ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ : ಮಂಗಳೂರಿನಿಂದ ಮೆಲ್ಬೋರ್ನ್ ತನಕ

By Mahesh

ಮೆಲ್ಬೋರ್ನ್, ಡಿ.26: ಕರ್ನಾಟಕದ ಪ್ರತಿಭಾವಂತ ಕ್ರಿಕೆಟರ್ ಕೆಎಲ್ ರಾಹುಲ್ ಅವರಿಗೆ ಶುಕ್ರವಾರ ಬೆಳಗ್ಗೆ ಟೀಂ ಇಂಡಿಯಾ ಪರ ಆಡುವ ಕನಸು ನನಸಾಗಿದೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ) ದಲ್ಲಿ ನಡೆದಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 22 ವರ್ಷ ವಯಸ್ಸಿನ ಕೆಎಲ್ ರಾಹುಲ್ ಅವರು ಭಾರತದ 284ನೇ ಆಟಗಾರನಾಗಿ ಟೆಸ್ಟ್ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದಾರೆ.

ಆದರೆ, ರಾಹುಲ್ ಈ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿಲ್ಲ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ನಂ.6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕಾಗಿದೆ. ರೋಹಿತ್ ಶರ್ಮ ಬದಲಿಗೆ ರಾಹುಲ್ ಕಣಕ್ಕಿಳಿಯುತ್ತಿದ್ದಾರೆ. [ಕೆಎಲ್ ರಾಹುಲ್ : ಮಂಗಳೂರಿನಿಂದ ಮೆಲ್ಬೋರ್ನ್ ತನಕ]

ರಾಹುಲ್ ಗೆ ನಾಯಕ ಎಂಎಸ್ ಧೋನಿ ಅವರು ಟೆಸ್ಟ್ ಕ್ಯಾಪ್ ನೀಡಿ ತಂಡಕ್ಕೆ ಬರಮಾಡಿಕೊಂಡರು. ಉಳಿದ ಆಟಗಾರರು ಚಪ್ಪಾಳೆ ತಟ್ಟಿ ಶುಭ ಹಾರೈಸಿದರು.

Mangaluru to Melbourne: Who is KL Rahul?

ಪ್ರತಿಭಾವಂತ ರಾಹುಲ್: 11 ವರ್ಷ ವಯಸ್ಸಿನಿಂದ ಕ್ರಿಕೆಟ್ ಬಗ್ಗೆ ಗೀಳು ಅಂಟಿಸಿಕೊಂಡ ರಾಹುಲ್ 2013-14 ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯರಾಗಿದ್ದರಲ್ಲದೆ ರಣಜಿ ಋತುವಿನಲ್ಲಿ 50 ರನ್ ಸರಾಸರಿಯಂತೆ 1,158 ರನ್ ಗಳಿಸಿ ತಂಡ ಚಾಂಪಿಯನ್ ಆಗಲು ತಮ್ಮ ಕೊಡುಗೆ ನೀಡಿದ್ದರು.

ಅದರೆ, ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಮುಖ್ಯವಾಗಿ ಕಾರಣವಾಗಿದ್ದು, ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ಪರ ಆಡುತ್ತಾ ಸತತ ಎರಡು ಇನ್ನಿಂಗ್ಸ್ ನಲ್ಲಿ ಶತಕ(185 ಹಾಗೂ 130) ಬಾರಿಸಿದ್ದು ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಗೆ ಬಿದ್ದಿತ್ತು.

ಕುಡ್ಲದ ಹುಡುಗ ರಾಹುಲ್: ಕುಡ್ಲದ ಎಲ್ಲಾ ಹುಡುಗರಂತೆ ನೆಹರೂ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದ ರಾಹುಲ್ ಅವರಿಗೆ ಸ್ಯಾಮುಯಲ್ ಜಯರಾಜ್ ಮುತ್ತು ಕೋಚ್ ಆಗಿದ್ದರು. ಇಂದಿಗೂ ತಮ್ಮ ಗುರುವಿನ ಜೊತೆ ರಾಹುಲ್ ಸಂಪರ್ಕದಲ್ಲಿದ್ದು ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಾರೆ ಎಂಬುದು ವಿಶೇಷ.

17ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಶಿಫ್ಟ್ ಆದ ರಾಹುಲ್ ಅಂಡರ್ 19 ವಿಶ್ವಕಪ್ ತಂಡಲ್ಲಿ 2010ರಲ್ಲಿ ಆಡಿದ್ದರು. ಅದೇ ವರ್ಷ ಕರ್ನಾಟಕ ರಣಜಿ ತಂಡ ಸೇರಿ ಪಂಜಾಬ್ ವಿರುದ್ಧ ಮೊದಲ ಪಂದ್ಯವಾಡಿದರು.

ಕ್ರೀಡೆ ಎಂದರೆ ಅವನಿಗೆ ಪ್ರಾಣ: ರಾಹುಲ್ 11 ವರ್ಷದಿಂದ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ. ಅದರೆ, ಓದಿನಲ್ಲೂ ಮುಂದಿದ್ದ. ವಾಲಿಬಾಲ್, ಹಾಕಿ, ಫುಟ್ಬಾಲ್ ಹೀಗೆ ಶಾಲೆಯಲ್ಲಿ ಎಲ್ಲಾ ಕ್ರೀಡೆಗಳಲ್ಲೂ ಸೈ ಎನಿಸಿಕೊಂಡಿದ್ದ. ಅವನು ಭಾರತ ತಂಡಕ್ಕೆ ಆಡುತ್ತಿರುವುದು ಹೆಮ್ಮೆಯ ವಿಶೇಷ ಎಂದು ರಾಹುಲ್ ತಂದೆ ಡಾ. ಲೋಕೇಶ್ ಒನ್ ಇಂಡಿಯಾಗೆ ತಿಳಿಸಿದ್ದಾರೆ.

KL Rahul


ಕುಟುಂಬದ ಬೆಂಬಲ: ಡಾ.ಲೋಕೇಶ್ ಅವರು ಭೂಗರ್ಭವಿಜ್ಞಾನದ ಪ್ರೊಫೆಸರ್(NITK) ಸುರತ್ಕಲ್, ರಾಹುಲ್ ಅವರ ತಾಯಿ ರಾಜೇಶ್ವರಿ ಮಂಗಳೂರು ವಿವಿಯಲ್ಲಿ ಇತಿಹಾಸದ ಪ್ರೊಫೆಸರ್ ಆಗಿದ್ದಾರೆ.

ಸುನಿಲ್ ಗವಾಸ್ಕರ್ ಅವರ ಅಭಿಮಾನಿಯಾದ ಲೋಕೇಶ್ ಅವರು ತಮ್ಮ ಮಗನಿಗೆ ಗವಾಸ್ಕರ್ ಅವರ ಮಗನ ಹೆಸರು ಇಡಲು ಇಚ್ಛಿಸಿ ರಾಹುಲ್ ಎಂದು ಹೆಸರಿಟ್ಟರು. ಅದರೆ, ನಂತರ ಗವಾಸ್ಕರ್ ಮಗನ ಹೆಸರು ರಾಹುಲ್ ಅಲ್ಲ ರೋಹನ್ ಎಂದು ತಿಳಿಯಿತು. ಅದರೆ, ಮಗನ ಹೆಸರು ಬದಲಾಯಿಸಲು ಲೋಕೇಶ್ ಅವರು ಇ‍ಚ್ಛಿಸಲಿಲ್ಲ

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ), ಸನ್ ರೈಸರ್ಸ್ ಹೈದರಾಬಾದ್(ಎಸ್ ಆರ್ ಎಚ್) ಪರ ಆಡಿರುವ ರಾಹುಲ್ ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರ ಅಪ್ಪಟ ಅಭಿಮಾನಿ. ವಿರಾಟ್ ಕೊಹ್ಲಿ, ಎಬಿ ಡಿವಿಲೇಯರ್ಸ್, ಡೇಲ್ ಸ್ಟೈನ್ ಅವರ ಮಾರ್ಗದರ್ಶನ ಸ್ಫೂರ್ತಿದಾಯಕ ಎಂದಿದ್ದಾರೆ.

ಕೆ ಲೋಕೇಶ್ ರಾಹುಲ್ ಸಂಕ್ಷಿಪ್ತ ಪರಿಚಯ

* ಹುಟ್ಟಿದ ದಿನಾಂಕ: ಏಪ್ರಿಲ್ 18, 1992.

* ಬಲಗೈ ಆರಂಭಿಕ ಆಟಗಾರ, ವಿಕೆಟ್ ಕೀಪರ್.

* ಆಡಿರುವ ತಂಡಗಳು: ಭಾರತ, ಕರ್ನಾಟಕ, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು

* ಪ್ರಥಮ ದರ್ಜೆ ಪಂದ್ಯಗಳು: 27

* ಪ್ರಥಮ ದರ್ಜೆ ಪಾದರ್ಪಣೆ: 2010ರ ನವೆಂಬರ್ ನಲ್ಲಿ ಕರ್ನಾಟಕ vs ಪಂಜಾಬ್ ಪಂದ್ಯ, ಮೊಹಾಲಿ.
* ರನ್ : 2,100
* ಸರಾಸರಿ: 51.21
* ಶತಕ: 6
* ಅರ್ಧಶತಕ: 8

* 2 ಶತಕ ಒಂದೇ ಪಂದ್ಯದಲ್ಲಿ( ದುಲೀಪ್ ಟ್ರೋಫಿ ಫೈನಲ್ ದಕ್ಷಿಣ ವಲಯ vs ಕೇಂದ್ರ ವಲಯ)

* 2013-14ರ ರಣಜಿ ಋತುವಿನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಕೆ(1,158 ರನ್)

* ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 1 ಕೋಟಿ ರು ನೀಡಿ ಹರಾಜಿನಲ್ಲಿ ಖರೀದಿಸಿತ್ತು.

* ಮೊದಲ ಕೋಚ್ : ಸ್ಯಾಮುಯಲ್ ಜಯರಾಜ್ ಮುತ್ತು, ಮಂಗಳೂರು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X