ಬರ್ತ್ ಡೇ ಗರ್ಲ್ ಸ್ಮೃತಿ ಮಂಧಾನರ 3 ಅಪರೂಪದ ದಾಖಲೆಗಳಿವು!

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಜುಲೈ 18ಕ್ಕೆ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಂಡದ ಯುವ ಆಟಗಾರ್ತಿಯರ ಸಾಲಿನಲ್ಲಿರುವ ಮಂಧಾನ, 16ನೇ ವಯಸ್ಸಿನಲ್ಲಿ ಏಕದಿನ ಕ್ರಿಕೆಟ್ ಮತ್ತು ಟಿ20ಐ ಕ್ರಿಕೆಟ್‌ಗಾಗಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಮಂಧಾನ ಮೂಲತಃ ಮುಂಬೈಯವರು.
3 ಟೆಸ್ಟ್ ಪಂದ್ಯಗಳಲ್ಲಿ ಮಂಧಾನ 167 ರನ್ ಬಾರಿಸಿದ್ದಾರೆ. ಇನ್ನು 59 ಏಕದಿನ ಪಂದ್ಯಗಳಲ್ಲಿ 2253 ರನ್, 81 ಟಿ20ಐ ಪಂದ್ಯಗಳಲ್ಲಿ 1901 ರನ್ ದಾಖಲೆ ಹೊಂದಿದ್ದಾರೆ. ಮಂಧಾನ ಹುಟ್ಟು ಹಬ್ಬದ ವಿಶೇಷವಾಗಿ ಅವರ ಅಪರೂಪದ ದಾಖಲೆಗಳತ್ತ ಒಮ್ಮೆ ಕಣ್ಣಾಯಿಸಿಬಿಡಿ.

ಟಿ20ಐನ ಅತೀ ಕಿರಿಯ ನಾಯಕಿ
ಕ್ರಿಕೆಟ್ ಮಾದರಿಗಳಲ್ಲಿ ಅತೀ ಚುಟುಕು ಕ್ರಿಕೆಟ್ ಮಾದರಿಯಾಗಿರುವ ಟಿ20ಐ ಕ್ರಿಕೆಟ್‌ಗೆ ಸ್ಮೃತಿ ಮಂಧಾನ ಭಾರತೀಯ ತಂಡದ ನಾಯಕಿಯಾಗಿದ್ದಾರೆ. 2019ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಕಣಕ್ಕಿಳಿಯುವಾಗ ಮಂಧಾನ ಇತಿಹಾಸ ನಿರ್ಮಿಸಿದ್ದರು. ಯಾಕೆಂದರೆ ಅವರಿಗಾಗ 22 ವರ್ಷ 229 ದಿನ ವಯಸ್ಸಾಗಿತ್ತು. ಮಂಧಾನ ಬಿಟ್ಟರೆ ಹರ್ಮನ್ ಪ್ರೀತ್ ಕೌರ್ 23 ವರ್ಷ 237 ದಿನ, ಮಿಥಾಲಿ ರಾಜ್ 23 ವರ್ಷ 245 ದಿನದೊಂದಿಗೆ ಕಿರಿಯ ನಾಯಕಿ ದಾಖಲೆ ಪಟ್ಟಿಯಲ್ಲಿ ಅನಂತರದ ಸ್ಥಾನಗಳಲ್ಲಿದ್ದಾರೆ.

ಅತ್ಯಧಿಕ ರನ್ ದಾಖಲೆ
2019ರ ವಿಶ್ವಕಪ್ ಕ್ವಾಲಿಫಿಕೇಶನ್ ಹಾದಿಯಲ್ಲಿ ಸ್ಮೃತಿ ಮಂಧಾನ ಭಾರತೀಯ ತಂಡದಲ್ಲಿ ಪ್ರಭಾವಿ ಬ್ಯಾಟ್ಸ್‌ಮನ್ ಆಗಿದ್ದರು. ವುಮೆನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಂಧಾನ 16 ಪಂದ್ಯಗಳಲ್ಲಿ 65.07ರ ಸರಾಸರಿಯಂತೆ 911 ರನ್ ಗಳಿಸಿದ್ದರು. ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಮಂಧಾನ, ಯುವ ಆಟಗಾರ್ತಿ ಶೆಫಾಲಿ ವರ್ಮಾ ಜೊತೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಅತೀ ವೇಗದ ಶತಕ ಮೈಲಿಗಲ್ಲು
ಟಿ20ಐ ಕ್ರಿಕೆಟ್‌ನಲ್ಲಿ ಅತೀ ವೇಗದ 1000 ರನ್ ದಾಖಲೆ ಸ್ಮೃತಿ ಮಂಧಾನ ಹೆಸರಿನಲ್ಲಿದೆ. 2018ರಲ್ಲಿ 49 ಇನ್ನಿಂಗ್ಸ್‌ಗಳಲ್ಲಿ ಮಂಧಾನ 1000 ರನ್ ಗಡಿ ದಾಟಿದ್ದರು. ಇದರೊಂದಿಗೆ ಟಿ20ಐನಲ್ಲಿ ವೇಗದ 1000 ರನ್ ಬಾರಿಸಿದ ವಿಶ್ವದ 10ನೇ ಆಟಗಾರ್ತಿಯಾಗಿ, ಭಾರತದ ಎರಡನೇ ಆಟಗಾರ್ತಿಯಾಗಿ ದಾಖಲೆ ನಿರ್ಮಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications