ರಾಹುಲ್ ಶತಕ, 1ನೇ ದಿನದ ಅಂತ್ಯಕ್ಕೆ ಭಾರತ 319/6
ಕೊಲಂಬೋ, ಆಗಸ್ಟ್ 20: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕರ್ನಾಟಕದ ರಾಹುಲ್ ಶತಕ, ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 319/6 ಸ್ಕೋರ್ ಮಾಡಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅರ್ಧಶತಕದ ಕೊಡುಗೆ ನೀಡಿದರು.
ಕರ್ನಾಟಕದ ರಾಹುಲ್ ಶತಕ, ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 319/6 ಸ್ಕೋರ್ ಮಾಡಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅರ್ಧಶತಕದ ಕೊಡುಗೆ ನೀಡಿದರು. ರೋಹಿತ್ ಶರ್ಮ 79ರನ್ ಗಳಿಸಿ ಔಟಾದರೆ, ಸರಣಿಯಲ್ಲಿ ಮೊದಲ ಪಂದ್ಯವಾಡುತ್ತಿರುವ ಸ್ಟುವರ್ಟ್ ಬಿನ್ನಿ 10 ರನ್ ಮಾತ್ರ ಗಳಿಸಿತು. [ಕೆಎಲ್ ರಾಹುಲ್ : ಮಂಗಳೂರಿನಿಂದ ಮೆಲ್ಬೋರ್ನ್ ತನಕ]
ಪಿ ಸಾರಾ ಒವಲ್ ಮೈದಾನದಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದೆ. ಈ ಟೆಸ್ಟ್ ಪಂದ್ಯ ಕುಮಾರ್ ಸಂಗಕ್ಕಾರ ಅವರ ವಿದಾಯದ ಪಂದ್ಯವಾಗಿದೆ.

ಭೋಜನ ವಿರಾಮದ ವೇಳೆಗೆ ಭಾರತ 26 ಓವರ್ ಗಳಲ್ಲಿ 97/2 ಸ್ಕೋರ್ ಮಾಡಿತ್ತು. ವಿರಾಟ್ ಕೊಹ್ಲಿ, ರಾಹುಲ್ ಅರ್ಧಶತಕ ಗಳಿಸಿದ್ದರು. ವಿರಾಮದ ನಂತರ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದ ನಾಯಕ ಕೊಹ್ಲಿ 78 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ರಾಹುಲ್ ಅವರು ಶ್ರೀಲಂಕಾ ವಿರುದ್ಧ ಮೊದಲ ಶತಕ ದಾಖಲಿಸಿದರು. ರಾಹುಲ್ ಗೆ ರೋಹಿತ್ ಶರ್ಮ ಉತ್ತಮ ಸಾಥ್ ನೀಡಿದರು. [ತ್ರಿಶತಕ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್]
ಮುರಳಿ ವಿಜಯ್ ಅವರು ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದರೆ, ಅಜಿಂಕ್ಯ ರಹಾನೆ ಅವರು 4 ರನ್ ಗಳಿಸಿ ಪ್ರಸಾದ್ ಗೆ ವಿಕೆಟ್ ಒಪ್ಪಿಸಿದ್ದಾರೆ. 11 ರನ್ ಗಳಿಸಿದ್ದಾಗ ಕೆಎಲ್ ರಾಹುಲ್ ಅವರಿಗೆ ಜೀವದಾನ ಸಿಕ್ಕಿದೆ. ಭೋಜನ ವಿರಾಮದ ವೇಳೆಗೆ ಭಾರತ 26 ಓವರ್ ಗಳಲ್ಲಿ 97/2 ಸ್ಕೋರ್ ಮಾಡಿದೆ.ಕೆಎಲ್ ರಾಹುಲ್ 39 ಹಾಗೂ ವಿರಾಟ್ ಕೊಹ್ಲಿ 48 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.
ಭಾರತ ತನ್ನ ತಂಡದಲ್ಲಿ ಮೂರು ಬದಲಾವಣೆ ಮಾಡಿಕೊಂಡಿದೆ. ಗಾಯಾಳುವಾಗಿದ್ದ ಮುರಳಿ ವಿಜಯ್ ತಂಡಕ್ಕೆ ಮರಳಿದರೆ, ಶಿಖರ್ ಧವನ್ ಬದಲಿಗೆ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಸ್ಥಾನ ಪಡೆದುಕೊಂಡಿದ್ದಾರೆ. [ಗವಾಸ್ಕರ್ ಸಮಕ್ಕೆ ನಿಂತ ಚೊಚ್ಚಲ ಶತಕ ಸಿಡಿಸಿದ ರಾಹುಲ್]

ವರುಣ್ ಅರೋನ್ ಅವರ ಬದಲಿಗೆ ಉಮೇಶ್ ಯಾದವ್ ಸ್ಥಾನ ಪಡೆದುಕೊಂಡಿದ್ದಾರೆ. ಆಡುವ XI ನಿಂದ ಹರ್ಭಜನ್ ಸಿಂಗ್ ಅವರನ್ನು ಕೈಬಿಡಲಾಗಿದೆ. ಸುಮಾರು ಒಂದು ವರ್ಷಗಳ ನಂತರ ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿ ಅವರು ತಂಡಕ್ಕೆ ಮರಳಿದ್ದಾರೆ.
ಶ್ರೀಲಂಕಾ ತಂಡದಲ್ಲಿ ನುವಾನ್ ಪ್ರದೀಪ್ ಬದಲಿಗೆ ದುಷ್ಮಾಂತ ಛಮೀರಾ ಬಂದಿದ್ದಾರೆ, ಗಾಲೆ ಪಂದ್ಯದ ಸೋಲಿನ ನಂತರ ಕೊಹ್ಲಿ ಅವರು ಐವರು ಬೌಲರ್ ತಂತ್ರಕ್ಕೆ ತಿಲಾಂಜಲಿ ಹಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ತಂಡ 63 ರನ್ ಗಳಿಂದ ಗೆದ್ದುಕೊಂಡಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್, ಕೊಲಂಬೋದಲ್ಲಿ ಆಗಸ್ಟ್ 28ರಿಂದ ಆರಂಭವಾಗಲಿದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications