ಎರಡನೇ ಏಕದಿನ ಪಂದ್ಯ : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ
ಪೋರ್ಟ್ ಆಫ್ ಸ್ಪೇನ್, ಜೂನ್ 25: ವಿಂಡೀಸ್ ತಂಡ 205/6 ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು. ರಹಾನೆ ಶತಕ, ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಭಾರತ 310/5 ಸ್ಕೋರ್ ಮಾಡಿತ್ತು. ವಿಂಡೀಸ್ ಪರ ಹೋಪ್ 81 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಈ ಗೆಲುವಿನ ಮೂಲಕ ಭಾರತ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 1-0ಮುನ್ನಡೆ ಪಡೆದುಕೊಂಡಿದೆ.
ಟೀಂ ಇಂಡಿಯಾದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮಳೆಯ ಕಾರಣ ತಡವಾಗಿ ಆರಂಭವಾದ ಪಂದ್ಯವನ್ನು 45 ಓವರ್ ಗಳಿಗೆ ನಿಗದಿ ಪಡಿಸಲಾಗಿದೆ
ಸರಣಿಯ ವೇಳಾಪಟ್ಟಿ
ಟೀಂ ಇಂಡಿಯಾ ಇನ್ನಿಂಗ್ಸ್ :
* ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ಮತ್ತೊಮ್ಮೆ ಉತ್ತಮ ಆರಂಭ ಒದಗಿಸಿದರು.
* ಧವನ್ ಅರ್ಧಶತಕ ಸಿಡಿಸಿದರೆ, ಅಜಿಂಕ್ಯ ರಹಾನೆ ತಮ್ಮ ವೈಯಕ್ತಿಕ ಮೂರನೇ ಶತಕ ಗಳಿಸಿದರು.
ರೋಹಿತ್ ಶರ್ಮ ಅವರು ಈ ಪ್ರವಾಸದಿಂದ ಹೊರಗುಳಿದಿರುವುದರಿಂದ ಅಜಿಂಕ್ಯ ರಹಾನೆ ಅವರು ಆರಂಭಿಕ ಆಟಗಾರರಾಗಿ ಆಡುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ರವೀಂದ್ರ ಜಡೇಜ ಬದಲಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಸ್ಥಾನ ಲಭಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ 39.2 ಓವರ್ ಗಳಲ್ಲಿ ಟೀಂ ಇಂಡಿಯಾ 199/3 ಸ್ಕೋರ್ ಮಾಡಿದ್ದಾಗ ಪಂದ್ಯ ಮಳೆಗೆ ಆಹುತಿಯಾಯಿತು.

ಭಾರತ : ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್, ಎಂಎಸ್ ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಉಮೇಶ್ ಯಾದವ್.
ವೆಸ್ಟ್‌ಇಂಡೀಸ್ : ಜೇಸನ್ ಹೋಲ್ಡರ್(ನಾಯಕ), ಜೋನಾಥನ್ ಕಾರ್ಟೆರ್, ಮಿಗ್ಯುಲ್ ಕಮಿನ್ಸ್ , ಅಲ್ಝಾರಿ ಜೋಸೆಫ್, ಜೇಸನ್ ಮುಹಮ್ಮದ್, ಕೀರನ್ ಪೊಲಾರ್ಡ್, ದೇವೇಂದ್ರ ಬಿಶೂ, ರೋಸ್ಟನ್ ಚೇಸ್, ಶಾಯ್ ಹೊಪೆ(ವಿಕೆಟ್ ಕೀಪರ್), ಎವಿನ್ ಲೂವಿಸ್, ಆಶ್ಲೇ ನರ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications