Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

us Open: ಕಾರ್ಲೋಸ್ ಅಲ್ಕರಾಜ್‌ ಚಾಂಪಿಯನ್: ಸ್ಪೇನ್‌ ಆಟಗಾರನಿಗೆ ಸಿಕ್ಕ ಹಣ ಎಷ್ಟು?

ಯುಎಸ್‌ ಓಪನ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಸ್ಪೇನ್‌ ಸ್ಟಾರ್‌ ಆಟಗಾರ ಕಾರ್ಲೋಸ್‌ ಅಲ್ಕರಾಜ್‌ ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದಾರೆ.

ಭಾನುವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಅಲ್ಕರಾಜ್ 6-2, 3-6, 6-1, 6-4 ಸೆಟ್‌ಗಳಿಂದ ಇಟಲಿಯ 24 ವರ್ಷದ ಸಿನ್ನರ್‌ ಅವರನ್ನು 2 ಗಂಟೆ 42 ನಿಮಿಷ ನಡೆದ ಕಾದಾಟದಲ್ಲಿ ಮಣಿಸಿದರು. ಈ ಮೂಲಕ ಸ್ಪೇನ್‌ನ ಅಲ್ಕರಾಜ್‌ ಆರನೇ ಗ್ರ್ಯಾನ್‌ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದು ಬೀಗಿದರು. ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಸಿನ್ನರ್‌ 4ನೇ ಗ್ರ್ಯಾನ್‌ ಸ್ಲ್ಯಾಮ್‌ ಟೆನಿಸ್ ಟೂರ್ನಿಯನ್ನು ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದರು. ಅಲ್ಕರಾಜ್‌ ಫ್ರೆಂಚ್‌ ಓಪನ್‌ನ ಟೂರ್ನಿಯನ್ನು 2024, 2025, ವಿಂಬಲ್ಡನ್‌ ಚಾಂಪಿಯನ್ ಪಟ್ಟವನ್ನು 2023, 2024, ಯುಎಸ್‌ ಓಪನ್‌ ಪ್ರಶಸ್ತಿಯನ್ನು 2022, 2025ರಲ್ಲಿ ಪಡೆದು ಬೀಗಿದ್ದಾರೆ.

2025 US Open Carlos Alcaraz Wins Men s Singles Bags Record 5 Million Prize

ಸಿನ್ನರ್ ಪ್ರಶಸ್ತಿಯನ್ನು ಗೆದ್ದಿಲ್ಲದಿರಬಹುದು ಆದರೆ ಈ ವರ್ಷದ ನಾಲ್ಕೂ ಗ್ರ್ಯಾನ್‌ ಸ್ಲ್ಯಾಮ್ ಫೈನಲ್‌ಗಳನ್ನು ಆಡಿದ ದಾಖಲೆ ಹೊಂದಿದ್ದಾರೆ. ಈ ಮೂಲಕ ಇವರು ಒಂದು ವರ್ಷದಲ್ಲಿ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳನ್ನು ಆಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ರಾಡ್ ಲೇವರ್ (1969), ರೋಜರ್ ಫೆಡರರ್ (2006, 2007, 2008) ಮತ್ತು ನೊವಾಕ್ ಜೊಕೊವಿಕ್ (2015, 2021, 2023) ಈ ಸಾಧನೆ ಮಾಡಿದ್ದರು.

ಅಲ್ಕರಾಜ್‌ಗೆ ಸಿಕ್ಕ ಹಣ ಎಷ್ಟು?

ಈ ಸೋಲಿನೊಂದಿಗೆ ಸಿನ್ನರ್ ಅವರ ಹಾರ್ಡ್ ಕೋರ್ಟ್‌ನಲ್ಲಿ 27 ಪಂದ್ಯಗಳ ಗೆಲುವಿನ ಸರಣಿಗೆ ಬ್ರೇಕ್‌ ಬಿದ್ದಿದೆ. ಅಲ್ಕರಾಜ್‌ ಪ್ರಶಸ್ತಿಯನ್ನು ಗೆದ್ದ ಬಳಿಕ ಸಿನ್ನರ್ ಅವರನ್ನು ಹಾಡಿ ಹೊಗಳಿದ್ದಾರೆ. ಸಿನ್ನರ್‌ ವಿರುದ್ಧ ಕಾದಾಡುವುದೇ ರೋಚಕ ಎಂದು ಅಲ್ಕರಾಜ್‌ ತಿಳಿಸಿದ್ದಾರೆ.

ಯುಎಸ್ ಓಪನ್ 2025 ಚಾಂಪಿಯನ್ ಆದ ಕಾರ್ಲೋಸ್ ಅಲ್ಕರಾಜ್‌ಗೆ ಭಾರೀ ಬಹುಮಾನ ಮೊತ್ತ ಸಿಕ್ಕಿದೆ. ಇವರು ಯುಎಸ್‌ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿರುವಂತೆ 5 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 42 ಕೋಟಿ) ಬಹುಮಾನ ಗೆದ್ದಿದ್ದಾರೆ. ಇನ್ನು ರನ್ನರ್ ಅಪ್‌ ಯಾನಿಕ್ ಸಿನ್ನರ್ ಸುಮಾರು 2.5 ಮಿಲಿಯನ್ ಡಾಲರ್ (ಸುಮಾರು ರೂ. 22 ಕೋಟಿ) ಬಹುಮಾನ ಪಡೆದಿದ್ದಾರೆ. ಈ ಬಾರಿ ಯುಎಸ್‌ ಓಪನ್‌ಗಾಗಿ ಆಯೋಜಕರು 90 90 ಮಿಲಿಯನ್ ಡಾಲರ್ (ಸುಮಾರು ರೂ. 750 ಕೋಟಿ) ಬಹುಮಾನ ಮೊತ್ತವನ್ನು ಘೋಷಿಸಿದ್ದರು. ಇದು ಕಳೆದ ಬಾರಿಗೆ ಹೋಲಿಸಿದರೆ ಶೇಕಡಾ 20 ರಷ್ಟು ಹೆಚ್ಚಾಗಿದೆ. 2024ರಲ್ಲಿ ಯುಎಸ್‌ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಆಟಗಾರ 3.6 ಮಿಲಿಯನ್ ಯುಎಸ್‌ ಡಾಲ್‌ ಪಡೆದಿದ್ದರು. ಈ ಬಹುಮಾನ ಮೊತ್ತ ಈ ಬಾರಿ ಸುಮಾರು 39% ಹೆಚ್ಚಾಗಿದೆ.

Story first published: Monday, September 8, 2025, 9:51 [IST]
Other articles published on Sep 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+