರಿಯ ವಿಶ್ವಕಪ್ ತಂಡಕ್ಕೂ ಇಷ್ಟು ಸಾಮ್ಯತೆಗಳ ಹೊರತಾಗಿಯೂ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮವಾಗಿದೆ ಎನ್ನುವುದು ನಿಸ್ಸಂಶಯ. ಹಾಗಾದರೆ ಈ ಹಿಂದಿನ ವಿಶ್ವಕಪ್ ತಂಡಕ್ಕಿಂತ ಈ ಬಾರಿಯ ಭಾರತ ವಿಶ್ವಕಪ್ ತಂಡದಲ್ಲಿ ಇರುವ ಪ್ರಮುಖ ಮೂರು ವ್ಯತ್ಯಾಸಗಳು ಯಾವುದು? ಇಲ್ಲಿದೆ ಕುತೂಹಲಕಾರಿ ಮಾಹಿತಿ.

ಆಯ್ಕೆಯಲ್ಲಿ ಸ್ಥಿರತೆ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅದ್ಭುತವಾಗಿ ಸಿದ್ಧತೆ ಮಾಡಿಕೊಂಡಿರುವುದು ಸ್ಪಷ್ಟವಾಗಿತ್ತು. ಆಡುವ ಬಳಗದ ಆಯ್ಕೆ ವಿಚಾರವಾಗಿ ಮ್ಯಾನೇಮೆಂಟ್ ಬಹಳ ಸ್ಪಷ್ಟತೆಯಿಂದ ಕೂಡಿತ್ತು. ಯಾವುದೇ ಆಟಗಾರ ಗಾಯಕ್ಕೆ ತುತ್ತಾದರೂ ಅತ್ಯುತ್ತಮ ಆಡುವ ಬಳಗವನ್ನು ಆಯ್ಕೆ ಮಾಡುವ ವಿಚಾರವಾಗಿ ಸ್ಪಷ್ಟತೆಯಿತ್ತು. 2019ರ ವಿಶ್ವಕಪ್‌ಗೂ ಮುನ್ನ ಅಂಬಾಟಿ ರಾಯುಡು ಅವರಿಗೆ ಭಾರತ ಬೆಂಬಲಿಸಿತ್ತು. ಆದರೆ ವಿಶ್ವಕಪ್ ತಂಡದಲ್ಲಿ ಅವರನ್ನು ಕೈಬಿಟ್ಟು ವಿಜಯ್ ಶಂಕರ್‌ಗೆ ಸ್ಥಾನ ನೀಡಿತ್ತು. ಆದರೆ ಈ ಬಾರಿ ಅಂಥಾ ಅಪಸವ್ಯಗಳು ನಡೆಯಲಿಲ್ಲ.

ಮೊಹಮ್ಮದ್ ಶಮಿಗೆ ಬೆಂಬಲ

ಮೊಹಮ್ಮದ್ ಶಮಿ ದೊಡ್ಡ ಮ್ಯಾಚ್ ವಿನ್ನರ್ ಎನ್ನುವುದು ನಿಸ್ಸಂಶಯ. ಆದರೆ 2019 ಮತ್ತು 2023 ಎರಡೂ ವಿಶ್ವಕಪ್‌ನಲ್ಲಿಯೂ ಶಮಿ ಭಾರತದ ಪ್ರಥಮ ಆಯ್ಕೆಯ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ ಎನ್ನುವುದು ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುತ್ತದೆ. 2019ರ ವಿಶ್ವಕಪ್‌ನಲ್ಲಿಯೂ ಮೊಹಮ್ಮದ್ ಶಮಿ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದರು ಆದರೆ 14 ವಿಕೆಟ್‌ಗಳನ್ನು ಸಂಪಾದಿಸಿದ್ದರು. ಆದರೆ ಸೆಮಿಫೈನಲ್ ಪಂದ್ಯಕ್ಕೆ ಶಮಿ ಅವರನ್ನು ಕೈಬಿಡಲಾಗಿತ್ತು. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಆ ತಪ್ಪನ್ನು ಮ್ಯಾನೇಜ್‌ಮೆಂಟ್ ಮಾಡಲಿಲ್ಲ. ಆರಂಭಿಕ ಪಂದ್ಯಗಳಲ್ಲಿ ಶಮಿ ಅವರನ್ನು ಕೈಬಿಟ್ಟಿದ್ದರೂ ಬಳಿಕ ಶಮಿ ತಮ್ಮ ಸಾಮರ್ಥ್ಯ ಪ್ರದರ್ಶನ ನೀಡಿದ ಬಳಿಕ ಅವರನ್ನು ಬದಲಾಯಿಸುವ ಯೋಚನೆಗೆ ಮುಂದಾಗಲಿಲ್ಲ. ಸೆಮಿಫೈನಲ್‌ನಲ್ಲಿ ಕಿವೀಸ್ ವಿರುದ್ಧ ಶಮಿ 7 ವಿಕೆಟ್ ಕಬಳಿಸಿ ಮ್ಯಾಚ್ ಗೆಲ್ಲಿಸಿಕೊಟ್ಟಿದ್ದರು.

ಅದ್ಭುತವಾಗಿದೆ ಭಾರತದ ಡ್ರೆಸ್ಸಿಂಗ್‌ರೂಮ್ ವಾತಾವರಣ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಡ್ರೆಸ್ಸಿಂಗ್‌ರೂಮ್ ವಾತಾವರಣ ಬಹಳ ಲಘುವಾಗಿದೆ. ಡ್ರೆಸ್ಸಿಂಗ್‌ರೂಮ್‌ನಲ್ಲಿ ಫ್ಯಾಶನ್‌ಶೋ, ರ್ಯಾಂಪ್ ವಾಕ್ ಹಾಗೂ ಬೆಸ್ಟ್ ಫೀಲ್ಡರ್ ಅವಾರ್ಡ್‌ಗಳಂಥಾ ಕಾರ್ಯಕ್ರಮಗಳು ಮೆರುಗು ಹೆಚ್ಚಿಸಿದೆ. 2019ರ ತಂಡದಲ್ಲಿಯೂ ಡ್ರೆಸ್ಸಿಂಗ್ ರೂಮ್ ವಾತಾವರಣ ಅದ್ಭುತವಾಗಿಯೇ ಇತ್ತು. ಆದರೆ ಈ ಬಾರಿಯಷ್ಟು ಶ್ರೇಷ್ಠವಾಗಿರಲಿಲ್ಲ. ಯಾಕೆಂದರೆ ಸ್ವತಃ ನಾಯ ಹಾಗೂ ಕೋಚ್ ಕೂಡ ತಂಡದ ಆಯ್ಕೆಯ ವಿಚಾರವಾಗಿ ಹೇಳಲು ಏನೂ ಇಲ್ಲ ಎಂದಿದ್ದಾರೆ.

Story first published: Sunday, November 19, 2023, 11:57 [IST]
Other articles published on Nov 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+