3 ಭಾರತೀಯರು, 4 ಆಸ್ಟ್ರೇಲಿಯನ್ನರು: ಭಜ್ಜಿ ಆಲ್‌ಟೈಮ್ ಟೆಸ್ಟ್ ತಂಡ ಹೀಗಿದೆ

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದಿಂದ ದೂರವಾಗಿದ್ದಾರೆ. ಆದರೆ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುವ ಭಜ್ಜಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ತಮ್ಮ ಆಲ್ ಟೈಮ್ ಟೆಸ್ಟ್ ತಂಡವನ್ನು ಹೆಸರಿಸಿದ್ದಾರೆ. ಈ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೆಸರಿಸಿರುವ ಈ ತಂಡದಲ್ಲಿ ಮೂವರು ಟೀಮ್ ಇಂಡಿಯಾ ಆಟಗಾರರಿದ್ದಾರೆ. ಅಚ್ಚರಿಯೇನೆಂದರೆ ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಇಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಹಾಗಾದರೆ ಹರ್ಭಜನ್ ಸಿಂಗ್ ಹೆಸರಿಸಿದ ಆಲ್‌ಟೈಮ್ ಟೆಸ್ಟ್ ತಂಡ ಹೇಗಿದೆ ನೋಡೋಣ:

ಆರಂಭಿಕರಲ್ಲಿ ಓರ್ವ ಭಾರತೀಯ
ಹರ್ಭಜನ್ ಸಿಂಗ್ ಆಲ್‌ಟೈಮ್ ಟೆಸ್ಟ್ ತಂಡದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಆರಂಭಿಕ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್‌ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಜೊತೆಯಾಗಿದ್ದಾರೆ.

3,4ನೇ ಕ್ರಮಾಂಕದಲ್ಲಿ ಭಾರತೀಯರು
ಹರ್ಬಜನ್ ಸಿಂಗ್ ಹೆಸರಿಸಿದ ಆಲ್‌ಟೈಮ್ ಬೆಸ್ಟ್ ಟೆಸ್ಟ್ ತಂಡದಲ್ಲಿ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲೂ ಭಾರತದ ಮಾಜಿ ಆಟಗಾರರೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹೆಸರಿಸಲಾಗಿದ್ದು ನಾಲ್ಕನೇ ಕ್ರಮಾಂಕದಲ್ಲಿ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಲೆಜೆಂಡ್
ಸಚಿನ್ ನಂತರದ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಕ್ ಕ್ಯಾಲೀಸ್‌ಗೆ ಸ್ಥಾನವನ್ನು ನೀಡಿದ್ದಾರೆ ಹರ್ಭಜನ್ ಸಿಂಗ್. ಆಲ್‌ರೌಂಡರ್ ಸ್ಥಾನವನ್ನು ತುಂಬಲಿರುವ ಜಾಕ್ ಕ್ಯಾಲಿಸ್ ಟೆಸ್ಟ್‌ನಲ್ಲಿ 13289 ರನ್ ಗಳಿಸಿದ್ದರೆ, 292 ವಿಕೆಟ್ ಪಡೆದು ಮಿಂಚಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಬೆಸ್ಟ್ ಆಲ್‌ರೌಂಡರ್ ಎನಿಸಿದ್ದಾರೆ ಜಾಕ್ ಕ್ಯಾಲೀಸ್.

ಆಸಿಸ್ ಮಾಜಿ ನಾಯಕನೇ ಬೆಸ್ಟ್ ಕ್ಯಾಪ್ಟನ್
ಹರ್ಭಜನ್ ಸಿಂಗ್ ಬೆಸ್ಟ್ ಟೆಸ್ಟ್ ತಂಡವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮುನ್ನಡೆಸಲಿದ್ದಾರೆ. ಆದರೆ ಹರ್ಭಜನ್ ಸಿಂಗ್ ಈ ತಂಡದಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ರ್ಯಾನ್ ಲಾರಾ, ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್‌ನ ಕೆವಿನ್ ಪೀಟರ್‌ಸನ್ ಅವರನ್ನು ಪರಿಗಣಿಸದಿರುವುದು ಅಚ್ಚರ ಮೂಡಿಸಿದೆ.

ವಿಕೆಟ್ ಕೀಪಿಂಗ್ ಯಾರು?
ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ಶ್ರೀಲಂಕಾದ ಕುಮಾರ್ ಸಂಗಕ್ಕರ ಅವರಿಗೆ ನೀಡಲಾಗಿದೆ. ಆಸ್ಟ್ರೇಲಿಯಾದ ಗ್ರೇಟ್ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್‌ಅವರು ಅತ್ಯುತ್ತಮ ವಿಕೆಟ್ ಕೀಪರ್ ಆಗಿದ್ದರೂ ಟೆಸ್ಟ್ ದಾಖಲೆಗಳನ್ನು ಗಮನಿಸಿದರೆ ಸಂಗಕ್ಕರ ಅತ್ಯುತ್ತಮ ಆಯ್ಕೆಯಾಗಿದೆ.

ಬೌಲರ್‌ಗಳು ಯಾರು?
ಬೌಲಿಂಗ್ ವಿಭಾಗದ ನೇತೃತ್ವವನ್ನು ಹರ್ಭಜನ್ ಸಿಂಗ್ ಶಾನ್ ಪೊಲಾಕ್ ಅವರಿಗೆ ನೀಡಿದ್ದಾರೆ. ಪಾಕಿಸ್ಥಾನದ ವೇಗಿ ವಾಸಿಮ್ ಅಕ್ರಮ್, ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾಥ್ ಸ್ಥಾನವನ್ನು ಪಡೆದುಕೊಂಡಿದ್ದು ಆಸಿಸ್ ಸ್ಪಿನ್ನರ್ ಶೇನ್ ವಾರ್ನ್ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆಗಿದ್ದಾರೆ.

ಹರ್ಭಜನ್ ಸಿಂಗ್ ಟೆಸ್ಟ್ XI
ವೀರೇಂದ್ರ ಸೆಹ್ವಾಗ್, ಮ್ಯಾಥ್ಯೂ ಹೇಡನ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಜಾಕ್ವೆಸ್ ಕಾಲಿಸ್, ರಿಕಿ ಪಾಂಟಿಂಗ್ (ನಾಯಕ), ಕುಮಾರ್ ಸಂಗಕ್ಕಾರ (ವಿಕೆಟ್ ಕೀಪರ್), ಶಾನ್ ಪೊಲಾಕ್, ಶೇನ್ ವಾರ್ನ್, ವಾಸಿಮ್ ಅಕ್ರಮ್, ಗ್ಲೆನ್ ಮೆಕ್‌ಗ್ರಾತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications