ಹೀಗೂ ವಿಕೆಟ್ ಕಳೆದುಕೊಂಡಿದ್ದಾರೆ!! ಏಕದಿನ ಕ್ರಿಕೆಟ್‌ನ ಮೂರು ವಿಚಿತ್ರ 'ಔಟ್'ಗಳು
ಏಕದಿನ ವಿಶ್ವಕಪ್ ಟೂರ್ನಿ ಅಂತಿಮ ಘಟ್ಟವನ್ನು ತಲುಪುತ್ತಿದೆ. ಲೀಗ್ ಹಂತದಲ್ಲಿ ಇನ್ನು ಕೆಲವೇ ಪಂದ್ಯಗಳು ಮಾತ್ರವೇ ಬಾಕಿಯಿದ್ದು ಸೆಮಿಫೈನಲ್‌ಗೇರಲು ತಂಡಗಳ ಮಧ್ಯೆ ಬಿರುಸಿನ ಸ್ಪರ್ಧೆ ತೀವ್ರಗೊಂಡಿದೆ. ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ಅಭಿಮಾನಿಗಳಿಂದ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರೂ ಪ್ರಸ್ತುತ ಅಭಿಮಾನಿಗಳು ಪ್ರತಿ ಪಂದ್ಯವನ್ನು ಕೂಡ ಕುತೂಹಲದಿಂದ ಕಾಯುವಂತಾಗಿದೆ. ಇಂಥಾ ಸಂದರ್ಭದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯ ಕುತೂಹಲಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಶ್ರೀಲಂಕಾದ ಅನುಭವಿ ಆಟಗಾರ ಏಂಜಲೋ ಮ್ಯಾಥ್ಯೂಸ್ ವಿಕೆಟ್ ಕಳೆದುಕೊಂಡು ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಕ್ಯಾಚ್ ನೀಡಿ, ಬೌಲ್ಡ್ ಆಗಿ, ಎಲ್‌ಬಿಡಬ್ಲ್ಯು ರನೌಟ್ ಹೀಗೆ ವಿಕೆಟ್ ಕಳೆದುಕೊಳ್ಳುತ್ತಾರೆ. ಅಪರೂಪಕ್ಕೆ ಎನ್ನುವಂತೆ ಹಿಟ್ ವಿಕೆಟ್ ಆಗಿ, ಮಂಕಡಿಂಗ್ ಮೂಲಕವೂ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾರೆ.
ಆದರೆ ಏಕದಿನ ಕ್ರಿಕೆಟ್‌ನಲ್ಲಿ ಇವುಗಳನ್ನು ಹೊರತುಪಡಿಸಿಯೂ ಬ್ಯಾಟರ್‌ಗಳು ವಿಕೆಟ್ ಕಳೆದುಕೊಳ್ಳುವ ಸಾಧ್ಯತೆಗಳು ಇದೆ. ಅಂಥಾ ಅಪರೂಪದ ನಿಯಮಗಳು ಹಾಗೂ ಸನ್ನಿವೇಶಗಳ ವಿವರಣೆ ಇಲ್ಲಿದೆ. ಮುಂದೆ ಓದಿ..

ಟೈಮ್‌ಡ್ ಔಟ್ ಮೂಲಕ ಔಟಾದ ಮೊದಲ ಕ್ರಿಕೆಟಿಗ ಏಂಜಲೋ ಮ್ಯಾಥ್ಯೂಸ್
2023ರ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಅನುಭವಿ ಆಲ್‌ರೌಂಡರ್ ಆಟಗಾರ ಏಂಜಲೋ ಮ್ಯಾಥ್ಯೂಸ್ ಇತಿಹಾಸದ ಪುಟ ಸೇರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಪ್ರಥಮ ಬಾರಿಗೆ ಟೈಮ್‌ಡ್ ಔಟ್ ಆಗುವ ಮೂಲಕ ಏಂಜಲೋ ಮ್ಯಾಥ್ಯೂಸ್ ವಿಕೆಟ್ ಕಳೆದುಕೊಂಡರು. ಟೈಮ್‌ಡ್ ಔಟ್ ನಿಯಮದ ಪ್ರಕಾರ ಹೊಸ ಬ್ಯಾಟರ್ ಎರಡು ನಿಮಿಷದ ಒಳಗೆ ಕ್ರೀಸ್‌ಗೆ ಬಂದು ಮುಂದಿನ ಎಸೆತವನ್ನು ಎದುರಿಸಲು ಸಿದ್ಧವಾಗಿರಬೇಕು. ಇಲ್ಲವಾದರೆ ಆ ಆಟಗಾರನನ್ನು ಟೈಮ್‌ಡ್ ಔಟ್ ಎಂದು ಘೋಷಿಸಲಾಗುತ್ತದೆ. ಎಂಸಿಸಿ ನಿಯಮದ ಪ್ರಕಾರ ಉಳಿದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮೂರು ನಿಮಿಷಗಳ ಕಾಲಾವಕಾಶ ಬ್ಯಾಟರ್‌ಗೆ ಇದೆ.
ಫೀಲ್ಡಿಂಗ್‌ಗೆ ಅಡಚಣೆ ಮಾಡಿ ಔಟ್(obstructing the field)
ಬ್ಯಾಟರ್ ಫೀಲ್ಡಿಂಗ್‌ಗೆ ಅಡಚಣೆ ಮಾಡುವ ಮೂಲಕ ವಿಕೆಟ್ ಕಳೆದುಕೊಳ್ಳುವುದು ಮತ್ತೊಂದು ವಿಚಿತ್ರವಾಗಿ ವಿಕೆಟ್ ಕಳೆದುಕೊಳ್ಳುವ ಸಾಧ್ಯತೆ. ಬ್ಯಾಟರ್ ರನ್‌ಗಾಗಿ ಓಡುವಾಗ ತಾನು ಔಟ್ ಆಗುವುದನ್ನು ತಪ್ಪಿಸಲು ಚೆಂಡನ್ನು ಉದ್ದೇಶಪೂರ್ವಕವಾಗಿ ತಡೆದರೆ, ಅಥವಾ ಉದ್ದೇಶಪೂರ್ವಕವಾಗಿ ಚೆಂಡು ಫೀಲ್ಡರ್ ಕೈಗೆ ಸಿಗದಂತೆ ಬ್ಯಾಟ್‌ನಿಂದ ಅಥವಾ ಕಾಲಿನಿಂದ ಚೆಂಡನ್ನು ತಳ್ಳಿದರೆ ಆಗ ಬ್ಯಾಟರ್ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ. ಇನ್‌ಜಮಾಮ್ ಉಲ್ ಹಕ್ ಭಾರತದ ವಿರುದ್ಧ ಒಂದು ಪಂದ್ಯದಲ್ಲಿ ಈ ಮಾದರಿಯಲ್ಲಿ ವಿಕೆಟ್ ಕಳೆದುಕೊಂಡಿದ್ದರು. ಇತ್ತೀಚೆಗೆ ಅಂದರೆ 2021ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ದನುಷ್ಕ ಗುಣತಿಲಕ ಇದೇ ಮಾದರಿಯಲ್ಲಿ ವಿಕೆಟ್ ಕಳೆದುಕೊಂಡಿದ್ದರು.
ಹ್ಯಾಂಡ್ಲೆಡ್ ದಿ ಬಾಲ್(Handled the ball)
ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಬ್ಯಾಟರ್ ಚೆಂಡು ಡೆಡ್ ಆಗುವವರೆಗೆ ಕೈಯಲ್ಲಿ ಚೆಂಡನ್ನು ಮುಟ್ಟುವಂತಿಲ್ಲ. ಹಾಗೇನಾದರೂ ಮಾಡಿದಲ್ಲಿ ಅದನ್ನು ಔಟ್ ಎಂದು ನಿರ್ಧರಿಸಬಹುದು. 2015ರಲ್ಲಿ ಜಿಂಬಾಬ್ವೆಯ ಆಟಗಾರ ಚಮು ಚಿಭಾಭ ಈ ಮಾದರಿಯಲ್ಲಿ ವಿಕೆಟ್ ಕಳೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications