Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIDE ಶ್ರೇಯಾಂಕಿತ ಆಟಗಾರನಿಗೆ ಸೋಲಿನ ರುಚಿ ತೋರಿಸಿದ ಭಾರತದ 3 ವರ್ಷದ ಸರ್ವಜ್ಞ

ಭಾರತದ ಚೆಸ್ ಪಟುಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಮಧ್ಯಪ್ರದೇಶದ ಚಿಕ್ಕ ಪೋರ ಸರ್ವಜ್ಞ ಸಿಂಗ್ ಕುಶ್ವಾಹ ಚೆಸ್‌ ಲೋಕದಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸುವುದರ ಜೊತೆಗೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಮಧ್ಯ ಪ್ರದೇಶದ ಸಾಗರ ಜಿಲ್ಲೆಯ ಸರ್ವಜ್ಞ ತಮ್ಮ 3 ವರ್ಷ, 7 ತಿಂಗಳು, 22 ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇವರು ಚದುರಂಗದಾಟದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ಸರ್ವಜ್ಞ 30 ವರ್ಷದ FIDE-ರೇಟೆಡ್ ಆಟಗಾರನನ್ನು ಸೋಲಿಸಿದರು. ಈ ಮೂಲಕ ಈ ಸಾಧನೆಯನ್ನು ಮಾಡಿದ ವಿಶ್ವದ ಕಿರಿಯ ಆಟಗಾರ ಎಂಬ ಹಿರಿಮಗೆ ಪಾತ್ರರಾಗಿದ್ದಾರೆ. ಫಿಡೆ ಶ್ರೇಯಾಂಕಿತರನ್ನು ಮಣಿಸಿದ ವಿಶ್ವದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಸರ್ವಜ್ಞ ಅವರದ್ದಾಗಿದೆ. ಇವರ ಆಟದ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿವೆ.

3-Year-Old Sarvagna Singh Kushwaha Becomes World s Youngest to Beat FIDE Rated Player

ಚಿಕ್ಕ ಪೋರ ಹೇಗೆ ಇಷ್ಟೊಂದು ಚೆನ್ನಾಗಿ ಆಡುತ್ತದೆ ಎಂದು ಚರ್ಚೆಗಳು ಆರಂಭವಾಗುತ್ತಿವೆ. ಸರ್ವಜ್ಞ ಅವರ ಈ ಸಾಧನೆಯನ್ನು ಅಂತಾರಾಷ್ಟ್ರೀಯ ಚೆಸ್‌ ವೇದಿಕೆಯಲ್ಲಿ ದೊಡ್ಡ ದಾಖಲೆ ಎಂದು ಬಣ್ಣಿಸಲಾಗುತ್ತಿದೆ.

ವಿಶ್ವಾದ್ಯಂತ ಆಟಗಾರರಿಗೆ ಶ್ರೇಯಾಂಕಗಳನ್ನು ಬಿಡುಗಡೆ ಮಾಡುತ್ತದೆ. ಚೆಸ್ ಆಟಗಾರರು ಈ ಶ್ರೇಯಾಂಕವನ್ನು ಸಾಧಿಸಲು ಕನಿಷ್ಠ ಒಬ್ಬ ಅಂತಾರಾಷ್ಟ್ರೀಯ ರೇಟಿಂಗ್ ಆಟಗಾರನನ್ನು ಮಣಿಸಬೇಕಾಗುತ್ತದೆ. ಈ ಸಾಧನೆಯನ್ನು ಮಧ್ಯಪ್ರದೇಶದ ಸರ್ವಜ್ಞ ಮೂರು ಬಾರಿ ಮಾಡಿದ್ದಾರೆ. ಸಾಗರ್‌ ಆನ್‌ಲೈನ್‌ನಲ್ಲಿ ರೇಟಿಂಗ್‌ ಗಳಿಸಿದರು. ಅವರು ಸ್ವದೇಶ್ ಅಕಾಡೆಮಿಯ ಒಲಿಂಪಿಯಾಡ್ ಸ್ಪೋರ್ಟ್ಸ್ ಅರೆನಾದಲ್ಲಿ ಪ್ರತಿದಿನ ಅಭ್ಯಾಸ ಮಾಡುತ್ತಾರೆ.

ಸರ್ವಜ್ಞ ಅವರ ಆಟದ ಧಾಟಿಗೆ ಹಲವು ಅನುಭವಿ ಆಟಗಾರರ ಬೆರಗಾಗಿದ್ದಾರೆ. ಅಲ್ಲದೆ ಜನರು ಇವರನ್ನು ಭವಿಷ್ಯದ ಗ್ರ್ಯಾಂಡ್‌ ಮಾಸ್ಟರ್‌ ಎಂದು ಬಣ್ಣಿಸಲು ಆರಂಭಿಸಿದ್ದಾರೆ. ಇವರ ಚೆಸ್ ಬೋರ್ಡ್‌ನಲ್ಲಿ ದಳಗಳನ್ನು ಬಿಡುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

Story first published: Thursday, December 4, 2025, 23:27 [IST]
Other articles published on Dec 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+