Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅನಿಲ್ ಕುಂಬ್ಳೆ, ಚಂದ್ರಶೇಖರ್ ದಾಖಲೆ ಸಮಕ್ಕೆ ನಿಂತ ಅಶ್ವಿನ್

ಕಿಂಗ್ಸ್ ಟನ್(ಜಮೈಕಾ), ಜುಲೈ 31: ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ಮತ್ತೊಮ್ಮೆ ಉತ್ತಮ ಪ್ರದರ್ಶನ ಮೂಲಕ ತಂಡ ಮೇಲುಗೈ ಸಾಧಿಸಲು ನೆರವಾಗಿದ್ದಾರೆ.

[]

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಅಶ್ವಿನ್ ಅವರು 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಲೋಕದ ಸ್ಪಿನ ದಿಗ್ಗಜರಾದ ಅನಿಲ್ ಕುಂಬ್ಳೆ ಹಾಗೂ ಭಗವತ್ ಚಂದ್ರಶೇಖರ್ ಅವರ ದಾಖಲೆ ಸಮಕ್ಕೆ ನಿಂತಿದ್ದಾರೆ.

2nd Test: Ashwin equals Anil Kumble, Bhagwat Chandrasekhar's record

34 ಟೆಸ್ಟ್ ಪಂದ್ಯಗಳನ್ನಾಡಿರುವ ಆರ್ ಅಶ್ವಿನ್ ಅವರು 18ನೇ ಬಾರಿಗೆ 5 ವಿಕೆಟ್ ಪಡೆದು ದಾಖಲೆ ಬರೆದರು. ಈ ಸಾಧನೆ ಮಾಡಿದ ಮೂರನೇ ಭಾರತೀಯ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಲಿ ಕೋಚ್, ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಹಾಗೂ ಬಿ ಚಂದ್ರಶೇಖರ್ ಅವರು 18 ಬಾರಿಗೆ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. [ಜಮೈಕಾ ಟೆಸ್ಟ್ : ಗಾಯಾಳು ವಿಜಯ್ ಆಡುತ್ತಿಲ್ಲ, ರಾಹುಲ್ ಗೆ ಚಾನ್ಸ್]

ಆರ್ ಅಶ್ವಿನ್ ಅವರು 16 ಓವರ್ ಗಳಲ್ಲಿ 5/52 ಪಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡ 52.3 ಓವರ್ ಗಳಲ್ಲಿ 196 ಸ್ಕೋರಿಗೆ ಕುಸಿಯುವಂತೆ ಮಾಡಿದರು. ಜಮೈಕಾದ ಸಬೀನಾ ಪಾರ್ಕ್ ನಲ್ಲಿ ಇದು ನಾಲ್ಕನೇ ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಒಟ್ಟಾರೆ, ಅಶ್ವಿನ್ ಅವರು 34 ಪಂದ್ಯಗಳಿಂದ 188 ವಿಕೆಟ್ ಗಳಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+